ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India Economy: ಭಾರತ ಇದೀಗ ವಿಶ್ವದ 4ನೇ ದೊಡ್ಡ ಆರ್ಥಿಕತೆ, ಜಪಾನನ್ನೂ ಹಿಂದಿಕ್ಕಿದ ಇಂಡಿಯಾ

4.18 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ, ಭಾರತವು ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ ಮತ್ತು ಮುಂದಿನ 2.5 ರಿಂದ 3 ವರ್ಷಗಳಲ್ಲಿ ಜರ್ಮನಿಯನ್ನು ಹಿಂದಿಕ್ಕಲಿದೆ. 2030ರ ವೇಳೆಗೆ ಭಾರತವು ಜರ್ಮನಿಯನ್ನ ಹಿಂದಿಕ್ಕಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗಬಹುದು ಎಂದು ಅಂದಾಜಿಸಲಾಗಿದೆ, ಆಗ ಅದರ ಜಿಡಿಪಿ 7,300 ಬಿಲಿಯನ್ ಯುಎಸ್ ಡಾಲರ್ ತಲುಪುವ ನಿರೀಕ್ಷೆಯಿದೆ.

ನವದೆಹಲಿ, ಡಿ.31: ವಿಶ್ವದ ನಾಲ್ಕನೇಯ ಅತಿ ದೊಡ್ಡ ಆರ್ಥಿಕತೆಯನ್ನು (Economy) ಹೊಂದಿದ ದೇಶವಾಗಿ ಭಾರತ (India) ಹೊರಹೊಮ್ಮಿದೆ. ಆರ್ಥಿಕ ಸುಧಾರಣೆಗಳಿಂದ ಭಾರತ ಜಪಾನ್‌ (Japan) ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಭಾರತದ ಒಟ್ಟು ದೇಶೀಯ ಉತ್ಪನ್ನ (GDP) ಗಾತ್ರವು ಈ ವರ್ಷ 4.18 ಟ್ರಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ.

4.18 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ, ಭಾರತವು ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ ಮತ್ತು ಮುಂದಿನ 2.5 ರಿಂದ 3 ವರ್ಷಗಳಲ್ಲಿ ಜರ್ಮನಿಯನ್ನು ಹಿಂದಿಕ್ಕಲಿದೆ. 2030ರ ವೇಳೆಗೆ ಭಾರತವು ಜರ್ಮನಿಯನ್ನ ಹಿಂದಿಕ್ಕಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗಬಹುದು ಎಂದು ಅಂದಾಜಿಸಲಾಗಿದೆ, ಆಗ ಅದರ ಜಿಡಿಪಿ 7,300 ಬಿಲಿಯನ್ ಯುಎಸ್ ಡಾಲರ್ ತಲುಪುವ ನಿರೀಕ್ಷೆಯಿದೆ.

2025-26ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಭಾರತದ ನೈಜ ಜಿಡಿಪಿ ಬೆಳವಣಿಗೆ ಶೇಕಡಾ 8.2 ರಷ್ಟಿತ್ತು. ಈ ಅಂಕಿ ಅಂಶವು ಮೊದಲ ತ್ರೈಮಾಸಿಕದಲ್ಲಿ ಶೇಕಡಾ 7.8 ಮತ್ತು ಹಿಂದಿನ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 7.4 ಕ್ಕಿಂತ ಹೆಚ್ಚಾಗಿದೆ. ಇದು ಆರು ತ್ರೈಮಾಸಿಕಗಳಲ್ಲಿ ಅತ್ಯಧಿಕ ಬೆಳವಣಿಗೆಯ ದರವಾಗಿದ್ದು, ಜಾಗತಿಕ ವ್ಯಾಪಾರ ಅನಿಶ್ಚಿತತೆಯ ಹೊರತಾಗಿಯೂ ಭಾರತದ ಆರ್ಥಿಕತೆಯ ಬಲವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿಕೆ ತಿಳಿಸಿದೆ.

India's GDP: ಅಮೆರಿಕಕ್ಕೆ ರಫ್ತು ಕುಸಿತಕ್ಕೀಡಾಗಿದ್ದರೂ, ಭಾರತದ ಎರಡನೇ ತ್ರೈಮಾಸಿಕ ಜಿಡಿಪಿ ಬೆಳವಣಿಗೆ 8.2% ಕ್ಕೆ ಏರಿಕೆ!

ದೇಶೀಯ ಬೇಡಿಕೆ, ವಿದೇಶಿ ಹೂಡಿಕೆ, ಹಣದುಬ್ಬರ ಇಳಿಕೆ, ನಿರುದ್ಯೋಗ ಇಳಿಕೆ, ರಫ್ತು ಹೆಚ್ಚಳ ಕಾರಣದಿಂದ ದೇಶದ ಜಿಡಿಪಿ ದರ ಏರಿಕೆಯಾಗಿದೆ. ವಾಣಿಜ್ಯ ವಲಯಕ್ಕೆ ಆರೋಗ್ಯಕರ ಸಾಲದ ಹರಿವಿನೊಂದಿಗೆ ಹಣಕಾಸಿನ ಪರಿಸ್ಥಿತಿಗಳು ಅನುಕೂಲಕರವಾಗಿವೆ ಎಂದು ಸರ್ಕಾರ ತಿಳಿಸಿದೆ.

ಯಾವ ದೇಶದ ಜಿಡಿಪಿ ಗಾತ್ರ ಎಷ್ಟು?

(ಟ್ರಿಲಿಯನ್‌ ಡಾಲರ್‌ ಲೆಕ್ಕದಲ್ಲಿ)

  1. ಅಮೆರಿಕ – 30.507
  2. ಚೀನಾ – 19.213
  3. ಜರ್ಮನಿ – 4.744
  4. ಭಾರತ – 4.744
  5. ಜಪಾನ್‌ – 4.186
  6. ಯುಕೆ – 3.839
  7. ಫ್ರಾನ್ಸ್‌ – 3.211
  8. ಇಟಲಿ – 2.422
  9. ಕೆನಡಾ – 2.225
  10. ಬ್ರೆಜಿಲ್‌ – 2.125

ಹರೀಶ್‌ ಕೇರ

View all posts by this author