ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

79th Independence Day: 79ನೇ ಸ್ವಾತಂತ್ರ್ಯ ದಿನದ ಸಂಭ್ರಮ; ಸತತ 12ನೇ ಬಾರಿಗೆ ಕೆಂಪುಕೋಟೆಯ ಮೇಲೆ ಧ್ವಜಾರೋಹಣ ಮಾಡಲಿರುವ ಮೋದಿ

ಇಂದು ದೇಶಾದ್ಯಂತ 79ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ. ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ, ದೇಶವನ್ನುದ್ದೇಶಿ ಮಾತನಾಡಲಿದ್ದಾರೆ. ಆಪರೇಷನ್ ಸಿಂದೂರ ಕೈಗೊಂಡು ವಿಜಯ ಸಾಧಿಸಿದ ಬಳಿಕ ಇದು ಮೊದಲ ಸ್ವಾತಂತ್ರ್ಯ ದಿನವಾಗಿದ್ದು, ಆಪರೇಷನ್‌ ಸಿಂದೂರ ಆಧರಿಸಿ ನವ ಭಾರತ ಥೀಮ್‌ನಲ್ಲಿ ದಿನಾಚರಣೆ ನಡೆಯಲಿದೆ.

ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಲಿರುವ ಮೋದಿ

Vishakha Bhat Vishakha Bhat Aug 15, 2025 7:09 AM

ನವದೆಹಲಿ: ಇಂದು ದೇಶಾದ್ಯಂತ 79ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ. ಪ್ರಧಾನಿ ನರೇಂದ್ರ ಮೋದಿ (79th Independence Day) ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ, ದೇಶವನ್ನುದ್ದೇಶಿ ಮಾತನಾಡಲಿದ್ದಾರೆ. ಆಪರೇಷನ್ ಸಿಂದೂರ ಕೈಗೊಂಡು ವಿಜಯ ಸಾಧಿಸಿದ ಬಳಿಕ ಇದು ಮೊದಲ ಸ್ವಾತಂತ್ರ್ಯ ದಿನವಾಗಿದ್ದು, ಆಪರೇಷನ್‌ ಸಿಂದೂರ ಆಧರಿಸಿ ನವ ಭಾರತ ಥೀಮ್‌ನಲ್ಲಿ ದಿನಾಚರಣೆ ನಡೆಯಲಿದೆ. ಪ್ರಧಾನಿ ಮೋದಿಯವರು ಬೆಳಗ್ಗೆ ಸುಮಾರು 7.30ಕ್ಕೆ ಧ್ವಜಾರೋಹಣ ನಡೆಸಲಿದ್ದಾರೆ. 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ಎಂಬ ಸರ್ಕಾರದ ದೃಷ್ಟಿಕೋನವನ್ನು ಸಾಕಾರಗೊಳಿಸುವತ್ತ ದೇಶವು ವೇಗವಾಗಿ ಸಾಗುತ್ತಿರುವುದರಿಂದ, ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ವಿಷಯವನ್ನು “ನವ ಭಾರತ” ಎಂದು ಇರಿಸಲಾಗಿದೆ.

ಕೆಂಪು ಕೋಟೆಗೆ ಆಗಮಿಸಿದಾಗ, ಪ್ರಧಾನಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಖಾತೆ ರಾಜ್ಯ ಸಚಿವ ಸಂಜಯ್ ಸೇಠ್ ಮತ್ತು ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಸ್ವಾಗತಿಸಲಿದ್ದಾರೆ. ರಕ್ಷಣಾ ಕಾರ್ಯದರ್ಶಿ ದೆಹಲಿ ಪ್ರದೇಶದ ಜನರಲ್ ಆಫೀಸರ್ ಕಮಾಂಡಿಂಗ್ (ಜಿಒಸಿ) ಲೆಫ್ಟಿನೆಂಟ್ ಜನರಲ್ ಭವ್ನೀಶ್ ಕುಮಾರ್ ಅವರನ್ನು ಪ್ರಧಾನಿಗೆ ಪರಿಚಯಿಸಲಿದ್ದಾರೆ. ನಂತರ, ದೆಹಲಿ ಪ್ರದೇಶದ ಜಿಒಸಿ ನರೇಂದ್ರ ಮೋದಿಯವರನ್ನು ಗೌರವ ವೇದಿಕೆಗೆ ಕರೆದೊಯ್ಯಲಿದ್ದಾರೆ, ಅಲ್ಲಿ ಅಂತರ-ಸೇವೆಗಳು ಮತ್ತು ದೆಹಲಿ ಪೊಲೀಸ್ ಗಾರ್ಡ್‌ಗಳ ಜಂಟಿ ತುಕಡಿಯು ಪ್ರಧಾನ ಮಂತ್ರಿಯವರಿಗೆ ಗೌರವ ವಂದನೆ ಸಲ್ಲಿಸಲಿದೆ. ಇದಾದ ನಂತರ, ಪ್ರಧಾನ ಮಂತ್ರಿಗಳು ಗೌರವ ವಂದನೆಯನ್ನು ಸ್ವೀಕರಿಸಲಿದ್ದಾರೆ.

ಈ ಸುದ್ದಿಯನ್ನೂ ಓದಿ: Narendra Modi: ತೆರಿಗೆ ವಿವಾದದ ಮಧ್ಯೆಯೇ ಮೋದಿ ಅಮೆರಿಕಾ ಭೇಟಿ; ಟ್ರಂಪ್‌ ಜೊತೆ ಚರ್ಚೆ ಸಾಧ್ಯತೆ

ದೀರ್ಘ ಅವಧಿ ಭಾರತ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದವರ ಪಟ್ಟಿಯಲ್ಲಿ ಇಂದಿರಾ ಗಾಂಧಿಯವರನ್ನು ಹಿಂದಿಕ್ಕಿ ಮೋದಿ ದಾಖಲೆ ಬರೆದಿದ್ದರು. ಇದೀಗ ಸತತ 12ನೇ ಬಾರಿ ಪ್ರಧಾನಿಯಾಗಿ ಸ್ವಾತಂತ್ರ್ಯೋತ್ಸವದ ಭಾಷಣ ಮಾಡುವ ಮೂಲಕ ಇಂದಿರಾ ಗಾಂಧಿಯವರ ಮತ್ತೊಂದು ದಾಖಲೆ ಮುರಿಯಲಿದ್ದಾರೆ. ಇಂದಿರಾ ಗಾಂಧಿ ಪ್ರಧಾನಿಯಾಗಿ ಸತತ 11 ಬಾರಿ ಕೆಂಪುಕೋಟೆಯಿಂದ ಸ್ವಾತಂತ್ರ್ಯ ದಿನದ ಭಾಷಣ ಮಾಡಿದರೆ, ಮೋದಿ 12ನೇ ಬಾರಿ ಮಾಡಿ ದಾಖಲೆ ನಿರ್ಮಿಸಲಿದ್ದಾರೆ. ಪಂ.ಜವಾಹರಲಾಲ್‌ ನೆಹರು 17 ಸಲ ಭಾಷಣ ಮಾಡಿದ್ದರು.