ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

79th Independence Day: ಭಾರತ ಯಾರ ಬೆದರಿಕೆಗೆ ಮಣಿದಿಲ್ಲ, ಮಣಿಯುವುದೂ ಇಲ್ಲ; ಕೆಂಪು ಕೋಟೆಯಲ್ಲಿ ಗುಡುಗಿದ ಮೋದಿ

79ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. ರಾಷ್ಟ್ರದ ಜನತೆಗೆ ಅವರು ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದ್ದಾರೆ. ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದ ಮೋದಿ, ದೇಶಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಿದ್ದಾರೆ.

ಕೆಂಪು ಕೋಟೆಯಲ್ಲಿ ಮೋದಿ ಹೇಳಿದ್ದೇನು?

Vishakha Bhat Vishakha Bhat Aug 15, 2025 8:12 AM

79ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. ರಾಷ್ಟ್ರದ ಜನತೆಗೆ ಅವರು ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದ್ದಾರೆ. ದೇಶವಾಸಿಗಳನ್ನುದ್ದೇಶಿಸಿ ಮಾತನಾಡಿದ ಮೋದಿ, ದೇಶಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸಿದ್ದಾರೆ. ಅವರು ಸ್ವಾತಂತ್ರ್ಯ ದಿನವನ್ನು "140 ಕೋಟಿ ನಿರ್ಣಯಗಳ ಹಬ್ಬ" ಎಂದು ಬಣ್ಣಿಸಿದ್ದು, ಇದು ರಾಷ್ಟ್ರದ ಸಾಮೂಹಿಕ ಸಾಧನೆಗಳು, ಹೆಮ್ಮೆ ಮತ್ತು ಏಕತೆಯನ್ನು ಪ್ರತಿಬಿಂಬಿಸುವ ಕ್ಷಣವಾಗಿದೆ ಎಂದು ಬಣ್ಣಿಸಿದ್ದಾರೆ. ಕೆಂಪು ಕೋಟೆಯ ಮೇಲೆ ನಿಂತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 370ನೇ ವಿಧಿಯನ್ನು ರದ್ದುಪಡಿಸುವುದನ್ನು ರಾಷ್ಟ್ರೀಯ ಏಕತೆಯತ್ತ ಒಂದು ಐತಿಹಾಸಿಕ ಹೆಜ್ಜೆ ಎಂದು ಹೇಳಿದ್ದಾರೆ. ಇದು "ಒಂದು ರಾಷ್ಟ್ರ, ಒಂದು ಸಂವಿಧಾನ"ದ ದೃಷ್ಟಿಕೋನವನ್ನು ಈಡೇರಿಸಿದೆ ಎಂದು ಘೋಷಿಸಿದರು.

ಆಪರೇಷನ್‌ ಸಿಂದೂರದ ಕುರಿತು ಹೆಮ್ಮೆ ವ್ಯಕ್ತಪಡಿಸಿದ ಮೋದಿ, ಮಡದಿ, ಮಕ್ಕಳ ಎದುರು ನಮ್ಮ ಪ್ರಜೆಗಳನ್ನು ಕೊಂದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ನಿಮಗೆ ಪ್ರಮಾಣ ಮಾಡಿದ್ದೆ. ಅದರಂತೆ ನಮ್ಮ ಸೇನೆ ಶತ್ರು ದೇಶದ ಒಳಗೇ ನುಗ್ಗಿ ಉಗ್ರರನ್ನು ಸೆದೆ ಬಡಿದಿದ್ದಾರೆ. ಭಾರತೀಯ ಸಶಸ್ತ್ರ ಪಡೆಗಳಿಗೆ ಸೇಡು ತೀರಿಸಿಕೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಆಪರೇಷನ್‌ ಸಿಂದೂರ ಇನ್ನೂ ನಿಂತಿಲ್ಲ. ಭಾರತದ ತಂಟೆಗೆ ಬಂದರೆ ಏನಾಗುತ್ತದೆ ಎಂಬುದನ್ನು ಜಗತ್ತು ನೋಡಿದೆ ಎಂದು ಅವರು ಹೇಳಿದ್ದಾರೆ.

ಸಿಂದೂ ನದಿಯ ಕುರಿತು ಮಾತನಾಡಿದ ಮೋದಿ ನೀರು ಮತ್ತು ರಕ್ತ ಒಂದೇ ಕಡೆ ಹರಿಯುವುದಿಲ್ಲ ಎಂಬುದನ್ನು ಪುನರುಚ್ಚರಿಸಿದ್ದಾರೆ. ಭಾರತ ಇನ್ನು ಮುಂದೆ ಪರಮಾಣು ಬೆದರಿಕೆಗಳನ್ನು ಸಹಿಸುವುದಿಲ್ಲ. ನಮ್ಮ ತಾಂತ್ರಿಕತೆ ಬೆದರಿಕೆ ಹಾಕುವ ದೇಶಕ್ಕಿಂತ ನೂರು ವರ್ಷ ಮುಂದಿದೆ ಎಂದು ಹೇಳಿದ್ದಾರೆ. ಭೂಕುಸಿತ, ಮೇಘಸ್ಫೋಟ ಮತ್ತು ಇತರ ವಿಪತ್ತುಗಳು ಸೇರಿದಂತೆ ಇತ್ತೀಚಿನ ನೈಸರ್ಗಿಕ ವಿಕೋಪಗಳಿಂದ ಹಾನಿಗೊಳಗಾದವರಿಗೆ ಪ್ರಧಾನಿ ಸಂತಾಪ ಸೂಚಿಸಿದ್ದು, ದೇಶ ಒಗ್ಗಟ್ಟಾಗಿ ನಿಲ್ಲುವ ಸಮಯ ಬಂದಿದೆ ಎಂದರು. ಕಳೆದ ಕೆಲವು ದಿನಗಳಿಂದ ನಾವು ನೈಸರ್ಗಿಕ ವಿಕೋಪಗಳು, ಭೂಕುಸಿತಗಳು, ಮೇಘಸ್ಫೋಟಗಳು ಮತ್ತು ಇತರ ಹಲವು ವಿಪತ್ತುಗಳನ್ನು ಎದುರಿಸುತ್ತಿದ್ದೇವೆ. ಸಂತ್ರಸ್ತ ಜನರೊಂದಿಗೆ ನಮ್ಮ ಸಹಾನುಭೂತಿ ಇದೆ. ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರವು ರಕ್ಷಣಾ ಕಾರ್ಯಾಚರಣೆಗಳು, ಪರಿಹಾರ ಪ್ರಯತ್ನಗಳು ಮತ್ತು ಪುನರ್ವಸತಿ ಕಾರ್ಯಗಳಲ್ಲಿ ಸಂಪೂರ್ಣ ಶಕ್ತಿಯಿಂದ ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ" ಎಂದು ಪ್ರಧಾನಿ ಮೋದಿ ಹೇಳಿದರು.

ಆತ್ಮನಿರ್ಭರ್‌ ಭಾರತ

ಅಮೆರಿಕದ ಸುಂಕ ನೀತಿಗೆ ಮಣಿಯುವುದಿಲ್ಲ ಎಂಬುದನ್ನು ಮೋದಿ ಮತ್ತೆ ಹೇಳಿದ್ದಾರೆ. ಭಾರತ ಯುದ್ಧ ಉಪಕರಣದಿಂದ ಹಿಡಿದೂ ಎಲ್ಲಾ ರೀತಿಯ ಉತ್ಪನ್ನಗಳನ್ನು ಇಲ್ಲಿಯೇ ತಯಾರಿಸಲಾಗುತ್ತಿದೆ. ಆಪರೇಷನ್‌ ಸಿಂದೂರೆದಲ್ಲಿ ಸ್ವದೇಶಿ ಯುದ್ಧ ಉಪಕರಣಗಳನ್ನು ಬಳಸಲಾಗಿದೆ. ಬ್ರಹ್ಮೋಸ್‌ಗೆ ಜಗತ್ತಿನಾದ್ಯಂತ ಬೇಡಿಕೆ ಇದೆ ಎಂದು ಅವರು ತಿಳಿಸಿದರು. ಸ್ವದೇಶಿಕರಣದಿಂದ ನಾವು ಯಾರ ಮುಂದೆಯೂ ತಲೆ ಬಾಗಬೇಕಿಲ್ಲ. ಆತ್ಮನಿರ್ಭರ ಎಂದರೆ ಅದು ನಮ್ಮ ಶಕ್ತಿ ಸಾಮರ್ಥ್ಯ, ಅದು ಕೇವಲ ಆಮದು ರಪ್ತು ಅಲ್ಲ, ದೇಶ ಅಭಿವೃದ್ಧಿಯಾಗಬೇಕಾದರೆ ಆತ್ಮನಿರ್ಭರತೆ ಅನಿವಾರ್ಯ. ಸ್ವಂತ ಶಕ್ತಿಯ ಮೇಲೆ ದೇಶ ಅವಲಂಬಿತವಾಗಬೇಕು. ಆಪರೇಷನ್ ಸಿಂದೂರ್‌ನಲ್ಲೇ ಆತ್ಮನಿರ್ಭರ ಭಾರತದ ಪ್ರದರ್ಶನವಾಗಿದೆ ಎಂದರು.

ಈ ಸುದ್ದಿಯನ್ನೂ ಓದಿ: Narendra Modi: ಮೋದಿ-ವ್ಯಾನ್ಸ್ ದ್ವಿಪಕ್ಷೀಯ ಮಾತುಕತೆ; ವ್ಯಾಪಾರ ಒಪ್ಪಂದಕ್ಕೆ ಆದ್ಯತೆ

ಜಗತ್ತಿನಲ್ಲಿ ತೈಲ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ನಾವು ಸೌರ ಶಕ್ತಿಯನ್ನು ಬಳಸಿ ದೇಶದ ಅಭಿವೃದ್ದಿ ಮಾಡಬೇಕಾಗಿದೆ ಎಂದ ಮೋದಿ, ಇಂದು ಇಡೀ ವಿಶ್ವ ಸೆಮಿಕಂಡಕ್ಟರ್‌ನತ್ತ ನೋಡುತ್ತಿದೆ. ನಾವು 4 ಹೊಸ ಘಟಕಗಳಿಗೆ ಹಸಿರು ನಿಶಾನೆ ತೋರಿದ್ದೇವೆ. ವರ್ಷದ ಅಂತ್ಯದಲ್ಲಿ ಸೆಮಿಕಂಡಕ್ಟರ್ ಭಾರತದಲ್ಲೇ ರೆಡಿಯಾಗುತ್ತದೆ. ಮೆಡ್ ಇನ್ ಇಂಡಿಯಾ ಚಿಪ್ ಸಿದ್ಧಗೊಳಲಿದೆ. ಭಾರತ ಅಣುಶಕ್ತಿಗೂ ಪ್ರಾಮುಖ್ಯತೆ ನೀಡುತ್ತಿದೆ. 10 ಹೊಸ ಅಣು ರಿಯಾಕ್ಟರ್‌ಗಳಿಗೆ ಅವಕಾಶ ನೀಡಿದ್ದೇವೆ. 2027ರಲ್ಲಿ ಭಾರತದ ಅಣುಶಕ್ತಿ 10 ಪಟು ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.