ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nepal: ನೇಪಾಳದ ಗಲಭೆಯಿಂದ ಭಾರತಕ್ಕೆ ತೊಂದರೆ....!;ಯಾಕೆ ಗೊತ್ತಾ..?

ನೇಪಾಳ ಸರ್ಕಾರ ಯೂಟ್ಯೂಬ್, ಫೇಸ್‌ಬುಕ್, ಎಕ್ಸ್ ಸೇರಿ 26 ಸಾಮಾಜಿಕ ಜಾಲತಾಣಗಳ ಮೇಲೆ ಅಲ್ಲಿನ ಹೇರಿದ ನಿರ್ಬಂಧವನ್ನು ಹಿಂದಕ್ಕೆ ತೆಗೆದುಕೊಂಡಿದೆ. ಆದರೂ ಅಲ್ಲಿನ ಪರಿಸ್ಥಿತಿ ಬುದ್ದಿ ಮುಚ್ಚಿದ ಕೆಂಡದಂತಿದ್ದು, ಪ್ರತಿಭಟನೆಯ ಕಾವೂ ಇನ್ನು ಅಲ್ಲಿನ ಜನರನ್ನು ಸುಡುತ್ತಿದೆ. ಈಗಾಗಲೇ ಈ ಗಲಭೆ ಜನರ ಪ್ರಾಣ ತೆತ್ತಿದ್ದು, ಈ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸೂಕ್ತ ಪರಿಹಾರ ಹಾಗೂ ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ನೇಪಾಳದ ಸಂವಹನ, ಮಾಹಿತಿ ಮತ್ತು ಪ್ರಸಾರ ಸಚಿವ ಪೃಥ್ವಿ ಸುಬ್ಬಾ ಗುರುಂಗ್ ತಿಳಿಸಿದ್ದಾರೆ. ಆದರೆ ನೇಪಾಳದಲ್ಲಾದ ಈ ಬೆಳವಣಿಗೆ ಭಾರತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ವಿಮಾನ ಸಂಚಾರಕ್ಕೆ ತೊಂದರೆಯಾದಂತೆ ಕೆಲ ಮೂಲ ಸೌಕರ್ಯಗಳಿಗೆ ಕುತ್ತು ತಂದಿದೆ.

ಸಾಂಧರ್ಬಿಕ ಚಿತ್ರ

ನವದೆಹಲಿ: ನೇಪಾಳದಲ್ಲಿ (Nepal) ನಡೆಯುತ್ತಿರುವ ಯುವಕರ ಪ್ರತಿಭಟನೆಯಿಂದಾಗಿ (Protest) ಭಾರತ-ನೇಪಾಳ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ನೂರಾರು ವಿಮಾನಗಳ (Flight) ಸಂಚಾರವನ್ನು ರದ್ದುಗೊಳಿಸಲಾಗಿದೆ. 26 ಆ್ಯಪ್‌ಗಳ ಮೇಲಿನ ನಿಷೇಧವನ್ನು ತೆರವುಗೊಳಿಸಿದರೂ, 19 ಜನರ ಸಾವಿಗೆ ಕಾರಣವಾದ ಗಲಭೆ ಮುಂದುವರಿದಿದೆ. ಈ ಗಲಭೆಯು ಭಾರತದ (India) ಮೇಲೆ ಗಮನಾರ್ಹ ಪರಿಣಾಮ ಬೀರಿದೆ.

ವಿಮಾನ ಸಂಚಾರಕ್ಕೆ ತೊಂದರೆ

ಕಾಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗಲಭೆಯಿಂದಾಗಿ ಮುಚ್ಚಲಾಗಿದ್ದು, ಇಂಡಿಗೋ, ಏರ್ ಇಂಡಿಯಾ ಮತ್ತು ನೇಪಾಳ ಏರ್‌ಲೈನ್ಸ್‌ನ ದೆಹಲಿ-ಕಾಠ್ಮಂಡು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇಂಡಿಗೋದ ಎರಡು ವಿಮಾನಗಳು ಲಕ್ನೋಗೆ ತೆರಳಿವೆ. ಏರ್ ಇಂಡಿಯಾದ ದಿನನಿತ್ಯದ ಆರು ವಿಮಾನಗಳ ಪೈಕಿ ನಾಲ್ಕನ್ನು ರದ್ದುಗೊಳಿಸಲಾಗಿದೆ. ಇಂಡಿಗೋ ತನ್ನ ಗ್ರಾಹಕರಿಗೆ ಪರ್ಯಾಯ ವಿಮಾನವನ್ನು ಆಯ್ಕೆ ಮಾಡಿಕೊಳ್ಳಲು ಅಥವಾ ಮರುಪಾವತಿಯನ್ನು ಪಡೆಯಲು ಸೂಚಿಸಿದೆ. ವಿಮಾನಯಾನ ವಿಶ್ಲೇಷಣಾ ಸಂಸ್ಥೆ ಸಿರಿಯಮ್ ಪ್ರಕಾರ, ಭಾರತ ಮತ್ತು ಕಾಠ್ಮಂಡು ನಡುವೆ ವಾರಕ್ಕೆ 208 ವಿಮಾನಗಳು ಚಲಿಸುತ್ತವೆ.

ಗಡಿಯಲ್ಲಿ ಭದ್ರತೆ ಹೆಚ್ಚಳ

1,751 ಕಿಮೀ ಉದ್ದದ ಭಾರತ-ನೇಪಾಳ ಗಡಿಯಲ್ಲಿ ಸಶಸ್ತ್ರ ಸೀಮಾ ಬಲ (SSB) ಸಿಬ್ಬಂದಿಯನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ. ಬಿಹಾರದ ರಕ್ಸೌಲ್ ಮತ್ತು ನೇಪಾಳದ ಬೀರಗಂಜ್ ಸಂಪರ್ಕಿಸುವ ಮೈತ್ರಿ ಸೇತುವೆ ಜನರಿಲ್ಲದೆ ಖಾಲಿಯಾಗಿದೆ. ಉತ್ತರ ಪ್ರದೇಶದ ಬಲರಾಂಪುರದಲ್ಲಿ 22 SSB ಚೌಕಿಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಡ್ರೋನ್ ಕ್ಯಾಮೆರಾಗಳಿಂದ ನಿಗಾವಹಿಸಲಾಗುತ್ತಿದೆ. ಲಖಿಂಪುರ್ ಖೇರಿ, ಬಹ್ರೈಚ್ ಮತ್ತು ಮಹಾರಾಜ್‌ಗಂಜ್‌ನಲ್ಲಿ ಗಸ್ತು ತೀವ್ರಗೊಳಿಸಲಾಗಿದೆ. ಮಹಾರಾಜ್‌ಗಂಜ್‌ನ ಸೋನೌಲಿ ಗಡಿಯಲ್ಲಿ ಶ್ವಾನ ದಳದೊಂದಿಗೆ ವಿಶೇಷ ತಪಾಸಣೆ ನಡೆಯುತ್ತಿದೆ. ‘ಆಪರೇಷನ್ ಕವಚ್’ ಸಮಿತಿಗಳು ಗಡಿಯಾಚೆಗಿನ ಚಲನವಲನಗಳ ಮೇಲೆ ತೀವ್ರ ನಿಗಾವಹಿಸುತ್ತಿವೆ.

ಈ ಸುದ್ದಿಯನ್ನು ಓದಿ: Viral Video: ಊಟ ಹೇಗಿದೆ ಎಂದು ಕೇಳಿದ ವೇಟರ್‌ಗೆ ಮಹಿಳೆ ಮಾಡಿದ್ದೇನು ಗೊತ್ತಾ? ವಿಡಿಯೋ ನೋಡಿ

ಭಾರತದ ಸಲಹೆ

ವಿದೇಶಾಂಗ ವ್ಯವಹಾರ ಸಚಿವಾಲಯ (MEA) ಭಾರತೀಯ ನಾಗರಿಕರಿಗೆ ನೇಪಾಳಕ್ಕೆ ಪ್ರಯಾಣವನ್ನು ಮುಂದೂಡುವಂತೆ ಸೂಚಿಸಿದೆ. ನೇಪಾಳದಲ್ಲಿರುವ ಭಾರತೀಯರಿಗೆ ಮನೆಯಿಂದ ಹೊರಗೆ ಹೋಗದಂತೆ ಮತ್ತು ಸ್ಥಳೀಯ ಸುರಕ್ಷತಾ ಸೂಚನೆಗಳನ್ನು ಪಾಲಿಸುವಂತೆ ತಿಳಿಸಲಾಗಿದೆ. ತುರ್ತು ಸಂದರ್ಭಕ್ಕಾಗಿ ಭಾರತೀಯ ರಾಯಭಾರ ಕಚೇರಿಯ ಸಂಪರ್ಕ ಸಂಖ್ಯೆಗಳಾದ +977-9808602881 ಮತ್ತು +977-9810326134 ಅನ್ನು ಒದಗಿಸಲಾಗಿದೆ.

ನೇಪಾಳದಲ್ಲಿ 26 ಆ್ಯಪ್‌ಗಳ ನಿಷೇಧದಿಂದ ಗಡಿಯಾಚೆಗಿನ ಸಂವಹನ ವೆಚ್ಚ ಹೆಚ್ಚಾಗಿದೆ. ISD ಕರೆಗಳಿಗೆ ಪ್ರತಿ ನಿಮಿಷಕ್ಕೆ 7 ರೂ. ವೆಚ್ಚವಾಗುತ್ತಿದ್ದು, ಗಡಿಯಾಚೆಗಿನ ಕುಟುಂಬಗಳಿಗೆ ತೊಂದರೆಯಾಗಿದೆ. “ಸಾಮಾಜಿಕ ಮಾಧ್ಯಮವೇ ಸಂಪರ್ಕದ ಪ್ರಮುಖ ಮಾರ್ಗವಾಗಿತ್ತು, ಈಗ ಜನರು ಕಂಗಾಲಾಗಿದ್ದಾರೆ” ಎಂದು ಮಹಾರಾಜ್‌ಗಂಜ್‌ನ ಸೋನೌಲಿಯ ನಿವಾಸಿ ಆಕಾಶ್ ಪಾಂಡೆ ತಿಳಿಸಿದ್ದಾರೆ.