Viral Video: ಊಟ ಹೇಗಿದೆ ಎಂದು ಕೇಳಿದ ವೇಟರ್‌ಗೆ ಮಹಿಳೆ ಮಾಡಿದ್ದೇನು ಗೊತ್ತಾ? ವಿಡಿಯೋ ನೋಡಿ
Waiter Asks for Food Review: ರೆಸ್ಟೋರೆಂಟ್‍ಗಳಿಗೆ ಊಟಕ್ಕೆ ಹೋದಾಗ ಟೇಸ್ಟ್ ಹೇಗಿತ್ತು ಎಂಬುದನ್ನು ಕೇಳುವುದು ಸಾಮಾನ್ಯ. ಇಷ್ಟವಾದರೆ ಚೆನ್ನಾಗಿದೆ ಅಂದರೆ, ಆಹಾರ ರುಚಿಕರವಾಗಿರದಿದ್ದರೆ ಕೆಲವು ಗ್ರಾಹಕರು ಬೈದು ಬಿಡುತ್ತಾರೆ. ಇದೀಗ ಮಹಿಳೆಯೊಬ್ಬಳ ಬಳಿ ಇದೇ ಪ್ರಶ್ನೆ ಕೇಳಿದಾಗ ಆಕೆ ನೀಡಿದ ಪ್ರತಿಕ್ರಿಯೆಯು ನೆಟ್ಟಿಗರನ್ನು ರಂಜಿಸಿದೆ.

-

ದೆಹಲಿ: ಯಾವುದೇ ರೆಸ್ಟೋರೆಂಟ್ (restaurant) ಗೆ ಹೋದಾಗ ಅಲ್ಲಿನ ಸಿಬ್ಬಂದಿ ಊಟವಾದ ಬಳಿಕ, ಹೇಗಿತ್ತು ಊಟ ಎಂದು ಫೀಡ್‍ಬ್ಯಾಕ್ ಕೇಳುವುದು ಸಾಮಾನ್ಯ. ಇದೀಗ ವೇಟರ್ ಒಬ್ಬರು ಗ್ರಾಹಕಿ ಬಳಿ ಇದೇ ಪ್ರಶ್ನೆಯನ್ನು ಕೇಳಿದ್ದಾನೆ. ಆಕೆ ನೀಡಿದ ಉತ್ತರದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಇದು ನೆಟ್ಟಿಗರನ್ನು ರಂಜಿಸಿದ್ದು, ಭಾರಿ ಕುತೂಹಲ ಮೂಡಿಸಿದೆ. ಅಷ್ಟಕ್ಕೂ ಮಹಿಳೆಯ ಉತ್ತರ ಹೇಗಿತ್ತು ಎಂಬುದನ್ನು ತಿಳಿಯಬೇಕಾ? ಹಾಗಿದ್ದರೆ ಮುಂದೆ ಓದಿ.
ವಿಡಿಯೊದಲ್ಲಿ, ಮಹಿಳಾ ಗ್ರಾಹಕಿ ಬಳಿ ಹೋಗುವ ಒಬ್ಬ ವೇಟರ್ ಊಟ ಹೇಗಿದೆ, ಚೆನ್ನಾಗಿದೆಯಾ ಎಂದು ಕೇಳಿದ್ದಾನೆ. ಇದಕ್ಕೆ ಮಾತಿನಲ್ಲಿ ಉತ್ತರಿಸುವ ಬದಲು, ಆಕೆ ಆತನಿಗೆ ಸನ್ನೆ ಮಾಡಿದ್ದಾಳೆ. ಇದರಿಂದ ಕಿವಿಗೊಟ್ಟು ಕೇಳುವ ಸಲುವಾಗಿ ವೇಟರ್ ಬಗ್ಗಿದ್ದಾನೆ. ಈ ವೇಳೆ ತನ್ನ ಫೋರ್ಕ್‍ನಿಂದ ಆಹಾರವನ್ನು ತೆಗೆದುಕೊಂಡು ಆತನಿಗೆ ತಿನ್ನಿಸಿದ್ದಾಳೆ. ಅವನು ಆಹಾರವನ್ನು ಅಗಿಯುತ್ತಿದ್ದಂತೆ, ಅವಳು ಹುಬ್ಬುಗಳನ್ನು ಮೇಲಕ್ಕೆತ್ತಿ, ಏನನ್ನೂ ಹೇಳದೆ ಅವನ ಅಭಿಪ್ರಾಯವನ್ನು ಕೇಳಿದ್ದಾನೆ.
ಮಹಿಳೆಯು ತನ್ನ ಹುಬ್ಬುಗಳನ್ನು ಮೇಲಕ್ಕೆತ್ತಿ ಹೇಗಿದೆ ಎಂದು ಸನ್ನಿ ಮಾಡಿದ್ದಾಳೆ. ಅದಕ್ಕೆ ವೇಟರ್ ರುಚಿಕರವಾಗಿದೆ ಎಂದು ತಲೆಯಾಡಿಸುತ್ತಾ ತನ್ನ ಉತ್ತರ ತಿಳಿಸಿದ್ದಾನೆ. ಮಹಿಳೆಯು ನಿಮಗೆ ಉತ್ತರ ಸಿಕ್ಕಿದೆಯೇ ಎಂದು ಹೇಳಲು ಪ್ರಯತ್ನಿಸುತ್ತಿರುವ ಮುಖಭಾವದಂತೆ ಪ್ರತಿಕ್ರಿಯಿಸಿದ್ದಾಳೆ. ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ. ಇದು ಸುಮಾರು 1,20,000 ಲೈಕ್ಸ್‌ಗಳನ್ನು ಗಳಿಸಿದೆ. ನೂರಾರು ಮಂದಿ ಬಳಕೆದಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ವಿಡಿಯೊ ವೀಕ್ಷಿಸಿ:
ಈ ವಿಡಿಯೊವನ್ನು ಎರಡು ವಾರಗಳ ಹಿಂದೆ ಇನ್‌ಸ್ಟಾಗ್ರಾಮ್ ಪುಟವೊಂದರಲ್ಲಿ ಹಂಚಿಕೊಳ್ಳಲಾಗಿತ್ತು. ಇದು ಒಂದು ಉತ್ತಮ ಪ್ರತಿಕ್ರಿಯೆಯಾಗಿದ್ದು, ನೀವೇ ತಿಂದು ನಿರ್ಧರಿಸಿ ಎಂದು ಒಬ್ಬ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಪ್ರತಿಕ್ರಿಯೆ ಹಂಚಿಕೊಳ್ಳುವ ವಿಶಿಷ್ಟ ವಿಧಾನಕ್ಕೆ ಅನೇಕ ಬಳಕೆದಾರರು ವಿಡಿಯೊದಲ್ಲಿ ನಗುವ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ.
ವಿಡಿಯೊದಲ್ಲಿರುವ ಇಬ್ಬರು ವ್ಯಕ್ತಿಗಳು ಒಂದೇ ಹೋಟೆಲ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಇವರು ರೀಲ್‍ಗಾಗಿ ನಟನೆ ಮಾಡುತ್ತಿದ್ದಾರೆ ಎಂದು ಕೆಲವು ಬಳಕೆದಾರರು ವ್ಯಂಗ್ಯವಾಡಿದ್ದಾರೆ. ಇಬ್ಬರ ಶರ್ಟ್‍ಗಳು ಒಂದೇ ರೀತಿ ಇದೆ. ಇಬ್ಬರೂ ಒಂದೇ ರೆಸ್ಟೋರೆಂಟ್‍ನ ಸಿಬ್ಬಂದಿಯಾಗಿದ್ದಾರೆ. ಚೆನ್ನಾಗಿ ನಟಿಸಿದ್ದಾರೆ ಎಂದು ಒಬ್ಬ ಬಳಕೆದಾರರು ಹೇಳಿದರು.
ಇದನ್ನೂ ಓದಿ: Viral Video: ರೆಸ್ಟೋರೆಂಟ್‍ಗೆ ಪ್ರವೇಶ ನಿರಾಕರಿಸಿದ್ದಕ್ಕೆ ಬೌನ್ಸರ್ ಮೇಲೆ ಹಲ್ಲೆ; ವಿಡಿಯೊ ವೈರಲ್
ಆಹಾರವು ಅಷ್ಟೇನೂ ಚೆನ್ನಾಗಿಲ್ಲದೇ ಇದ್ದಾಗ, ಈ ರೀತಿ ಪ್ರತಿಕ್ರಿಯೆ ನೀಡಬಹುದು ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಆಗ ವೇಟರ್ ಅರ್ಧದಷ್ಟು ಬಿಲ್ ಪಾವತಿಸಬೇಕಾಗುತ್ತದೆ ಎಂದು ಮತ್ತೊಬ್ಬ ಬಳಕೆದಾರರು ತಮಾಷೆ ಮಾಡಿದರು. ಈ ವಿಡಿಯೊ ಸ್ಕ್ರಿಪ್ಟೆಡ್ ಆಗಿದ್ದರೂ, ನಗು ಮತ್ತು ಮನರಂಜನೆ ನೀಡಿದೆ ಎಂದು ಕೆಲವು ಬಳಕೆದಾರರು ಹೇಳಿದ್ದಾರೆ.