ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Indian Army Chief General: ಭಾರತೀಯ ಸೇನೆಗೆ ರುದ್ರ, ಭೈರವ ಬಲ: ಕಾರ್ಗಿಲ್ ವಿಜಯ ದಿವಸದಂದು ಸೇನಾಧಿಕಾರಿಯ ಘೋಷಣೆ

ಕಾರ್ಗಿಲ್ ವಿಜಯ ದಿವಸದ 26ನೇ ವಾರ್ಷಿಕೋತ್ಸವದ ದಿನದಂದು ಮಹತ್ತರವಾದ ಘೋಷಣೆಯೊಂದು ಆಗಿದ್ದು, ರುದ್ರ ಎಂಬ ಹೊಸ ಸರ್ವ-ಶಸ್ತ್ರ ಬ್ರಿಗೇಡ್‌ಗಳ ಸ್ಥಾಪನೆ ಮಾಡುವುದಾಗಿ ಭಾರತೀಯ ಸೇನಾಧಿಕಾರಿ ಜನರಲ್ ಉಪೇಂದ್ರ ದ್ವಿವೇದಿ ಘೋಷಿಸಿದ್ದಾರೆ. ಆ ಕುರಿತ ಮಾಹಿತಿ ಇಲ್ಲಿದೆ

ಹೊಸ ಸೇನಾ ಘಟಕಗಳ ಲೋಕಾರ್ಪಣೆಗೆ ಭಾರತೀಯ ಸೇನೆ ಸಜ್ಜು

ಉಪೇಂದ್ರ ದ್ವಿವೇದಿ

Profile Sushmitha Jain Jul 26, 2025 10:33 PM

ದ್ರಾಸ್: ಕಾರ್ಗಿಲ್ ವಿಜಯ ದಿವಸದ (Kargil Vijay Diwas) 26ನೇ ವಾರ್ಷಿಕೋತ್ಸವದಂದು ಭಾರತೀಯ ಸೇನಾಧಿಕಾರಿ ಜನರಲ್ (Indian Army Chief General) ಉಪೇಂದ್ರ ದ್ವಿವೇದಿ (Upendra Dwivedi), ಆಧುನೀಕರಣ ಮತ್ತು ರೂಪಾಂತರದ ಭಾಗವಾಗಿ ‘ರುದ್ರ’ ಎಂಬ ಹೊಸ ಸರ್ವ-ಶಸ್ತ್ರ ಬ್ರಿಗೇಡ್‌ಗಳ ಸ್ಥಾಪನೆಯನ್ನು ಘೋಷಿಸಿದ್ದಾರೆ.

“ಇಂದಿನ ಭಾರತೀಯ ಸೇನೆಯು ಪ್ರಸ್ತುತ ಸವಾಲುಗಳನ್ನು ಎದುರಿಸುವುದರ ಜತೆಗೆ ಆಧುನಿಕ ಮತ್ತು ಭವಿಷ್ಯ-ಆಧಾರಿತ ಪಡೆಯಾಗಿ ವೇಗವಾಗಿ ಮುನ್ನಡೆಯುತ್ತಿದೆ. ಈಗ ‘ರುದ್ರ’ ಬ್ರಿಗೇಡ್‌ಗಳನ್ನು ರಚಿಸಲಾಗುತ್ತಿದ್ದು, ನಾನು ನಿನ್ನೆ ಇದಕ್ಕೆ ಅನುಮೋದನೆ ನೀಡಿದ್ದೇನೆ. ಪದಾತಿ ದಳ, ಯಾಂತ್ರಿಕೃತ ಪದಾತಿ ದಳ, ಶಸ್ತ್ರಸಜ್ಜಿತ ಘಟಕಗಳು, ಫಿರಂಗಿ, ವಿಶೇಷ ಪಡೆಗಳು ಮತ್ತು ಮಾನವರಹಿತ ವೈಮಾನಿಕ ವ್ಯವಸ್ಥೆಗಳಂತಹ ಹೋರಾಟದ ಘಟಕಗಳನ್ನು ಹೊಂದಿರುತ್ತದೆ” ಎಂದು ದ್ರಾಸ್‌ನಲ್ಲಿ ಅವರು ಹೇಳಿದರು.

‘ಭೈರವ’ ಲೈಟ್ ಕಮಾಂಡೋ ಬೆಟಾಲಿಯನ್‌ಗಳನ್ನು ಗಡಿಯಲ್ಲಿ ಶತ್ರುವಿಗೆ ಆಘಾತ ನೀಡಲು ಸ್ಥಾಪಿಸಲಾಗಿದೆ. ಪ್ರತಿ ಕಾಲಾಳು ಬೆಟಾಲಿಯನ್‌ನಲ್ಲಿ ಡ್ರೋನ್ ಪ್ಲಾಟೂನ್‌ಗಳಿವೆ, ಫಿರಂಗಿಯು ‘ದಿವ್ಯಾಸ್ತ್ರ ಬ್ಯಾಟರೀಸ್’ ಮತ್ತು ಲಾಯಿಟರ್ ಮ್ಯುನಿಷನ್ ಬ್ಯಾಟರೀಸ್‌ನಿಂದ ಬಲವರ್ಧನೆಗೊಂಡಿದೆ. ಸೇನೆಯ ವಾಯು ರಕ್ಷಣೆಗೆ ಸ್ವದೇಶಿ ಕ್ಷಿಪಣಿ ವ್ಯವಸ್ಥೆಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಜನರಲ್ ದ್ವಿವೇದಿ ತಿಳಿಸಿದರು. ವರದಿ ಪ್ರಕಾರ, ಎರಡು ಕಾಲಾಳು ಬ್ರಿಗೇಡ್‌ಗಳನ್ನು ಈಗಾಗಲೇ ‘ರುದ್ರ’ ಬ್ರಿಗೇಡ್‌ಗಳಾಗಿ ಪರಿವರ್ತಿಸಲಾಗಿದೆ.

ಈ ಸುದ್ದಿಯನ್ನು ಓದಿ: Kargil Vijay Diwas: ಕಾರ್ಗಿಲ್‌ ವಿಜಯ್‌ ದಿವಸಕ್ಕೆ ಇಂದು 26 ವರ್ಷ; ಯುದ್ಧದ ಸಂಪೂರ್ಣ ಮಾಹಿತಿ ಇಲ್ಲಿದೆ

ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ನೀಡಿದ ದ್ವಿವೇದಿ, ಭಯೋತ್ಪಾದನೆಗೆ ಆಶ್ರಯ ನೀಡುವವರು ತಪ್ಪಿಸಿಕೊಳ್ಳಲಾರರು ಎಂದರು. ಮೇ 7ರ ಭಾರತದ ದಾಳಿಯು, 26 ನಾಗರಿಕರನ್ನು ಕೊಂದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿತ್ತು. “ಮೇ 6-7ರ ರಾತ್ರಿ, ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ 9 ಭಯೋತ್ಪಾದಕ ಸ್ಥಳಗಳನ್ನು ಗುರಿಯಾಗಿಟ್ಟು ಯಾವುದೇ ನಾಗರಿಕರಿಗೆ ಹಾನಿಯಾಗದಂತೆ ನಿಖರ ದಾಳಿ ನಡೆಸಿತು” ಎಂದರು.

ಮೇ 7-9ರವರೆಗಿನ ಪಾಕಿಸ್ತಾನದ ಸೈನಿಕ ಕಾರ್ಯಾಚರಣೆಗೆ ಭಾರತ “ನಿಯಂತ್ರಿತ ಮತ್ತು ನಿಖರ ಪ್ರತಿಕ್ರಿಯೆ” ನೀಡಿತು ಎಂದು ದ್ವಿವೇದಿ ತಿಳಿಸಿದರು. “ನಮ್ಮ ವಾಯು ರಕ್ಷಣೆಯು ಡ್ರೋನ್ ಅಥವಾ ಕ್ಷಿಪಣಿಗಳಿಗೆ ಭೇದಿಸಲಾಗದ ಗೋಡೆಯಾಗಿದೆ. ಸೇನೆ, ವಾಯುಪಡೆ, ನೌಕಾಪಡೆ, ಮತ್ತು ಸರ್ಕಾರಿ ಸಂಸ್ಥೆಗಳ ‘ಸರ್ವರಾಷ್ಟ್ರೀಯ ವಿಧಾನ’ದಿಂದ ಇದು ಸಾಧ್ಯವಾಯಿತು. ಭಾರತದ ಸಾರ್ವಭೌಮತೆ, ಸಮಗ್ರತೆ ಅಥವಾ ಜನರಿಗೆ ಹಾನಿಮಾಡಲು ಯೋಜಿಸುವ ಯಾವುದೇ ಶಕ್ತಿಗೂ ಯೋಗ್ಯ ಉತ್ತರ ನೀಡಲಾಗುವುದು” ಎಂದು ಅವರು ಒತ್ತಿಹೇಳಿದರು.