ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Birth And Death Rates: 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೇಶದಲ್ಲಿ ಜನನ ಮತ್ತು ಮರಣ ಪ್ರಮಾಣ ಇಳಿಕೆ

ಜನನ ದರ 2013 ರಲ್ಲಿ ಶೇ.21.4 ರಿಂದ 2023 ರಲ್ಲಿ ಶೇ.18.4 ಕ್ಕೆ ಇಳಿದಿದೆ. ಒಟ್ಟಾರೆಯಾಗಿ, ಅಖಿಲ ಭಾರತ ಮಟ್ಟದಲ್ಲಿ ಜನನ ದರವು ಕಳೆದ ಐದು ದಶಕಗಳಲ್ಲಿ ಶೇ.36.9 ರಿಂದ ಶೇ.18.4 ಕ್ಕೆ ತೀವ್ರವಾಗಿ ಕುಸಿದಿದೆ ಎಂದು ದತ್ತಾಂಶ ತೋರಿಸುತ್ತದೆ. ಸಾಂಪ್ರದಾಯಿಕವಾಗಿ ಜನನ ಪ್ರಮಾಣ ಹೆಚ್ಚಿರುವ ಗ್ರಾಮೀಣ ಪ್ರದೇಶಗಳಲ್ಲಿ, ಅದೇ ಅವಧಿಯಲ್ಲಿ 22.9 ರಿಂದ 20.3 ಕ್ಕೆ ಇಳಿಕೆಯಾಗಿದೆ ಎಂದು ದತ್ತಾಂಶವು ತೋರಿಸುತ್ತದೆ.

ನವದೆಹಲಿ: ದೇಶದಲ್ಲಿ ಇದೇ ಮೊದಲ ಬಾರಿಗೆ ಜನನ ಮತ್ತು ಮರಣ ಪ್ರಮಾಣ(Birth And Death Rates) ಗಣನೀಯವಾಗಿ ಇಳಿಕೆ ಕಂಡು ಬಂದಿದೆ. ಕಳೆ ಐವತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಜನನ ಮತ್ತು ಮರಣ ದರದಲ್ಲಿ ಹಿಂದಿನ ಮಟ್ಟಕ್ಕಿಂತ ಸುಮಾರು ಅರ್ಧದಷ್ಟು ಇಳಿದಿವೆ. ಇದು ದೇಶಾದ್ಯಂತ ಆರೋಗ್ಯ ರಕ್ಷಣೆ, ಕುಟುಂಬ ಯೋಜನೆ ಮತ್ತು ಸಾಮಾಜಿಕ ಯೋಗಕ್ಷೇಮದಲ್ಲಿ ಬಲವಾದ ಸುಧಾರಣೆಗಳನ್ನು ಸೂಚಿಸುತ್ತದೆ. ಮಾದರಿ ನೋಂದಣಿ ವ್ಯವಸ್ಥೆಯ ಇತ್ತೀಚಿನ ದತ್ತಾಂಶದ ಪ್ರಕಾರ, ಕಳೆದ ಕೆಲವು ದಶಕಗಳಲ್ಲಿ ಭಾರತದ ಜನನ, ಮರಣ ಮತ್ತು ಶಿಶು ಮರಣ ದರಗಳು ಸ್ಥಿರವಾದ ಕುಸಿತವನ್ನು ತೋರಿಸಿವೆ.

ಜನನ ದರದಲ್ಲಿ ಕುಸಿತ

ಜನನ ದರ 2013 ರಲ್ಲಿ ಶೇ.21.4 ರಿಂದ 2023 ರಲ್ಲಿ ಶೇ.18.4 ಕ್ಕೆ ಇಳಿದಿದೆ. ಒಟ್ಟಾರೆಯಾಗಿ, ಅಖಿಲ ಭಾರತ ಮಟ್ಟದಲ್ಲಿ ಜನನ ದರವು ಕಳೆದ ಐದು ದಶಕಗಳಲ್ಲಿ ಶೇ.36.9 ರಿಂದ ಶೇ.18.4 ಕ್ಕೆ ತೀವ್ರವಾಗಿ ಕುಸಿದಿದೆ ಎಂದು ದತ್ತಾಂಶ ತೋರಿಸುತ್ತದೆ. ಸಾಂಪ್ರದಾಯಿಕವಾಗಿ ಜನನ ಪ್ರಮಾಣ ಹೆಚ್ಚಿರುವ ಗ್ರಾಮೀಣ ಪ್ರದೇಶಗಳಲ್ಲಿ, ಅದೇ ಅವಧಿಯಲ್ಲಿ 22.9 ರಿಂದ 20.3 ಕ್ಕೆ ಇಳಿಕೆಯಾಗಿದೆ ಎಂದು ದತ್ತಾಂಶವು ತೋರಿಸುತ್ತದೆ. ಆದರೆ ನಗರ ಪ್ರದೇಶಗಳಲ್ಲಿ, ಇದು ಶೇ. 17.3 ರಿಂದ ಶೇ.14.9 ಕ್ಕೆ ತೀವ್ರ ಕುಸಿತವನ್ನು ಕಂಡಿದೆ. ಪ್ರಾದೇಶಿಕವಾದ ವರದಿಯನ್ನೂ ಸಹ ದತ್ತಾಂಶವು ಎತ್ತಿ ತೋರಿಸಿದೆ. ಬಿಹಾರವು 2023 ರಲ್ಲಿ ಅತಿ ಹೆಚ್ಚು ಜನನ ಪ್ರಮಾಣವನ್ನು ಶೇ.25.8 ಕ್ಕೆ ವರದಿ ಮಾಡಿದೆ, ಆದರೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಶೇ.10.1 ಕ್ಕೆ ಕನಿಷ್ಠವನ್ನು ದಾಖಲಿಸಿವೆ.

ಕುಸಿಯುತ್ತಿರುವ ಮರಣ ಪ್ರಮಾಣ

ಮರಣ ಪ್ರಮಾಣದಲ್ಲೂ (ಪ್ರತಿ ಸಾವಿರ ಜನಸಂಖ್ಯೆಗೆ ಸಾವುಗಳು) ಸಹ ತನ್ನ ಇಳಿಮುಖ ಕಂಡು ಬಂದಿದೆ. 2013 ರಲ್ಲಿ ಶೇ.7.0ರಷ್ಟಿದ್ದ ಮರಣ ಪ್ರಮಾಣ, 2023 ರಲ್ಲಿ ಶೇ.6.4 ಕ್ಕೆ ಇಳಿದಿದೆ. ಸಾವಿನ ಪ್ರಮಾಣವು ಜನಸಂಖ್ಯೆಯಲ್ಲಿ ಪ್ರತಿ 1,000 ಜನರಿಗೆ ಒಂದು ವರ್ಷದಲ್ಲಿ ಸಾಯುವ ಜನರ ಸಂಖ್ಯೆಯನ್ನು ವ್ಯಾಖ್ಯಾನಿಸುತ್ತದೆ ಮತ್ತು ಜನಸಂಖ್ಯೆಯಲ್ಲಿ ಒಟ್ಟಾರೆ ಮರಣ, ಜೀವಿತಾವಧಿ ಮತ್ತು ಆರೋಗ್ಯ ಸ್ಥಿತಿಗಳ ಕಲ್ಪನೆಯನ್ನು ನೀಡುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ.6.8ರಷ್ಟು ಸಾವಿನ ಪ್ರಮಾಣ ವರದಿಯಾಗಿದ್ದು, ನಗರ ಪ್ರದೇಶಗಳಲ್ಲಿ ಶೇ. 5.7 ರಷ್ಟಿದೆ. ಛತ್ತೀಸ್‌ಗಢದಲ್ಲಿ ಅತಿ ಹೆಚ್ಚು ಮರಣ ಪ್ರಮಾಣ ಶೇ.8.3 ದಾಖಲಾಗಿದ್ದರೆ, ಚಂಡೀಗಢದಲ್ಲಿ ಕನಿಷ್ಠ ಶೇ. 4.0 ದಾಖಲಾಗಿದೆ.

ಶಿಶು ಮರಣ ಪ್ರಮಾಣ ದರ ಕುಸಿತ

ಮತ್ತೊಂದೆಡೆ ಶಿಶು ಮರಣ ದರದಲ್ಲಿ (IMR) ಅತ್ಯಂತ ಗಮನಾರ್ಹ ಸುಧಾರಣೆ ಕಂಡು ಬಂದಿದೆ. ಜೀವಂತವಾಗಿ ಜನಿಸಿದ 1,000 ಶಿಶುಗಳಿಗೆ 1 ವರ್ಷ ವಯಸ್ಸನ್ನು ತಲುಪುವ ಮೊದಲು ಸಾಯುವ ಶಿಶುಗಳ ಸಂಖ್ಯೆಯನ್ನು (ಶಿಶುಗಳು) ಈ ದತ್ತಾಂಶ ತೋರಿಸುತ್ತದೆ. ಐಎಂಆರ್ ಅನ್ನು ದೇಶದ ಆರೋಗ್ಯ ರಕ್ಷಣೆ ಗುಣಮಟ್ಟ, ಪೋಷಣೆ ಮತ್ತು ಜೀವನ ಪರಿಸ್ಥಿತಿಗಳ ಅತ್ಯುತ್ತಮ ಸೂಚಕಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಏಕೆಂದರೆ ಇದು ನವಜಾತ ಶಿಶುಗಳು ಮತ್ತು ತಾಯಂದಿರನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ ಎಂಬುದನ್ನು ಪ್ರತಿಬಿಂಬಿಸುತ್ತದೆ.

ಈ ಸುದ್ದಿಯನ್ನೂ ಓದಿ: Karnataka Weather: ಯೆಲ್ಲೋ ಅಲರ್ಟ್‌; ಇಂದು ಬೆಂಗಳೂರು, ಮೈಸೂರು ಸೇರಿ ಈ ಜಿಲ್ಲೆಗಳಲ್ಲಿ ಬಿರುಸಿನ ಮಳೆ ಸಾಧ್ಯತೆ!

ಐಎಂಆರ್ 2013 ರಲ್ಲಿ 1,000 ಜೀವಂತ ಜನನಗಳಿಗೆ 40 ಸಾವುಗಳಿಂದ 2023 ರಲ್ಲಿ 25 ಕ್ಕೆ ಇಳಿದಿದೆ, ಇದು ಸುಮಾರು 37.5% ಕುಸಿತವಾಗಿದೆ. ಗ್ರಾಮೀಣ ಐಎಂಆರ್ 44 ರಿಂದ 28 ಕ್ಕೆ ಇಳಿದಿದ್ದರೆ, ನಗರ ಐಎಂಆರ್ ಅದೇ ಅವಧಿಯಲ್ಲಿ 27 ರಿಂದ 18 ಕ್ಕೆ ಇಳಿದಿದೆ. ಅತಿ ಹೆಚ್ಚು ಶಿಶು ಮರಣ ದರ ಪ್ರಮಾಣ ದಾಖಲಾಗಿದ್ದ ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಗಳಲ್ಲೂ 2023 ರಲ್ಲಿ, ಕಡಿಮೆ ಆಗಿದೆ.

ತಾಯಂದಿರ ಮರಣ ದರ ಕೂಡ ಇಳಿಮುಖ

ತಾಯಂದಿರ ಮರಣ ದರದಲ್ಲೂ ಇತ್ತೀಚಿನ ದಶಕಗಳಲ್ಲಿ ಇಳಿಕ ಕಂಡು ಬಂದಿದೆ. ಭಾರತದ ತಾಯಂದಿರ ಮರಣ ದರ (MMR) ಕುಸಿತವು ಜಾಗತಿಕ ಅನುಪಾತಕ್ಕಿಂತ ಹೆಚ್ಚಾಗಿದೆ ಎಂದು ಅದು ತೋರಿಸಿದೆ. 1990 ಮತ್ತು 2020 ರ ನಡುವೆ, ಭಾರತದ MMR 83% ರಷ್ಟು ಕುಸಿತ ಕಂಡು ಬಂದಿದೆ. ಇದರರ್ಥ ಭಾರತದಲ್ಲಿ, 1 ಲಕ್ಷ ತಾಯಂದಿರಲ್ಲಿ 556 ತಾಯಂದಿರು ಹೆರಿಗೆ ಸಮಯದಲ್ಲಿ ಸಾವನ್ನಪ್ಪಿದ್ದಾರೆ. ಆದಾಗ್ಯೂ, ಈಗ ಸಂಖ್ಯೆ ಸುಧಾರಿಸಿದೆ ಮತ್ತು ತಾಯಂದಿರ ಮರಣವು ಈಗ 97ಕ್ಕೆ ಬಂದು ಇಳಿದಿದೆ.