ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fake Embassy: ನಕಲಿ ರಾಯಭಾರಿ ಕಚೇರಿ ಕೇಸ್‌- ಬಗೆದಷ್ಟು ಬಯಲಾಗ್ತಿದೆ ಶಾಕಿಂಗ್‌ ಸಂಗತಿಗಳು!

ಹರ್ಷವರ್ಧನ್ ಗಾಜಿಯಾಬಾದ್‌ನಲ್ಲಿ ನಕಲಿ ರಾಯಭಾರ ಕಚೇರಿಯನ್ನು ನಡೆಸುತ್ತಿದ್ದನು. ಆತ ಲಡೋನಿಯಾ, ವೆಸ್ಟಾರ್ಕ್ಟಿಕಾ, ಸೆಬೋರ್ಗಾ ಮತ್ತು ಪೌಲ್ವಿಯಾ ಸೇರಿದಂತೆ ಹಲವಾರು ರಾಷ್ಟ್ರಗಳ ಸ್ವಯಂ ಘೋಷಿತ ರಾಯಭಾರಿ ಎಂದು ಗುರುತಿಸಿಕೊಂಡಿದ್ದ. ಆತನ ದುಷ್ಕೃತ್ಯಗಳ ಬಗ್ಗೆ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ನಕಲಿ ರಾಯಭಾರಿ ಕಚೇರಿ ಕೇಸ್‌- ಬಗೆದಷ್ಟು ಬಯಲಾಗ್ತಿದೆ ಶಾಕಿಂಗ್‌ ಸಂಗತಿಗಳು!

ಗಾಜಿಯಾಬಾದ್: ನಕಲಿ ರಾಯಭಾರಿ ಕಚೇರಿಯನ್ನು (Fake Embassy) ನಡೆಸುತ್ತಿದ್ದ ಹರ್ಷವರ್ಧನ್ ಜೈನ್ (Harshvardhan Jain) ಬಂಧನದ ಬಳಿಕ ಹಣಕಾಸು ವಂಚನೆ (financial fraud) ಮತ್ತು ಅಕ್ರಮ ಹಣ ವರ್ಗಾವಣೆಗೆ (money laundering) ಸಂಬಂಧಿಸಿದ ವ್ಯಾಪಕ ಅಂತಾರಾಷ್ಟ್ರೀಯ ಜಾಲದ ಬಗ್ಗೆ ಹಲವಾರು ಸಂಗತಿಗಳು ಬೆಳಕಿಗೆ ಬಂದಿವೆ. ಲಡೋನಿಯಾ, ವೆಸ್ಟಾರ್ಕ್ಟಿಕಾ, ಸೆಬೋರ್ಗಾ ಮತ್ತು ಪೌಲ್ವಿಯಾ ಸೇರಿದಂತೆ ಹಲವು ರಾಷ್ಟ್ರಗಳ ಸ್ವಯಂ ಘೋಷಿತ ರಾಯಭಾರಿಯಾಗಿ ಗುರುತಿಸಿಕೊಂಡಿದ್ದ ಹರ್ಷವರ್ಧನ್ ಜೈನ್ ನನ್ನು ಗುರುವಾರ ಗಾಜಿಯಾಬಾದ್‌ನ (Ghaziabad) ಐಷಾರಾಮಿ ಬಂಗಲೆಯಲ್ಲಿ ಉತ್ತರ ಪ್ರದೇಶ (Uttar Pradesh) ವಿಶೇಷ ಕಾರ್ಯಪಡೆ (Special Task Force ) ಅಧಿಕಾರಿಗಳು ಬಂಧಿಸಿದ್ದರು.

ಹರ್ಷವರ್ಧನ್ ಗಾಜಿಯಾಬಾದ್‌ನಲ್ಲಿ ನಕಲಿ ರಾಯಭಾರ ಕಚೇರಿಯನ್ನು ನಡೆಸುತ್ತಿದ್ದನು. ಆತ ಲಡೋನಿಯಾ, ವೆಸ್ಟಾರ್ಕ್ಟಿಕಾ, ಸೆಬೋರ್ಗಾ ಮತ್ತು ಪೌಲ್ವಿಯಾ ಸೇರಿದಂತೆ ಹಲವಾರು ರಾಷ್ಟ್ರಗಳ ಸ್ವಯಂ ಘೋಷಿತ ರಾಯಭಾರಿ ಎಂದು ಗುರುತಿಸಿಕೊಂಡಿದ್ದ. ಆತನ ದುಷ್ಕೃತ್ಯಗಳ ಬಗ್ಗೆ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ಯುಕೆ, ಮಾರಿಷಸ್, ದುಬೈ ಮತ್ತು ಹಲವಾರು ಆಫ್ರಿಕನ್ ರಾಷ್ಟ್ರಗಳಲ್ಲಿ ನಕಲಿ ಕಂಪೆನಿಗಳನ್ನು ನಡೆಸುತ್ತಿದ್ದ ಜೈನ್ ಈಸ್ಟ್ ಇಂಡಿಯಾ ಕಂಪನಿ ಯುಕೆ ಲಿಮಿಟೆಡ್, ಸ್ಟೇಟ್ ಟ್ರೇಡಿಂಗ್ ಕಾರ್ಪೊರೇಷನ್, ಐಲ್ಯಾಂಡ್ ಜನರಲ್ ಟ್ರೇಡಿಂಗ್ ಕೋ ಎಲ್ಎಲ್ ಸಿ ದುಬೈ, ಇಂದಿರಾ ಓವರ್ಸೀಸ್ ಲಿಮಿಟೆಡ್ ಮಾರಿಷಸ್ ಮತ್ತು ಕ್ಯಾಮರೂನ್ ಇಸ್ಪತ್ ಸರ್ಲ್ ಆಫ್ರಿಕಾ ಹೆಸರಲ್ಲಿ ತನ್ನ ಕಂಪೆನಿಯನ್ನು ನೋಂದಾಯಿಸಿಕೊಂಡಿದ್ದನು. ಈ ಕಂಪೆನಿಗಳ ಹೆಸರಿನಲ್ಲಿ ಆತ ಬಹುದೊಡ್ಡ ಪ್ರಮಾಣದ ಹಣ ವರ್ಗಾವಣೆ, ಹವಾಲಾ ಚಟುವಟಿಕೆ ಮತ್ತು ವಿವಿಧ ವಂಚನೆಗಳನ್ನು ನಡೆಸುತ್ತಿದ್ದ ಎನ್ನಲಾಗಿದೆ.

ದೇವಮಾನವ ಎಂದು ಗುರುತಿಸಿಕೊಂಡಿರುವ ಚಂದ್ರಸ್ವಾಮಿ ಅವರ ಆಪ್ತ ಎಹ್ಸಾನ್ ಅಲಿ ಸೈಯದ್ ಸೂಚನೆ ಮೇರೆಗೆ ತಾನು ಕಾರ್ಯನಿರ್ವಹಿಸಿದ್ದಾಗಿ ತನಿಖೆ ವೇಳೆ ಜೈನ್ ಹೇಳಿಕೊಂಡಿದ್ದಾನೆ. ಎಹ್ಸಾನ್ ಹೈದರಾಬಾದ್ ಮೂಲದವನಾಗಿದ್ದು, ಟರ್ಕಿಶ್ ಪೌರತ್ವವನ್ನು ಹೊಂದಿದ್ದಾನೆ. ಲಂಡನ್‌ನಲ್ಲಿ ನಕಲಿ ಕಂಪೆನಿಗಳನ್ನು ಸ್ಥಾಪಿಸಲು ಈತ ಜೈನ್ ಗೆ ಸಹಾಯ ಮಾಡಿದ್ದಾನೆ ಎನ್ನಲಾಗಿದೆ.

ಎಹ್ಸಾನ್ ಮತ್ತು ಆತನ ತಂಡದವರು 2008 ಮತ್ತು 2011 ರ ನಡುವೆ ಸುಮಾರು 70 ಮಿಲಿಯನ್ ಪೌಂಡ್‌ ಸಾಲ ಪಡೆದುಕೊಂಡಿದ್ದು, ಇದರಲ್ಲಿ ಸುಮಾರು 25 ಮಿಲಿಯನ್ ಪೌಂಡ್‌ ಕಮಿಷನ್ ಪಡೆದಿದ್ದಾರೆ ಎನ್ನುವುದು ಎಸ್‌ಟಿಎಫ್ ತನಿಖೆಯಿಂದ ತಿಳಿದುಬಂದಿದೆ.

2022ರಲ್ಲಿ ಸ್ವಿಸ್ ಕೋರಿಕೆ ಮೇರೆಗೆ ಲಂಡನ್ ಪೊಲೀಸರು ಎಹ್ಸಾನ್‌ನನ್ನು ಬಂಧಿಸಿದ್ದರು. ಲಂಡನ್ ನ್ಯಾಯಾಲಯವು 2023ರಲ್ಲಿ ಆತನನ್ನು ಸ್ವಿಟ್ಜರ್‌ಲ್ಯಾಂಡ್‌ಗೆ ಹಸ್ತಾಂತರಿಸಲು ಅನುಮೋದನೆ ನೀಡಿದೆ. ಅಲ್ಲಿ ಆತ ಹಲವು ಆರೋಪಗಳನ್ನು ಎದುರಿಸುತ್ತಿದ್ದಾನೆ. ಎಹ್ಸಾನ್‌ನ ಅಂತಾರಾಷ್ಟ್ರೀಯ ಕ್ರಿಮಿನಲ್ ಜಾಲದಲ್ಲಿ ಹರ್ಷವರ್ಧನ್ ಜೈನ್ ಪಾತ್ರದ ಬಗ್ಗೆಯೂ ಇದೀಗ ಎಸ್‌ಟಿಎಫ್ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: Viral Video: ಡಿವೈಡರ್‌ಗೆ ಡಿಕ್ಕಿ ಹೊಡೆದು ಆಟಿಕೆ ಕಾರಿನಂತೆ ಗಿರಗಿರನೆ ತಿರುಗಿದ SUV- ಎದೆ ಝಲ್ಲೆನಿಸುವ ವಿಡಿಯೊ ವೈರಲ್

ಜೈನ್ ಹೆಸರಿನಲ್ಲಿ ಭಾರತ ಮತ್ತು ವಿದೇಶಗಳಲ್ಲಿ ನೋಂದಾಯಿಸಲಾದ ಅನೇಕ ಬ್ಯಾಂಕ್ ಖಾತೆಗಳನ್ನುಎಸ್‌ಟಿಎಫ್ ವಶಕ್ಕೆ ಪಡೆದಿದೆ.

ಹರ್ಷವರ್ಧನ್ ಜೈನ್ ಗಾಜಿಯಾಬಾದ್‌ನಲ್ಲಿ ಐಷಾರಾಮಿ ಬಂಗಲೆಯಲ್ಲಿ ವಾಸವಾಗಿದ್ದನು. ರಾಜತಾಂತ್ರಿಕ ನಂಬರ್ ಪ್ಲೇಟ್‌ಗಳನ್ನು ಹೊಂದಿದ್ದ ಐಷಾರಾಮಿ ಕಾರುಗಳನ್ನು ಬಳಸುತ್ತಿದ್ದ. ಈತನ ಬಳಿ ಅನೇಕ ನಕಲಿ ದಾಖಲೆಗಳು ಪತ್ತೆಯಾಗಿವೆ.