ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

X Server Down: X ಸಾಮಾಜಿಕ ಜಾಲತಾಣದ ಸರ್ವರ್‌ ಡೌನ್‌; ಬಳಕೆದಾರರಿಂದ ಆಕ್ರೋಶ

ಎಲಾನ್‌ ಮಸ್ಕ್‌ ಒಡೆತನದ ದೈತ್ಯ ಸಾಮಾಜಿಕವಾದ ಎಕ್ಸ್‌ನ ಸರ್ವರ್‌ ಡೌನ್‌ ಆದ ಹಿನ್ನಲೆಯಲ್ಲಿ ಬಳಕೆದಾರರು ಪರದಾಡುವಂತಾಯಿತು. ಪ್ರಪಂಚದಾದ್ಯಂತ ಬಳಕೆದಾರರು ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬಳಕೆದಾರರು ದೂರಿದ್ದಾರೆ. ಮಧ್ಯಾಹ್ನ 3.20 ರ ಸುಮಾರಿಗೆ 2,500 ಕ್ಕೂ ಹೆಚ್ಚು ಜನರಿಗೆ ಅಪ್ಲಿಕೇಶನ್ ತೆರೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿದು ಬಂದಿದೆ.

X ಸಾಮಾಜಿಕ ಜಾಲತಾಣದ ಸರ್ವರ್‌ ಡೌನ್‌

ಎಕ್ಸ್‌

Profile Vishakha Bhat Mar 10, 2025 4:07 PM

ನವದೆಹಲಿ: ಎಲಾನ್‌ ಮಸ್ಕ್‌ ಒಡೆತನದ ದೈತ್ಯ ಸಾಮಾಜಿಕವಾದ ಎಕ್ಸ್‌ನ ಸರ್ವರ್‌ ಡೌನ್‌ (X Server Down) ಆದ ಹಿನ್ನಲೆಯಲ್ಲಿ ಬಳಕೆದಾರರು ಪರದಾಡುವಂತಾಯಿತು. ಪ್ರಪಂಚದಾದ್ಯಂತ ಬಳಕೆದಾರರು ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬಳಕೆದಾರರು ದೂರಿದ್ದಾರೆ. .ಹಲವಾರು ಬಳಕೆದಾರರು ತಮ್ಮ ಎಕ್ಸ್‌ ಅಕೌಂಟ್‌ ಓಪನ್‌ ಆಗುತ್ತಿಲ್ಲ ಎಂದು ಹೇಳಿದ್ದಾರೆ. ಡೌನ್‌ಡೆಟೆಕ್ಟರ್ ವೆಬ್‌ಸೈಟ್‌ನಲ್ಲಿನ ಡೇಟಾದ ಪ್ರಕಾರ ಮಧ್ಯಾಹ್ನ 3.20 ರ ಸುಮಾರಿಗೆ 2,500 ಕ್ಕೂ ಹೆಚ್ಚು ಜನರಿಗೆ ಅಪ್ಲಿಕೇಶನ್ ತೆರೆಯಲು ಸಾಧ್ಯವಾಗುತ್ತಿರಲಿಲ್ಲ.

ಈ ಸುದ್ದಿಯನ್ನೂ ಓದಿ: Women's Day 2025: ಪ್ರಧಾನಿ ಮೋದಿಯ ಅಧಿಕೃತ 'ಎಕ್ಸ್‌' ಖಾತೆಯಲ್ಲಿ ಮಹಿಳೆಯರಿಗೆ ವಿಶೇಷ ಸಂದೇಶ ಕೊಟ್ಟ ಚೆಸ್‌ ತಾರೆ ವೈಶಾಲಿ

ಬಳಕೆದಾರರಿಗೆ ಪರದೆಯ ಮೇಲೆ "ಏನೋ ತಪ್ಪಾಗಿದೆ, ಮರುಲೋಡ್ ಮಾಡಲು ಪ್ರಯತ್ನಿಸಿ" ಎಂಬ ಸಂದೇಶವನ್ನು ತೋರಿಸುತ್ತಿತ್ತು. ಶೇಕಡ 35 ರಷ್ಟು ಜನರು ವೆಬ್‌ಸೈಟ್‌ನಲ್ಲಿ ಸಮಸ್ಯೆ ಎದುರಿಸಿದ್ದಾರೆ. ಎಕ್ಸ್‌ನಲ್ಲಿ ಇರುವ ಸಮಸ್ಯೆಯನ್ನು ಬಳಕೆದಾರರು ಫೇಸ್‌ಬುಕ್‌ ಮೂಲಕ ಹಂಚಿಕೊಂಡಿದ್ದು, ಹಲವರು ಕಿಡಿ ಕಾರಿದ್ದಾರೆ. ಈ ಹಿಂದೆ 2024 ರ ಅಗಸ್ಟ್‌ನಲ್ಲಿಯೂ ಇದೇ ಸಮಸ್ಯೆ ಉಂಟಾಗಿತ್ತು.