ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೋಸ್ಟ್‌ ವಾಂಟೆಡ್‌ ಉಗ್ರ ಲತೀಫ್‌ ಭಟ್‌ನನ್ನು ಹೊಡೆದುರುಳಿಸಿದ ಭಾರತೀಯ ಸೇನೆ

Latif Bhat: ಇತ್ತೀಚೆಗೆ ಜಮ್ಮು ಕಾಶ್ಮೀರದ ಕುಲ್ಗಾಮ್‌ನಲ್ಲಿ ನಡೆದ ಸಿಆರ್‌ಪಿಎಫ್‌ ಕ್ಯಾಂಪ್‌ ಮೇಲಿನ ದಾಳಿಯ ಮಾಸ್ಟರ್‌ ಮೈಂಡ್‌ ಲತೀಫ್‌ ಭಟ್‌ ಸೇರಿ ಇಬ್ಬರು ಉಗ್ರರನ್ನು ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆ ಹೊಡೆದುರುಳಿಸಿದೆ.

ಶ್ರೀನಗರ, ನ. 16: ಇತ್ತೀಚೆಗೆ ಜಮ್ಮು ಕಾಶ್ಮೀರದ ಕುಲ್ಗಾಮ್‌ನಲ್ಲಿ ನಡೆದ ಸಿಆರ್‌ಪಿಎಫ್‌ ಕ್ಯಾಂಪ್‌ ಮೇಲಿನ ದಾಳಿಯ ಮಾಸ್ಟರ್‌ ಮೈಂಡ್‌ ಮೊಹಮ್ಮದ್ ಲತೀಫ್ ಭಟ್ ಸೇರಿ ಇಬ್ಬರು ಉಗ್ರರನ್ನು ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆ ಹೊಡೆದುರುಳಿಸಿದೆ. ಪಾಕಿಸ್ತಾನದ ಮೂಲದ ಉಗ್ರ ಸಂಘಟನೆ ಲಷ್ಕರ್-ಎ-ತೈಬಾದ ಪ್ರಮುಖ ಸದಸ್ಯನಾಗಿದ್ದ ಲತೀಫ್‌ ಭಟ್‌ ಬೇಟೆಗಾಗಿ ಭಾರತೀಯ ಸೇನೆ ಹಲವು ವರ್ಷಗಳಿಂದ ಹೊಂಚು ಹಾಕಿತ್ತು.

ಮೊಹಮ್ಮದ್ ಲತೀಫ್ ಭಟ್ ಜಮ್ಮು ಮತ್ತು ಕಾಶ್ಮೀರದ ದಕ್ಷಿಣ ಕಾಶ್ಮೀರ ಪ್ರದೇಶದಲ್ಲಿ ಸಕ್ರಿಯವಾಗಿದ್ದ ಲಷ್ಕರ್-ಎ-ತೈಬಾ (LeT) ಮತ್ತು ಅದರ ಅಂಗಸಂಸ್ಥೆಗಳಾದ ದಿ ರೆಸಿಸ್ಟೆನ್ಸ್ ಫ್ರಂಟ್ ಹಾಗೂ ಕಾಶ್ಮೀರ ರೆವಲ್ಯೂಷನರಿ ಆರ್ಮಿಗೆ ಸೇರಿದ ಮೋಸ್ಟ್ ವಾಂಟೆಡ್ ಸ್ಥಳೀಯ ಉಗ್ರನಾಗಿದ್ದ. ಈತ ಕುಲ್ಗಾಮ್ ಜಿಲ್ಲೆಯ ಖ್ರೆವಾನ್ ಚಡ್ಡರ್ ನಿವಾಸಿಯಾಗಿದ್ದು, 2025ರ ನವೆಂಬರ್ 19ರಂದು ಮನೆಯಿಂದ ನಾಪತ್ತೆಯಾಗಿ ಭಯೋತ್ಪಾದಕ ಸಂಘಟನೆಯನ್ನು ಸೇರಿದ್ದ.

2026ರಲ್ಲಿ ದಕ್ಷಿಣ ಕಾಶ್ಮೀರದಲ್ಲಿ ನಡೆದ ಹಲವು ಭಯೋತ್ಪಾದಕ ದಾಳಿಗಳ ಹಿಂದೆ ಈತನ ಕೈವಾಡವಿತ್ತು. ಅಷ್ಟೇ ಅಲ್ಲದೇ ಜುಲೈನಲ್ಲಿ ನಡೆದಿದ್ದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಹತ್ಯೆ ಸೇರಿ ಇತ್ತೀಚೆಗೆ ಸಿಆರ್‌ಪಿಎಫ್‌ ಯೋಧರ ಮೇಲೆ ನಡೆಸಿದ್ದ ಗುಂಡಿನ ದಾಳಿಯಲ್ಲಿಯೂ ಈತನ ಕೈವಾಡವಿತ್ತು ಎಂದು ಹೇಳಲಾಗಿತ್ತು.

Ramesh Ballamoole

View all posts by this author