ಬೆಂಗಳೂರು, ಜ.01: ಹೊಸ ವರ್ಷದ ಮೊದಲ ದಿನವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ (LPG price hike) ಬಳಕೆ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಪ್ರತಿ ತಿಂಗಳಿನಂತೆ ಈ ಬಾರಿಯೂ ಗೃಹ ಮತ್ತು ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯನ್ನು ನವೀಕರಿಸಲಾಗಿದೆ. ಕಳೆದ ವರ್ಷವಿಡೀ ಬೆಲೆ ಇಳಿಕೆಯಾಗಿತ್ತು. ಇದೀಗ ಎಷ್ಟು ದರ ಏರಿಕೆಯಾಗಿದೆ ಎಂಬುದರ ಮಾಹಿತಿ ಇಲ್ಲಿದೆ.
ಇಂಡಿಯನ್ ಆಯಿಲ್ ಪ್ರಕಾರ, ದೆಹಲಿಯಲ್ಲಿ ಇಂದಿನಿಂದ 19 ಕೆಜಿ ಎಲ್‌ಪಿಜಿ ಸಿಲಿಂಡರ್ 1580.50 ರೂ.ಗಳ ಬದಲಿಗೆ 1691.50 ರೂ.ಗಳಿಗೆ ಲಭ್ಯವಾಗಲಿದೆ. ಕೋಲ್ಕತ್ತಾದಲ್ಲಿ ಈಗ 1795 ರೂ.ಗಳಿಗೆ ಲಭ್ಯವಾಗಲಿದೆ. ಕೋಲ್ಕತ್ತಾದಲ್ಲಿಯೂ 111 ರೂ.ಗಳಷ್ಟು ಏರಿಕೆಯಾಗಿದೆ. ಚೆನ್ನೈನಲ್ಲಿ 1849.50 ರೂ ಮತ್ತು ಬೆಂಗಳೂರಿನಲ್ಲಿ 1700 ರೂಪಾಯಿ ಆಸುಪಾಸಿನಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಸಿಗಲಿದೆ.
ಗೃಹ ಬಳಕೆಯ 14 ಕೆಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ದರಗಳು ಸ್ಥಿರವಾಗಿದ್ದು, ಪ್ರಸ್ತುತ ದೆಹಲಿಯಲ್ಲಿ ₹853, ಮುಂಬೈನಲ್ಲಿ ₹852.50, ಬೆಂಗಳೂರಿನಲ್ಲಿ 855.50 ರೂ.ಗೆ ಸಿಗಲಿದೆ. 2025ರಲ್ಲಿ ಹಲವು ಬಾರಿ ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ ಇಳಿಕೆಯಾಗಿತ್ತು.
ಜನವರಿ 2025 ರಿಂದ ಡಿಸೆಂಬರ್ 2025 ರವರೆಗೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಗಳಲ್ಲಿ ಗಮನಾರ್ಹ ಬದಲಾವಣೆಗಳು ಕಂಡು ಬಂದಿವೆ. ದೆಹಲಿ, ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈನಂತಹ ಮಹಾನಗರಗಳಲ್ಲಿ ಪ್ರತಿ ಸಿಲಿಂಡರ್‌ಗೆ ಸರಾಸರಿ ₹238 ರಷ್ಟು ಬೆಲೆಗಳು ಕುಸಿದಿವೆ. ಯಾವ ತಿಂಗಳು ಎಷ್ಟು ಕಡಿಮೆಯಾಗಿತ್ತು ಎಂದು ನೋಡೋಣ ಬನ್ನಿ.
2025ರಲ್ಲಿ ಯಾವ ತಿಂಗಳು ಎಷ್ಟು ಇಳಿಕೆ?
ಜನವರಿ: 14.50 ರೂಪಾಯಿ
ಫೆಬ್ರವರಿ: 4 ರಿಂದ 7 ರೂಪಾಯಿ
ಏಪ್ರಿಲ್: 41 ರಿಂದ 44.50 ರೂಪಾಯಿ
ಮೇ: 14.50 ರಿಂದ 17 ರೂಪಾಯಿ
ಜೂನ್: 24 ರಿಂದ 25.50 ರೂಪಾಯಿ
ಜುಲೈ: 57 ರಿಂದ 58.50 ರೂಪಾಯಿ
ಆಗಸ್ಟ್: 33.50 ರಿಂದ 34.50 ರೂಪಾಯಿ
ಸೆಪ್ಟೆಂಬರ್: 50.50 ರಿಂದ 51.50 ರೂಪಾಯಿ
ನವೆಂಬರ್: 4.50 ರಿಂದ 6.50 ರೂಪಾಯಿ
ಡಿಸೆಂಬರ್: 10 ರಿಂದ 10.50 ರೂಪಾಯಿ