ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bomb Blast Attempt: ತಪ್ಪಿದ ಭಾರೀ ದುರಂತ; ಬಾಂಬ್‌ ಸ್ಫೋಟಕ್ಕೆ ಯತ್ನ; ಕಿಡಿಗೇಡಿಯ ಕೈಯಲ್ಲೇ ಬ್ಲಾಸ್ಟ್‌

ಪಂಜಾಬ್‌ನ ಅಮೃತಸರದಲ್ಲಿ ಭಾರೀ ಅನಾಹುತವೊಂದು ಅದೃಷ್ಟವಶಾತ್‌ ತಪ್ಪಿದೆ. ನಗರದಲ್ಲಿ ಬಾಂಬ್‌ ಸ್ಫೋಟಕ್ಕೆ ಯತ್ನಿಸಿದ ವ್ಯಕ್ತಿಯೊಬ್ಬನ ಕೈಯಲ್ಲೇ ಅದು ಸ್ಫೋಟ(Bomb Blast Attempt)ಗೊಂಡಿದೆ. ಬಾಂಬ್‌ ಸ್ಫೋಟಕ್ಕೆ ಯತ್ನಿಸಿದ ವ್ಯಕ್ತಿ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾಂಬ್‌ ಸ್ಫೋಟಕ್ಕೆ ಯತ್ನ; ಕಿಡಿಗೇಡಿಯ ಕೈಯಲ್ಲೇ ಬ್ಲಾಸ್ಟ್‌!

Rakshita Karkera Rakshita Karkera May 27, 2025 11:38 AM

ಅಮೃತಸರ: ಪಂಜಾಬ್‌ನ ಅಮೃತಸರದಲ್ಲಿ ಭಾರೀ ಅನಾಹುತವೊಂದು ಅದೃಷ್ಟವಶಾತ್‌ ತಪ್ಪಿದೆ. ನಗರದಲ್ಲಿ ಬಾಂಬ್‌ ಸ್ಫೋಟಕ್ಕೆ ಯತ್ನಿಸಿದ ವ್ಯಕ್ತಿಯೊಬ್ಬನ ಕೈಯಲ್ಲೇ ಅದು ಸ್ಫೋಟ(Bomb Blast Attempt)ಗೊಂಡಿದೆ. ಬಾಂಬ್‌ ಸ್ಫೋಟಕ್ಕೆ ಯತ್ನಿಸಿದ ವ್ಯಕ್ತಿ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.



ಸ್ಫೋಟದ ಶಬ್ದ ಕೇಳಿ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದರು.ಈ ಘಟನೆ ನಡೆದ ಪ್ರದೇಶವು ಅಮೃತಸರ ಗ್ರಾಮೀಣ ಪೊಲೀಸರ ವ್ಯಾಪ್ತಿಗೆ ಬರುತ್ತದೆ. ಈ ವಿಷಯದ ಬಗ್ಗೆ ಪೊಲೀಸರು ಶೀಘ್ರದಲ್ಲೇ ಹೇಳಿಕೆ ನೀಡಲಿದ್ದಾರೆ.