ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MJ Akbar: ಹಿರಿಯ ಪತ್ರಕರ್ತ, ವಿಶ್ವವಾಣಿ ಅಂಕಣಕಾರ ಎಂಜೆ ಅಕ್ಬರ್‌ ನೂತನ ಕೃತಿ ಬಿಡುಗಡೆ

Vishweshwar Bhat: ಹಿರಿಯ ಪತ್ರಕರ್ತ, ವಿಶ್ವವಾಣಿ ಅಂಕಣಕಾರ ಎಂ ಜೆ ಅಕ್ಬರ್‌ ಅವರ ಹೊಸ ಕೃತಿ ಬಿಡುಗಡೆ ಸಮಾರಂಭ ನವದೆಹಲಿಯಲ್ಲಿ ನಡೆದಿದ್ದು, ಅದರಲ್ಲಿ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಭಾಗವಹಿಸಿದ್ದರು. ಈ ಕುರಿತು ಅವರು ತಮ್ಮ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ನವದೆಹಲಿ: ಖ್ಯಾತ ಪತ್ರಕರ್ತ, ಕೇಂದ್ರದ ಮಾಜಿ ಸಚಿವ ಹಾಗೂ ವಿಶ್ವವಾಣಿ ಅಂಕಣಕಾರ ಎಂ ಜೆ ಅಕ್ಬರ್ (MJ Akbar) ಅವರು ಬರೆದ ʼಆಫ್ಟರ್‌ ಮಿ, ಕೆಯೋಸ್‌: ಆಸ್ಟ್ರಾಲಜಿ ಇನ್‌ ದಿ ಮೊಗಲ್‌ ಎಂಪೈರ್‌ʼ (After Me, Chaos : Astrology in the Mughal Empire) ಪುಸ್ತಕ ಬಿಡುಗಡೆ ಸಮಾರಂಭ ಇತ್ತೀಚೆಗೆ ದಿಲ್ಲಿಯ ಐಟಿಸಿ ಮೌರ್ಯ ಹೋಟೆಲ್‌ನಲ್ಲಿ ನಡೆಯಿತು. ರಕ್ಷಣಾ ಸಚಿವ ರಾಜನಾಥ ಸಿಂಗ್, ಕಮ್ಯೂನಿಕೇಶನ್ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಬಿಹಾರ ರಾಜ್ಯಪಾಲ ಆರೀಫ್ ಮೊಹಮದ್ ಖಾನ್, ಪ್ರಧಾನ ಮಂತ್ರಿ ವಸ್ತು ಸಂಗ್ರಹಾಲಯದ ಅಧ್ಯಕ್ಷ ನೃಪೇಂದ್ರ ಮಿಶ್ರಾ ಮತ್ತಿತರರು ಭಾಗವಹಿಸಿದರು.

ಕನ್ನಡದ ಹಿರಿಯ ಪತ್ರಕರ್ತ, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಮತ್ತಿತರ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು. ಈ ಕುರಿತು ವಿಶ್ವೇಶ್ವರ ಭಟ್‌ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ವಿವರ ನೀಡಿದ್ದಾರೆ:

ʼಅದೊಂದು “ಹೈಪ್ರೊಫೈಲ್” ಪುಸ್ತಕ ಬಿಡುಗಡೆ ಸಮಾರಂಭ. ರಕ್ಷಣಾ ಸಚಿವ ರಾಜನಾಥ ಸಿಂಗ್, ಕಮ್ಯೂನಿಕೇಶನ್ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಬಿಹಾರ ರಾಜ್ಯಪಾಲ ಆರೀಫ್ ಮೊಹಮದ್ ಖಾನ್, ಪ್ರಧಾನ ಮಂತ್ರಿ ವಸ್ತು ಸಂಗ್ರಹಾಲಯದ ಅಧ್ಯಕ್ಷ ನೃಪೇಂದ್ರ ಮಿಶ್ರಾ ವೇದಿಕೆಯಲ್ಲಿದ್ದರು. ಜತೆಯಲ್ಲಿ ಸಮಾರಂಭದ ಕೇಂದ್ರ ಬಿಂದು ಎಂ.ಜೆ.ಅಕ್ಬರ್.

v2

ಸಂದರ್ಭ : ಖ್ಯಾತ ಪತ್ರಕರ್ತ ಮತ್ತು ಕೇಂದ್ರದ ಮಾಜಿ ಸಚಿವ ಎಂ.ಜೆ.ಅಕ್ಬರ್ ಅವರು ಬರೆದ After Me, Chaos : Astrology in the Mughal Empire ಪುಸ್ತಕ ಬಿಡುಗಡೆ ಸಮಾರಂಭ.

ಸ್ಥಳ : ದಿಲ್ಲಿಯ ಐಟಿಸಿ ಮೌರ್ಯ.



ಸಭೆಯಲ್ಲಿ ಮಾಜಿ ಸಚಿವರು, ಹಾಲಿ ಮತ್ತು ನಿವೃತ್ತ ಐಎಎಸ್ - ಐಪಿಎಸ್ ಅಧಿಕಾರಿಗಳು, ಹಾಲಿ ಮತ್ತು ನಿವೃತ್ತ ರಾಜತಾಂತ್ರಿಕರು, ನಿವೃತ್ತ ರಾಜ್ಯಪಾಲರು, ವಿವಿಧ ರಾಜಕೀಯ ಪಕ್ಷಗಳ ನಾಯಕರು, ವಕ್ತಾರರು, ಪತ್ರಿಕಾ ಮಾಲೀಕರು, ಖ್ಯಾತ ಲೇಖಕರು… ಒಟ್ಟಾರೆ ಗಣ್ಯರ ದಂಡು.

ಅತ್ಯಂತ ಶಿಸ್ತಿನಿಂದ, ಅಚ್ಚುಕಟ್ಟಾಗಿ ರೂಪಿಸಿದ ಕಾರ್ಯಕ್ರಮ. ಯಾರೂ ಹದಿನೈದು ನಿಮಿಷಕ್ಕಿಂತ ಹೆಚ್ಚು ಮಾತಾಡಲಿಲ್ಲ. ನಾನು ನೋಡಿದ ಪೈಕಿ, ಕಾರ್ಯಕ್ರಮ ನಿರೂಪಕರು ಅತ್ಯಂತ ಕಡಿಮೆ ಮಾತಾಡಿದ ಸಮಾರಂಭ. ಅವರ ಒಟ್ಟಾರೆ ಮಾತು ಮೂರು ನಿಮಿಷ ಸಹ ಮೀರಿರಲಿಲ್ಲವೇನೋ?

v1

ಕೊನೆಯಲ್ಲಿ ಪುಸ್ತಕ ಬಿಡುಗಡೆ. ಇಡೀ ಕಾರ್ಯಕ್ರಮ ಒಂದೂವರೆ ಗಂಟೆಯೊಳಗೆ ಮುಗಿದು ಹೋಯಿತು. ದೃಷ್ಟಿ ಬೊಟ್ಟು ಎಂಬಂತೆ, ಎಲ್ಲೂ ಸಣ್ಣ ಲೋಪವೂ ಇರಲಿಲ್ಲ. ಕೃತಿ ಮತ್ತು ಕೃತಿಕಾರರನ್ನು ಬಿಟ್ಟು ಯಾರೂ ಬೇರೆ ವಿಷಯ ಮಾತಾಡಲಿಲ್ಲ.

ಈ ಕಾರ್ಯಕ್ರಮಕ್ಕೆ ಎಂ.ಜೆ.ಅಕ್ಬರ್ ನನ್ನನ್ನೂ ಆಹ್ವಾನಿಸಿದ್ದರು, ಹೋಗಿದ್ದೆ. ಪ್ರೀತಿಯಿಂದ ಹಸ್ತಾಕ್ಷರ ಹಾಕಿ ನನಗೂ ಒಂದು ಪುಸ್ತಕ ಕೊಟ್ಟರು. ಪುಸ್ತಕದ Acknowledgement ನಲ್ಲಿ ನನ್ನನ್ನು ಸ್ಮರಿಸಿಕೊಂಡಿದ್ದರು. ಹೋಗಿದ್ದು ಸಾರ್ಥಕ ಎನಿಸಿತು. ಒಂದು ಸ್ಮರಣೀಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಧನ್ಯತೆ.ʼ

ಹರೀಶ್‌ ಕೇರ

View all posts by this author