ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Droupadi Murmu: ರಾಷ್ಟ್ರಪತಿಗೇ ನೀವು ಹೇಗೆ ಡೆಡ್‌ಲೈನ್‌ ಕೊಡಲು ಸಾಧ್ಯ? ಸುಪ್ರೀಂ ಕೋರ್ಟ್‌ಗೆ ರಾಷ್ಟ್ರಪತಿ ಮುರ್ಮು ಖಡಕ್‌ ಪ್ರಶ್ನೆ

Murmu Asks Supreme Court: ಏಪ್ರಿಲ್‌ನಲ್ಲಿ ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು, ರಾಜ್ಯಪಾಲರು ಶಾಸಕಾಂಗ ಮಸೂದೆಗಳಿಗೆ ಅನುಮೋದನೆ ನೀಡುವುದನ್ನು ವಿಳಂಬ ಮಾಡಿದರೆ ನ್ಯಾಯಾಂಗ ಹಸ್ತಕ್ಷೇಪ ಮಾಡಬಹುದು ಎಂದು ಆದೇಶ ಹೊರಡಿಸಿತ್ತು.

ನವದೆಹಲಿ: ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ರಾಜ್ಯ ಮಸೂದೆಗಳ ಕುರಿತು ನಿರ್ಧರಿಸಲು ಗಡುವನ್ನು ನಿಗದಿಪಡಿಸುವ ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu), ಸಂವಿಧಾನದಲ್ಲಿ ಅಂತಹ ಯಾವುದೇ ಷರತ್ತುಗಳಿಲ್ಲದಿದ್ದಾಗ ಅಂತಹ ತೀರ್ಪು ಹೇಗೆ ನೀಡಲು ಸಾಧ್ಯ ಎಂದು ಬುಧವಾರ ಸುಪ್ರೀಂ ಕೋರ್ಟ್‌(Supreme Court)ಗೆ ಪ್ರಶ್ನಿಸಿದರು. ಏಪ್ರಿಲ್‌ನಲ್ಲಿ ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು, ರಾಜ್ಯಪಾಲರು ಶಾಸಕಾಂಗ ಮಸೂದೆಗಳಿಗೆ ಅನುಮೋದನೆ ನೀಡುವುದನ್ನು ವಿಳಂಬ ಮಾಡಿದರೆ ನ್ಯಾಯಾಂಗ ಹಸ್ತಕ್ಷೇಪ ಮಾಡಬಹುದು ಎಂದು ಆದೇಶ ಹೊರಡಿಸಿತ್ತು. ಅಲ್ಲದೇ ಮೂರು ತಿಂಗಳೊಳಗೆ ರಾಷ್ಟ್ರಪತಿ ಮಸೂದೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತನ್ನ ತೀರ್ಪಿನಲ್ಲಿ ತಿಳಿಸಿತ್ತು.ಇದರ ಬೆನ್ನಲ್ಲೇ ಸುಪ್ರೀಂ ಕೋರ್ಡ್‌ ತೀರ್ಪನ್ನು ರಾಷ್ಟ್ರಪತಿ ಪ್ರಶ್ನಿಸಿದ್ದಾರೆ.

ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರಿಗೆ ಮಸೂದೆಗಳ ಅನುಮೋದನೆಗೆ ನೀಡಿರುವ ಗಡುವನ್ನು ಪ್ರಶ್ನಿಸಿ ಮುರ್ಮು ಕೆಲವು ಪ್ರಶ್ನೆಗಳನ್ನು ಕೇಳಿದರು. ಮುರ್ಮು ಕೇಳಿದ ಪ್ರಶ್ನೆಗಳಾವುದು?

  • ಸಂವಿಧಾನದ ಅಡಿಯಲ್ಲಿ ರಾಷ್ಟ್ರಪತಿ/ರಾಜ್ಯಪಾಲರ ಅಧಿಕಾರಗಳನ್ನು ಸುಪ್ರೀಂ ಕೋರ್ಟ್ ವಿಧಿ 142 ರ ಅಡಿಯಲ್ಲಿ ಬದಲಾಯಿಸಲು ಹೇಗೆ ಸಾಧ್ಯ?
  • ರಾಜ್ಯಗಳು ಸುಪ್ರೀಂ ಕೋರ್ಟ್‌ನ "ಪೂರ್ಣ ಅಧಿಕಾರ"ವನ್ನು ಕೇಂದ್ರದ ವಿರುದ್ಧ ದುರುಪಯೋಗಪಡಿಸಿಕೊಳ್ಳುತ್ತಿವೆಯೇ?
  • ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಕಾಲಮಿತಿಯನ್ನು ಹೇಗೆ ನಿಗದಿಪಡಿಸಬಹುದು?

ಮುರ್ಮು, ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಅನ್ವಯವಾಗುವ 200 ಮತ್ತು 201 ನೇ ವಿಧಿಗಳನ್ನು ಉಲ್ಲೇಖಿಸಿದರು. ಈ ಎರಡು ವಿಧಿಗಳ ಪ್ರಕಾರ ರಾಜ್ಯಪಾಲರಾಗಲಿ ಅಥವಾ ರಾಷ್ಟ್ರಪತಿಯಾಗಲೀ ಮಸೂದೆಯನ್ನು ಅಂಗೀಕರಿಸಲು ಯಾವುದೇ ಸಮಯದ ಗಡುವು ಇಲ್ಲ. ಹೀಗಿರುವಾಗ ಸುಪ್ರೀಂ ಕೋರ್ಟ್‌ ಹೇಗೆ ತಾನೆ ಆ ಗಡುವು ನಿಗದಿಪಡಿಸಬಹುದಾಗಿದೆ ಎಂದು ಖಡಕ್‌ ಆಗಿ ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Justice BR Gavai:‌ ಇಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶರಾಗಿ ನ್ಯಾ. ಬಿಆರ್ ಗವಾಯಿ ಪ್ರಮಾಣ

ಸುಪ್ರೀಂ ಕೋರ್ಟ್‌ ತೀರ್ಪು ಏನು?

ಈ ವರ್ಷದ ಏಪ್ರಿಲ್‌ನಲ್ಲಿ, ರಾಜ್ಯ ವಿಧಾನಸಭೆಯು ಅಂಗೀಕರಿಸಿದ 10 ಮಸೂದೆಗಳಿಗೆ ರಾಜ್ಯಪಾಲರು ಅನಿರ್ದಿಷ್ಟಾವಧಿಗೆ ಒಪ್ಪಿಗೆ ನೀಡದೆ ತಡೆಹಿಡಿದಿದ್ದಾರೆ ಎಂದು ತಮಿಳುನಾಡು ಸರ್ಕಾರವು ನವೆಂಬರ್ 2023 ರಲ್ಲಿ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಸುಪ್ರೀಂ ಕೋರ್ಟ್ ತೀರ್ಪು ನೀಡುತ್ತಾ, ರಾಷ್ಟ್ರಪತಿಗಳು ಅನುಮೋದನೆಗಾಗಿ ಕಾಯ್ದಿರಿಸಿದ ರಾಜ್ಯ ಮಸೂದೆಗಳ ಬಗ್ಗೆ ರಾಷ್ಟ್ರಪತಿಗಳು ಮೂರು ತಿಂಗಳೊಳಗೆ ನಿರ್ಧರಿಸಬೇಕು ಎಂದು ತೀರ್ಪು ನೀಡಿತು. ಬಾಕಿ ಇರುವ 10 ಮಸೂದೆಗಳಿಗೆ ಒಪ್ಪಿಗೆ ನೀಡದಂತೆ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರ ನಿರ್ಧಾರವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು ಮತ್ತು ರಾಜ್ಯಪಾಲರು ಉಲ್ಲೇಖಿಸಿದ ಮಸೂದೆಗಳ ಕುರಿತು ನಿರ್ಧಾರ ತೆಗೆದುಕೊಳ್ಳಲು ರಾಷ್ಟ್ರಪತಿಗಳು ಮೂರು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ.