ಬೆಂಗಳೂರು, ಏ.1 : ಇತ್ತೀಚಿಗೆ ನಯಾರ (nayara) ಪೆಟ್ರೋಲ್ ಕಂಪನಿ ಪೆಟ್ರೋಲ್ (Petrol Price Hike) ಹಾಗೂ ಡಿಸೇಲ್ (Diesel) ದರ ಹೆಚ್ಚಳ ಮಾಡಿತ್ತು. ಅದರ ಬೆನ್ನಲ್ಲೇ ಇದೀಗ ಖಾಸಗಿ ಸ್ವಾಮ್ಯದ ಶೆಲ್ (Shell) ಪೆಟ್ರೋಲ್ ಬಂಕ್ ಜನತೆಗೆ ಮತ್ತೆ ಶಾಕ್ ಕೊಟ್ಟಿದೆ. ಕಳೆದ 15 ದಿನಗಳಲ್ಲಿ ಮೂರು ಬಾರಿ ದರ ಏರಿಕೆ ಮಾಡಿದ್ದ ಶೆಲ್ ಇದೀಗ ಮತ್ತೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿದೆ.
ಪ್ರೀಮಿಯಂ ಜೊತೆಗೆ ಸಾಮಾನ್ಯ ಪೆಟ್ರೋಲ್, ಡೀಸೆಲ್ ದರವೂ ಏರಿಕೆಯಾಗಿದೆ. ಸಾಮಾನ್ಯ ಪೆಟ್ರೋಲ್ ದರ ಮೊದಲು 106 ರೂ.ನಿಂದ 108.50 ರೂ. ಆಗಿತ್ತು. ನಾಲ್ಕು ದಿನದ ಹಿಂದೆ 112 ರೂ.ಗೆ ಏರಿಕೆ ಆಗಿತ್ತು. ಈಗ 119.8 ರೂ.ಗೆ ಏರಿಕೆಯಾಗಿದೆ. ಸಾಮಾನ್ಯ ಪೆಟ್ರೋಲ್ ದರ ಲೀಟರ್‌ಗೆ 7 ರೂ.ನಷ್ಟು ಹೆಚ್ಚಳವಾಗಿದೆ. ಪ್ರೀಮಿಯಂ ಪೆಟ್ರೋಲ್ ದರ ಲೀಟರ್‌ಗೆ 122.42 ರೂ.ನಿಂದ 129.8ಕ್ಕೆ ಏರಿಕೆಯಾಗಿದೆ.
ಸಾಮಾನ್ಯ ಡೀಸೆಲ್ 91 ರೂ.ನಿಂದ 93.50 ರೂ.ಗೆ ಏರಿಕೆ ಆಗಿತ್ತು. ನಾಲ್ಕು ದಿನದ ಹಿಂದೆ ಲೀಟರ್ ಡಿಸೇಲ್ 98 ರೂ. ಆಗಿತ್ತು. ಇಂದು 123ಕ್ಕೆ ಏರಿಕೆಯಾಗಿದೆ. ಡೀಸೆಲ್ ದರ 25 ರೂ. ಹೆಚ್ಚಳವಾಗಿದೆ. ಪ್ರೀಮಿಯಂ ಡೀಸೆಲ್ ಪ್ರತಿ ಲೀಟರ್‌ಗೆ 108.50 ರಿಂದ 133ಕ್ಕೆ ಏರಿಕೆಯಾಗಿದೆ.
ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ, ಸಾರ್ವಜನಿಕ ವಲಯದ ತೈಲ ಕಂಪನಿಗಳು ವಾಣಿಜ್ಯ ಬಳಕೆಯ (commercial LPG) ಎಲ್‌ಪಿಜಿ (LPG price hike) ಸಿಲಿಂಡರ್ ಬೆಲೆಯನ್ನು ಬುಧವಾರ ₹195.50 ರಷ್ಟು ಹೆಚ್ಚಳ ಮಾಡಿವೆ.
Petrol duty: ಪೆಟ್ರೋಲ್- ಡೀಸೆಲ್ ಮೇಲಿನ ಅಬಕಾರಿ ಸುಂಕ ಭಾರಿ ಕಡಿತ: ಪೆಟ್ರೋಲ್ ₹3, ಡೀಸೆಲ್ ಶೂನ್ಯ
ಈ ಏರಿಕೆಯ ನಂತರ ಬೆಂಗಳೂರಿನಲ್ಲಿ 19 ಕೆಜಿ ತೂಕದ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 1,958.00 ರೂ.ಗೆ ಏರಿದೆ. ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ₹2,078.50ಕ್ಕೆ ತಲುಪಿದೆ. ಇದಕ್ಕೂ ಮೊದಲು ಮಾರ್ಚ್ 1ರಂದು ಪ್ರತಿ ಸಿಲಿಂಡರ್ ಬೆಲೆಯನ್ನು ₹114.5 ಹೆಚ್ಚಿಸಲಾಗಿತ್ತು.
ಸಾಮಾನ್ಯ ಜನರಿಗೆ ಸಮಾಧಾನಕರ ಸಂಗತಿಯೆಂದರೆ, ಮನೆಗಳಲ್ಲಿ ಬಳಸುವ 14.2 ಕೆಜಿ ತೂಕದ ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಮಾರ್ಚ್ 7 ರಂದು ಗೃಹಬಳಕೆಯ ಸಿಲಿಂಡರ್ ಬೆಲೆಯನ್ನು ₹60 ರಷ್ಟು ಹೆಚ್ಚಿಸಲಾಗಿತ್ತು. ಪ್ರಸ್ತುತ ಬೆಂಗಳೂರಿನಲ್ಲಿ ಇದರ ಬೆಲೆ 915.50 ರೂ. ಹಾಗೂ ದೆಹಲಿಯಲ್ಲಿ ಇದರ ಬೆಲೆ ₹913 ರಷ್ಟಿದೆ.