ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jawaharlal Nehru Bungalow: ಜವಾಹರಲಾಲ್ ನೆಹರು ಅವರ ಲುಟಿಯನ್ಸ್ ಬಂಗಲೆ 1,100 ಕೋಟಿಗೆ ಮಾರಾಟ; ಖರೀದಿಸಿದವರು ಯಾರು ಗೊತ್ತಾ?

ಭಾರತ ದೇಶದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ ಮೊದಲ ಅಧಿಕೃತ ನಿವಾಸ ಮಾರಾಟವಾಗಿದ್ದು, ದೆಹಲಿಯ ಲುಟಿಯನ್ಸ್ ಪ್ರದೇಶದಲ್ಲಿರುವ ಈ ಬಂಗಲೆಯನ್ನು ಸುಮಾರು 1,100 ಕೋಟಿ ರೂ. ಮೊತ್ತಕ್ಕೆ ಸೇಲ್ ಆಗಿದೆ ಎನ್ನಲಾಗಿದೆ. ರಾಜಸ್ಥಾನಿ ರಾಜಮನೆತನದ ರಾಜಕುಮಾರಿ ಕಕ್ಕರ್ ಮತ್ತು ಬೀನಾ ರಾಣಿ ಈ ಬಂಗಲೆಯನ್ನು ಮಾರಾಟ ಮಾಡಿದ್ದು, ಉದ್ಯಮಿಯೊಬ್ಬರು ಈ ಐಷರಾಮಿ ಬಂಗಲೆಯನ್ನು ಖರೀದಿಸಿದ್ದಾರೆ ಎನ್ನಲಾಗಿದೆ.

ನೆಹರು ಐತಿಹಾಸಿಕ ಬಂಗಲೆ

ನವದೆಹಲಿ: ದೆಹಲಿಯ (Delhi) ಲುಟಿಯನ್ಸ್ (Lutyens) ವಲಯದ ಹೃದಯಭಾಗದಲ್ಲಿರುವ ಭಾರತದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್ ನೆಹರುರವರ (Jawaharlal Nehru) ಮೊದಲ ಅಧಿಕೃತ ನಿವಾಸವಾಗಿದ್ದ ಐತಿಹಾಸಿಕ ಬಂಗಲೆಯು ಸುಮಾರು 1,100 ಕೋಟಿ ರೂ.ಗೆ ಮಾರಾಟವಾಗಿದೆ. 17 ಯಾರ್ಕ್ ರೋಡ್‌ನಲ್ಲಿ, ಈಗ ಮೋತಿಲಾಲ್ ನೆಹರು ಮಾರ್ಗ ಎಂದು ಕರೆಯಲ್ಪಡುವ ಈ ಆಸ್ತಿಯು ರಾಜಧಾನಿಯ ಅತ್ಯಂತ ಶ್ರೇಷ್ಠ ವಿಳಾಸಗಳಲ್ಲಿ ಒಂದಾಗಿದೆ.

ಆಸ್ತಿಯ ಮಾಲೀಕರು

ಪ್ರಸ್ತುತ ಈ ಬಂಗಲೆಯ ಮಾಲೀಕರು ರಾಜಕುಮಾರಿ ಕಕ್ಕರ್ ಮತ್ತು ಬಿನಾ ರಾಣಿ, ರಾಜಸ್ಥಾನದ ರಾಜಮನೆತನದ ಸದಸ್ಯರೆಂದು ಹೇಳಲಾಗಿದೆ. ಸುಮಾರು 14,973 ಚದರ ಮೀಟರ್ (3.7 ಎಕರೆ) ವಿಸ್ತೀರ್ಣದಲ್ಲಿ ಹರಡಿರುವ ಈ ಆಸ್ತಿಯು 24,000 ಚದರ ಅಡಿಗಳ ಕಟ್ಟಡವನ್ನು ಒಳಗೊಂಡಿದ್ದು, ಐತಿಹಾಸಿಕ ಮತ್ತು ವಾಸ್ತುಶಿಲ್ಪದ ಮಹತ್ವವನ್ನು ಹೊಂದಿದೆ. ಖರೀದಿದಾರರ ಗುರುತನ್ನು ಗೌಪ್ಯವಾಗಿಡಲಾಗಿದ್ದು, ಪಾನೀಯ ವಲಯದ ಪ್ರಮುಖ ಉದ್ಯಮಿಯೊಬ್ಬರು ಖರೀದಿಸಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಓದಿ: Viral Video: ಪ್ರವಾಸಿಗನ ಭುಜದ ಮೇಲೆ ಕೈ ಇಟ್ಟು ನಿಂತ ಭಂಗಿಯಲ್ಲಿ ಹುಲಿಯ ಫೋಸ್; ವಿಡಿಯೊ ವೈರಲ್

ವ್ಯವಹಾರವು ಅಂತಿಮ ಹಂತದಲ್ಲಿದ್ದು, ಪ್ರಮುಖ ಕಾನೂನು ಸಂಸ್ಥೆಯೊಂದು ಆಸ್ತಿಯ ದಾಖಲೆಗಳನ್ನು ಪರಿಶೀಲಿಸುತ್ತಿದೆ. ಕಾನೂನು ಪ್ರಕ್ರಿಯೆಯ ಭಾಗವಾಗಿ, ಖರೀದಿದಾರರ ಪ್ರತಿನಿಧಿಗಳು ಏಳು ದಿನಗಳ ಒಳಗೆ ಆಸ್ತಿಯ ಮೇಲೆ ಹಕ್ಕು ಸಾಧಿಸುವವರು ಮುಂದೆ ಬರಬೇಕೆಂದು ಸಾರ್ವಜನಿಕ ಸೂಚನೆ ಹೊರಡಿಸಿದ್ದಾರೆ. ಯಾವುದೇ ಆಕ್ಷೇಪಣೆಗಳಿಲ್ಲದಿದ್ದರೆ, ಆಸ್ತಿಯ ಮೇಲೆ ಯಾವುದೇ ಸ್ಪರ್ಧಾತ್ಮಕ ಹಕ್ಕುಗಳಿಲ್ಲ ಎಂದು ಭಾವಿಸಲಾಗುವುದು.

ಲುಟಿಯನ್ಸ್ ಬಂಗಲೆ ಮಹತ್ವ

ನೆಹರುರವರೊಂದಿಗಿನ ಸಂಬಂಧದಿಂದಾಗಿ ಈ ಬಂಗಲೆಗೆ ಐತಿಹಾಸಿಕ ಮಹತ್ವವಿದೆ. ಇದು ಲುಟಿಯನ್ಸ್ ಬಂಗಲೆ ವಲಯದ (LBZ) ಒಳಗಿದ್ದು, 28 ಚದರ ಕಿಮೀ ವಿಸ್ತೀರ್ಣದ ಈ ಪ್ರದೇಶವನ್ನು 20ನೇ ಶತಮಾನದ ಆರಂಭದಲ್ಲಿ ಬ್ರಿಟಿಷ್ ವಾಸ್ತುಶಿಲ್ಪಿ ಎಡ್ವಿನ್ ಲುಟಿಯನ್ಸ್ ವಿನ್ಯಾಸಗೊಳಿಸಿದ್ದರು. LBZ ರಾಷ್ಟ್ರ ರಾಜಧಾನಿಯ ಅತ್ಯಂತ ವಿಶೇಷ ರಿಯಲ್ ಎಸ್ಟೇಟ್ ವಲಯವಾಗಿದೆ. ಇಲ್ಲಿ ಸುಮಾರು 3,000 ಬಂಗಲೆಗಳಿದ್ದು, ಬಹುತೇಕ ಸರ್ಕಾರಿ ಸ್ವಾಮ್ಯದಲ್ಲಿವೆ ಮತ್ತು ಸಚಿವರು, ಹಿರಿಯ ಅಧಿಕಾರಿಗಳು ಮತ್ತು ನ್ಯಾಯಾಧೀಶರಿಗೆ ಹಂಚಿಕೆಯಾಗಿವೆ. ಕೇವಲ 600 ಬಂಗಲೆಗಳು ಖಾಸಗಿ ಮಾಲೀಕತ್ವದಲ್ಲಿದ್ದು, ದೇಶದ ಶ್ರೀಮಂತ ಉದ್ಯಮಿಗಳು ಮತ್ತು ವ್ಯಾಪಾರಿ ಕುಟುಂಬಗಳಿಗೆ ಸೀಮಿತವಾಗಿವೆ. ಈ ಬಂಗಲೆಯ ಐತಿಹಾಸಿಕ ಮೌಲ್ಯ, ವಿಶಾಲ ಭೂಮಿ ಮತ್ತು VIP ಸ್ಥಳವು ಇದನ್ನು ದೆಹಲಿಯ ಅತ್ಯಂತ ಅಪರೂಪದ ಮತ್ತು ಆಕರ್ಷಕ ಆಸ್ತಿಯಾಗಿಸಿದೆ.