ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಇದು ಸಾವಿನ ಜೊತೆ ಸರಸ! ಹುಲಿಯ ಜೊತೆ ಭರ್ಜರಿ ಪೋಸ್‌ ಕೊಟ್ಟ ಭೂಪ- ಈ ವಿಡಿಯೊ ನೋಡಿ

tiger pose to camera: ಪ್ರವಾಸಿಗರೊಬ್ಬರು ಹುಲಿಯೊಂದಿಗೆ ಕ್ಯಾಮರಾಗೆ ಫೋಸ್ ನೀಡಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿಯ ಭುಜದ ಮೇಲೆ ತನ್ನ ಕೈಗಳನ್ನಿಟ್ಟು ಹುಲಿ ತುಂಬಾ ಚೆನ್ನಾಗಿ ಫೋಸ್ ಕೊಟ್ಟಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಈ ವಿಡಿಯೊ ಇದೀಗ ನೆಟ್ಟಿಗರ ಗಮನ ಸೆಳೆದಿದೆ.

ಇದು ಸಾವಿನ ಜೊತೆ ಸರಸ! ಹುಲಿಯ ಜೊತೆ ಭರ್ಜರಿ ಪೋಸ್‌ ಕೊಟ್ಟ ಭೂಪ

-

Priyanka P Priyanka P Sep 4, 2025 2:05 PM

ಬ್ಯಾಂಕಾಕ್: ಇತ್ತೀಚೆಗೆ ಭಾರತೀಯ ಪ್ರವಾಸಿಯೊಬ್ಬರು ಥೈಲ್ಯಾಂಡ್ (Thailand) ಪ್ರವಾಸದ ಸಮಯದಲ್ಲಿ ಮೊದಲ ಬಾರಿಗೆ ಹುಲಿಯೊಂದಿಗೆ ಪೋಸ್ ನೀಡಿದ ಹೃದಯಸ್ಪರ್ಶಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಈ ವಿಡಿಯೊ ನೆಟ್ಟಿಗರ ಗಮನ ಸೆಳೆದಿದ್ದು, ಭಾರಿ ವೈರಲ್ (Viral Video) ಆಗಿದೆ. ಅನೇಕರು ಇದನ್ನು ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಅನುಭವ ಎಂದು ಹೇಳಿದ್ದಾರೆ.

ಥೈಲ್ಯಾಂಡ್ ತನ್ನ ವನ್ಯಜೀವಿ ಆಕರ್ಷಣೆಗಳಿಗೆ ಹೆಸರುವಾಸಿಯಾಗಿದೆ. ಪ್ರವಾಸಿಗರಿಗೆ ಹುಲಿಯನ್ನು ಬಹಳ ಹತ್ತಿರದಿಂದ ನೋಡುವುದು ಒಂದು ವಿಚಿತ್ರ ಅನುಭವವಾಗಿದೆ. ಇದೀಗ ವೈರಲ್ ಆಗಿರುವ ವಿಡಿಯೊದಲ್ಲಿ, ತರಬೇತುದಾರರ ಮೇಲ್ವಿಚಾರಣೆಯಲ್ಲಿ ಹುಲಿಯ ಕೆಳಗೆ ಎಚ್ಚರಿಕೆಯಿಂದ ಕುಳಿತಿರುವ ವ್ಯಕ್ತಿಯನ್ನು ವಿಡಿಯೊದಲ್ಲಿ ನೋಡಬಹುದು. ತರಬೇತುದಾರರು ಹುಲಿಗೆ ಹಾಲು ಕುಡಿಸುತ್ತಿರುವಾಗ ವ್ಯಕ್ತಿಯನ್ನು ಕೆಳಗೆ ಕುಳ್ಳಿರಿಸಲಾಗಿದೆ. ಈ ವೇಳೆ ಆತ ಉತ್ಸಾಹ ಮತ್ತು ಕೊಂಚ ಆತಂಕಗೊಂಡಂತೆ ಕಂಡುಬಂತು. ಹುಲಿಯನ್ನು ಶಾಂತಗೊಳಿಸುವುದಕ್ಕಾಗಿ ಬಹುಷಃ ತರುಬೇತುದಾರರು ಹಾಲು ಕುಡಿಸುತ್ತಿರಬಹುದು.

ವಿಡಿಯೊ ವೀಕ್ಷಿಸಿ:

ತರಬೇತುದಾರರು ವ್ಯಕ್ತಿಗೆ ಮಾರ್ಗದರ್ಶನ ನೀಡುವುದನ್ನು ವಿಡಿಯೊದಲ್ಲಿ ಕಾಣಬಹುದು. ಪ್ರವಾಸಿಯ ಸುರಕ್ಷತೆ ಮತ್ತು ಪ್ರಾಣಿಯ ಶಾಂತತೆ ಎರಡನ್ನೂ ಖಚಿತಪಡಿಸಿಕೊಂಡಿದ್ದಾರೆ. ಹುಲಿಯು ಹಾಲು ಕುಡಿಯುವುದರಲ್ಲಿ ನಿರತವಾಗಿದ್ದಾಗ, ಮಾರ್ಗದರ್ಶಕರಲ್ಲಿ ಒಬ್ಬರು ಪ್ರವಾಸಿ ಭುಜದ ಮೇಲೆ ಹುಲಿಯ ಕೈಗಳನ್ನಿಟ್ಟಿದ್ದಾರೆ. ಆಶ್ಚರ್ಯಕರವಾಗಿ ಶಾಂತವಾಗಿದ್ದ ಹುಲಿ, ಅವನ ಭುಜದ ಮೇಲೆ ಕೈಗಳನ್ನಿಟ್ಟು ನಿಂತು ಫೋಟೋಗೆ ಫೋಸ್ ನೀಡಿದೆ.

ಈ ವಿಡಿಯೊ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ನೂರಾರು ಲೈಕ್‌ಗಳು ಮತ್ತು ಕಾಮೆಂಟ್‌ಗಳನ್ನು ಪಡೆದಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರವಾಸಿಯ ಧೈರ್ಯಕ್ಕೆ ವಿಸ್ಮಯ, ಮನೋರಂಜನೆ ಮತ್ತು ಮೆಚ್ಚುಗೆಯ ಮಿಶ್ರಣವನ್ನು ವ್ಯಕ್ತಪಡಿಸಿದರು. ವ್ಯಕ್ತಿಯ ಹೃದಯ ಬಡಿತ ಬಹಳ ವೇಗವಾಗಿ ಬಡಿಯುತ್ತಿರಬಹುದು ಎಂದು ಒಬ್ಬ ಬಳಕೆದಾರರು ತಮಾಷೆ ಮಾಡಿದ್ದಾರೆ. ಹುಲಿ ನೋಡಲು ಶಾಂತವಾಗಿ ಕಾಣುತ್ತದೆ. ಆದರೆ, ತನಗೆ ಅದರ ಪಕ್ಕದಲ್ಲಿ ಕುಳಿತುಕೊಳ್ಳುವಷ್ಟು ಧೈರ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಥೈಲ್ಯಾಂಡ್ ಬಹಳ ಹಿಂದಿನಿಂದಲೂ ವಿಶಿಷ್ಟವಾದ ವನ್ಯಜೀವಿ ಅನುಭವಗಳನ್ನು ಬಯಸುವ ಪ್ರವಾಸಿಗರಿಗೆ ಒಂದು ಸುಂದರ ತಾಣವಾಗಿದೆ. ಫುಕೆಟ್‌ನಲ್ಲಿರುವ ಟೈಗರ್ ಕಿಂಗ್‌ಡಮ್ ಮತ್ತು ಚಿಯಾಂಗ್ ಮಾಯ್‌ನಂತಹ ಸ್ಥಳಗಳು ಪ್ರವಾಸಿಗರಿಗೆ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿ ಹುಲಿಗಳನ್ನು ಹತ್ತಿರದಿಂದ ವೀಕ್ಷಿಸಬಹುದು ಮತ್ತು ಸ್ಪರ್ಶ ಮಾಡಬಹುದು. ಈ ಪ್ರಾಣಿಗಳನ್ನು ಸೆರೆಯಲ್ಲಿ ಬೆಳೆಸಲಾಗುತ್ತದೆ ಮತ್ತು ಮನುಷ್ಯರ ಸುತ್ತಲೂ ಇರಲು ತರಬೇತಿ ನೀಡಲಾಗುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Viral News: ಆಸ್ತಿಯನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಈ ಕುಟುಂಬ ಮಾಡಿದ ಮಾಸ್ಟರ್‌ ಪ್ಲ್ಯಾನ್‌ ಏನ್‌ ಗೊತ್ತಾ?