ಇಸ್ಲಮಾಬಾದ್: ಆಪರೇಷನ್ ಸಿಂದೂರ ಮೂಲದ ಭಾರತ ಕೊಟ್ಟ ತಿರುಗೇಟಿನಿಂದ ಚೇತರಿಕೊಳ್ಳುವ ಮುನ್ನವೇ ಪಾಕ್‌ಗೆ ಭಾರತ ಮತ್ತೊಂದು ಹೊಡೆತ ಕೊಟ್ಟಿದೆ. ಲಾಹೋರ್, ಕರಾಚಿ, ರಾವಲ್ಪಿಂಡಿ, ಗೋಕ್ಟಿ, ಸಿಯಾ ಕೋಟ್ ಸೇರಿದಂತೆ ಪಾಕಿಸ್ತಾನದ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿ ಇಂದು ಭಾರತ ಎರಡನೇ ಹಂತದ ದಾಳಿ ನಡೆಸಿವೆ. ಪಾಕ್ ಸೇನಾ ಪ್ರಧಾನ ಕಚೇರಿ, ಕ್ರಿಕೆಟ್ ಸ್ಟೇಡಿಯಂ, ವಾಯುನೆಲೆ, ಸೇನಾ ನೆಲೆಗಳ ಮೇಲೆ ಭಾರತದ ಡ್ರೋನ್ ದಾಳಿ ಡೆಡ್ಲಿ ಅಟ್ಯಾಕ್ ನಡೆಸಿವೆ. ಭಾರತದ ದಾಳಿ ಪಾಕಿಸ್ತಾನವನ್ನು ಪತರುಗುಟ್ಟುವಂತೆ ಮಾಡಿದೆ. ಇನ್ನು ದಾಳಿ ಬೆನ್ನಲ್ಲೇ ಪಾಕಿಸ್ತಾನ ತಾನು ಏನು ಸುಮ್ಮನೆ ಕುಳಿತಿಲ್ಲ. ಭಾರತದ 25 ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಕೊಚ್ಚಿಕೊಂಡಿದೆ. ಆ ಮೂಲಕ ಭಾರತ ಡೆಡ್ಲಿ ಅಟ್ಯಾಕ್ ನಡೆಸಿರುವುದು ನಿಜ ಎಂಬುದನ್ನು ಒಪ್ಪಿಕೊಂಡಿದೆ.
ದಾಳಿ ಬೆನ್ನಲ್ಲೇ ಪ್ರಕಟಣೆ ಹೊರಡಿಸಿರುವ ಪಾಕಿಸ್ತಾನ ಸೇನೆ, ಭಾರತದ 25 ಡ್ರೋನ್‌ಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಲಾಗಿದೆ. ಇಸ್ರೇಲಿ ನಿರ್ಮಿತ ಹರೋಪ್ ಡ್ರೋನ್‌ಗಳಿಂದ ಭಾರತ ದಾಳಿ ನಡೆಸಿತ್ತು. ಅವುಗಳನ್ನು ಪುಡಿಗಟ್ಟಲಾಗಿದೆ. ಪಾಕಿಸ್ತಾನದ ನಾನಾ ಕಡೆಗಳಿಂದ ಡ್ರೋನ್‌ಗಳ ಅವಶೇಷಗಳನ್ನು ವಶಕ್ಕೆ ಪಡೆಯಲಾಗಿವೆ.ಪಾಕಿಸ್ತಾನದ ಸಶಸ್ತ್ರ ಪಡೆಗಳು ತಮ್ಮ ಸಾಫ್ಟ್-ಕಿಲ್ (ತಾಂತ್ರಿಕ) ಮತ್ತು ಹಾರ್ಡ್-ಕಿಲ್ (ಶಸ್ತ್ರಸಜ್ಜಿತ) ಕೌಶಲ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಂಡು, ಭಾರತ ಕಳುಹಿಸಿದ್ದ 25 ಇಸ್ರೇಲ್ ನಿರ್ಮಿತ ಹರೋಪ್ ಡ್ರೋನ್‌ಗಳನ್ನು ಹೊಡೆದುರುಳಿಸಿವೆ" ಎಂದು ಸೇನೆ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Operation Sindoor 2.0: ಭಾರತೀಯ ಸೇನೆ ಪಾಕ್‌ನ ಏರ್ ಡಿಫೆನ್ಸ್ ಸಿಸ್ಟಮ್ ಮೇಲೆ ದಾಳಿ ನಡೆಸಿದ್ದೇಕೆ?
ಮೇ 6 ರಂದು ಪಾಕಿಸ್ತಾನದ ವೈಮಾನಿಕ ದಾಳಿಗೆ ಪ್ರತಿಕ್ರಿಯೆಯಾಗಿ ಉಂಟಾದ "ತನ್ನ ಐದು ಆಧುನಿಕ ಜೆಟ್‌ಗಳು, ಹಲವಾರು ಡ್ರೋನ್‌ಗಳು ಮತ್ತು ಸೈನಿಕರ ಸಾವುಗಳಿಂದ ಭಾರತ ಭಯಭೀತವಾಗಿದೆ" ಎಂದು ಅದು ಹೇಳಿದೆ.