ಮುಂಬೈ, ಏ. 2: ವಿಶ್ವ ಜಲ ದಿನ 2026ರ ಅಂಗವಾಗಿ ರಿಲಯನ್ಸ್ ಫೌಂಡೇಷನ್ (Reliance Foundation) ಆರಂಭಿಸಿದ ರಾಷ್ಟ್ರವ್ಯಾಪಿ ಅಭಿಯಾನ ʼ#Water4Lifeʼ. 33,000ಕ್ಕೂ ಉತ್ಸಾಹಿ ಸ್ವಯಂ ಸೇವಕರು ಭಾರತದಾದ್ಯಂತ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ʼಜೀವಕ್ಕಾಗಿ ನೀರುʼ ಅಭಿಯಾನದ ಉದ್ದೇಶ. ಭಾರತದಲ್ಲಿ ಜಲ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವುದು, ಪುನರುಜ್ಜೀವನಗೊಳಿಸುವುದು ಹಾಗೂ ಸುಸ್ಥಿರಗೊಳಿಸುವುದು ಈ ನಿರಂತರ ಪ್ರಯತ್ನದ ಗುರಿ. ಕಳೆದ ಹತ್ತು ದಿನದಲ್ಲಿ 912ಕ್ಕೂ ಹೆಚ್ಚು ಹಳ್ಳಿಗಳಲ್ಲಿ 1400ಕ್ಕೂ ಹೆಚ್ಚು ಜಲಮೂಲದ ಪ್ರದೇಶಗಳಲ್ಲಿ ರಿಲಯನ್ಸ್ ಫೌಂಡೇಷನ್ ಸಮುದಾಯ ಸ್ವಯಂಪ್ರೇರಿತ ಪ್ರಯತ್ನವನ್ನು ಮುನ್ನಡೆಸಿದೆ.
ಆಯಾ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯಗಳನ್ನು ಮಾಡುವುದರ ಜತೆಗೆ ದೀರ್ಘಾವಧಿ ನೀರಿನ ಆಡಳಿತ- ನಿಗಾ ಮತ್ತು ಸಮುದಾಯ ಮಾಲೀಕತ್ವ, ರೈತರ ತೊಡಗಿಸಿಕೊಳ್ಳುವಿಕೆ, ಮಹಿಳೆಯರ ಗುಂಪುಗಳು, ಯುವ ಜನರು, ಸ್ಥಳೀಯ ಸಂಸ್ಥೆಗಳು, ರಿಲಯನ್ಸ್ ಉದ್ಯೋಗಿ ಸ್ವಯಂಸೇವಕರು, ಆರೋಗ್ಯ ಸಹಾಯ ಒದಗಿಸುವವರು ಮತ್ತಷ್ಟು ಮತ್ತಷ್ಟು ಜನರು ಈ ಕಾರ್ಯಕ್ಕೆ ಜತೆಯಾದರು.
#Water4Life ಎಂಬುದು ಜಲದಿನ ಪೂರ್ವವಾಗಿ ಜಾಗೃತಿ ಮೂಡಿಸುವ ಕಾರ್ಯವನ್ನೂ ಒಳಗೊಂಡಿತ್ತು. ಅದರಲ್ಲಿ ಸರ್ಕಾರಿ ರಚನೆಗಳು ಮತ್ತು ಸ್ಥಳೀಯ ಸಂಸ್ಥೆಗಳು ಸಹ ತೊಡಗಿಕೊಂಡವು. ಅದರ ಜತೆಗೆ ಸುಲಭವಾಗಿ ಅದನ್ನು ಅನುಕರಿಸುವ ವಿಧಾನವೂ ಇತ್ತು. ಅದರಲ್ಲಿ ಸಮುದಾಯ ಒಗ್ಗೂಡಿಸುವಿಕೆ, ತ್ಯಾಜ್ಯ ಇಳಿಕೆ ಬಗೆಗಿನ ಜಾಗೃತಿ ಮತ್ತು ಜಲ ಸಾಕ್ಷರತೆ ಸಹ ಒಳಗೊಂಡಿತ್ತು.
ಕಳೆದ ಕೆಲವು ದಿನಗಳಿಂದ ಸ್ವಯಂಸೇವಕರು ಜಲ ಮೂಲಗಳಿಂದ ಪ್ಲಾಸ್ಟಿಕ್ ಹಾಗೂ ಘನ ತ್ಯಾಜ್ಯವನ್ನು ಹೊರ ತೆಗೆದಿದ್ದಾರೆ. ಅದರ ಜತೆಗೆ ವರ್ಗೀಕರಣ ಮತ್ತು ಸುರಕ್ಷಿತ ವಿಲೇವಾರಿ, ನೀರಿನ ಹರಿವು ಸುಧಾರಣೆಗೆ ಒಳಹರಿವು ಮತ್ತು ಹೊರಹರಿವಿನ ಪುನರುಜ್ಜೀವನ ಸಹ ಮಾಡಿದರು. ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಮಣ್ಣು ಹಾಗೂ ನೀರಿನ ಸಂರಕ್ಷಣೆಗೆ ಒಟ್ಟಾರೆ ಕಾರ್ಯಸೂಚಿಯನ್ನು ಸಕ್ರಿಯಗೊಳಿಸಿದರು.
15 ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ 108 ಜಿಲ್ಲೆಗಳಲ್ಲಿ 85,000 ಕೆ.ಜಿ.ಗೂ ಹೆಚ್ಚು ತ್ಯಾಜ್ಯ ಸಂಗ್ರಹಿಸಲಾಯಿತು. ರಿಲಯನ್ಸ್ ಫೌಂಡೇಷನ್ ಇಲ್ಲಿಯವರೆಗೆ 2,000 ಲಕ್ಷ ಘನ ಮೀಟರ್‌ಗೂ ಅಧಿಕ ನೀರು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದು, ಲಕ್ಷಾಂತರ ಗ್ರಾಮೀಣ ಜನರ ಜೀವನವನ್ನು ಸುಧಾರಿಸಿದೆ. ಅದರಲ್ಲಿ ಉಲ್ಲೇಖ ಮಾಡಲೇಬೇಕಾದ ಪ್ರಮುಖ ಸ್ಥಳಗಳು ಅಂದರೆ, ನರ್ಮದಾ ನದಿ ಘಾಟ್, ಪ್ರತಾಪ್‌ಗಢದ ಹೃದಯ ಭಾಗವಾದ ದಿಪೇಶ್ವರ್ ತಲಬ್, ಗೋದಾವರಿ ಮುಖಜ ಭೂಮಿಯ ಕುಲ್ಭೇರಾ ಉಪನದಿ, ಕೊಚ್ಚಿ ಕಡಲ ತೀರ, ರಣಕಲ ಸರೋವರ ಹೀಗೆ ಅನೇಕ ಕಡೆಗಳಲ್ಲಿ ಕಳೆದ ಕೆಲವು ದಿನಗಳಿಂದ ಕಾರ್ಯ ನಿರ್ವಹಿಸಲಾಯಿತು.
ವಿವಿಧ ಸ್ತರದ ಜನರು ಒಟ್ಟಾಗಿ ಇದರಲ್ಲಿ ಪಾಲ್ಗೊಂಡರು. ಅದರಲ್ಲಿ ಮುಖ್ಯವಾಗಿ ಕರ್ನಾಟಕದ ಬೆಳಗಾವಿಯ ಶಾಲೆ ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು. ದಕ್ಷಿಣ ಕೇರಳದಲ್ಲಿ ಮೀನುಗಾರ ಸಮುದಾಯಗಳು ಮತ್ತು ಪೌರ ಒಳಚರಂಡಿ ಕಾರ್ಮಿಕರು ಒಟ್ಟಾಗಿ ಎರ್ನಾಕುಲಂನಲ್ಲಿ ಇರುವ ಕೊಚ್ಚಿ ಕಡಲ ಕಿನಾರೆಯ ಐತಿಹಾಸಿಕ ಸ್ವಚ್ಛತಾ ಕಾರ್ಯಕ್ಕೆ ಕೈ ಜೋಡಿಸಿದರು. ಮಹಾರಾಷ್ಟ್ರ ಸಾಂಗ್ಲಿಯಲ್ಲಿ ಆರೋಗ್ಯ ಕಾರ್ಯಕರ್ತರು ಸ್ವಾಮಿ ಸಮರ್ಥ ಕಾಲುವೆಯ ಘಾಟ್‌ಗಳು. ಕೃಷ್ಣಾ ನದಿ ಉಪನದಿಗಳ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ಕೊಟ್ಟರು.
2,500 ಗ್ರಾಮ ಹವಾಮಾನ ರಕ್ಷಕರು
ಪ್ರಮುಖ ಪಾತ್ರವನ್ನು ನಿರ್ವಹಿಸಿದವರು 2,500 ಗ್ರಾಮ ಹವಾಮಾನ ರಕ್ಷಕರು. ಅವರಿಗೆ ರಿಲಯನ್ಸ್ ಫೌಂಡೇಷನ್‌ನಿಂದಲೇ ತರಬೇತಿ ನೀಡಲಾಗಿತ್ತು. ನೀರು ಹಾಗೂ ತ್ಯಾಜ್ಯ ನಿರ್ವಹಣೆಗೆ ಸ್ಥಳೀಯ ಕಾರ್ಯ ಚಟುವಟಿಕೆಗೆ ಉತ್ತೇಜನ ನೀಡುವುದಕ್ಕೆ ಹಾಗೂ ಜಾಗೃತಿ ಪಸರಿಸುವುದಕ್ಕೆ ತರಬೇತಿ ನೀಡಲಾಗಿತ್ತು. ಇನ್ನೂ ಮುಂದುವರಿದು ಸಮುದಾಯ ಚಾಲಿತ ಚಳವಳಿಯ ಮೂಲಕ ಇರಿಸಿಕೊಂಡಿದ್ದ ಗುರಿ ಅಂದರೆ, ನೀರಿನ ಮೂಲಗಳ ರಕ್ಷಣೆ ಬಗ್ಗೆ ಗಮನ ನೀಡುವುದು ಹಾಗೂ ದೀರ್ಘಾವಧಿಯಲ್ಲಿ ಅವುಗಳ ಪುನರುಜ್ಜೀವನ ಮಾಡುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.