ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Train Accident: ಬೆಳ್ಳಂ ಬೆಳಗ್ಗೆ ಘೋರ ದುರಂತ! ಹಳಿ ದಾಟುತ್ತಿದ್ದ ಯಾತ್ರಿಕರಿಗೆ ರೈಲು ಡಿಕ್ಕಿ

Pilgrims Hit by Train: ರೈಲ್ವೇ ಹಳಿ ದಾಟುತ್ತಿದ್ದ ಯಾತ್ರಿಕರಿಗೆ ರೈಲು ಡಿಕ್ಕಿ ಹೊಡೆದಿರುವ ಭೀಕರ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಮಿರ್ಜಾಪುರದಲ್ಲಿ ರೈಲ್ವೆ ಹಳಿಗಳನ್ನು ದಾಟುತ್ತಿದ್ದಾಗ ರೈಲು ಡಿಕ್ಕಿ ಹೊಡೆದಿದ್ದು, ಹಲವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸಂತ್ರಸ್ತರು ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಲು ಚೋಪನ್‌ನಿಂದ ವಾರಣಾಸಿಗೆ ಪ್ರಯಾಣಿಸುತ್ತಿದ್ದರು.

ಉತ್ತರಪ್ರದೇಶದ ಮಿರ್ಜಾಪುರದಲ್ಲಿ ಹಳಿ ದಾಟುತ್ತಿದ್ದ ಯಾತ್ರಿಕರಿಗೆ ರೈಲು ಡಿಕ್ಕಿ

ಲಖನೌ: ಬೆಳ್ಳಂ ಬೆಳ್ಳಗ್ಗೆ ಘೋರ ದುರಂತವೊಂದು ಉತ್ತರಪ್ರದೇಶದಲ್ಲಿ ನಡೆದಿದೆ(Pilgrims Hit by Train). ಮಿರ್ಜಾಪುರದಲ್ಲಿ ರೈಲ್ವೆ ಹಳಿಗಳನ್ನು ದಾಟುತ್ತಿದ್ದ ಪ್ರಯಾಣಿಕರ ಮೇಲೆ ರೈಲೊಂದು ಹರಿದಿದ್ದು, ಹಲವರು ಸಾವನ್ನಪ್ಪಿದ್ದಾರೆ. ಯಾತ್ರಿಕರು ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಲು ಚೋಪನ್‌ನಿಂದ ವಾರಣಾಸಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಭೀತಿ ಎದುರಾಗಿದೆ.

ದುರಂತ ಸಂಭವಿಸಿದ್ದು ಹೇಗೆ?

ಮಿರ್ಜಾಪುರದ ಚುನಾರ್‌ ರೈಲ್ವೇ ನಿಲ್ದಾಣದಲ್ಲಿ ಈ ಘೋರ ದುರಂತ ಸಂಭವಿಸಿದೆ. ಯಾತ್ರಿಕರು ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಲು ಚೋಪನ್‌ನಿಂದ ವಾರಣಾಸಿಗೆ ಪ್ರಯಾಣಿಸುತ್ತಿದ್ದರು. ಘಟನೆ ಚುನಾರ್ ರೈಲ್ವೆ ನಿಲ್ದಾಣಕ್ಕೆ ಬಂದಿಳಿದಿದ್ದ ಯಾತ್ರಿಕರು ಪ್ಯಾಸೆಂಜರ್ ರೈಲಿನಲ್ಲಿ ಆಗಮಿಸಿದ್ದರು. ರೈಲ್ವೆ ಅಧಿಕಾರಿಗಳ ಪ್ರಕಾರ, ಪ್ರಯಾಣಿಕರು ರೈಲಿನ ಪ್ಲಾಟ್‌ಫಾರ್ಮ್ ಬದಿಯಲ್ಲಿ ಇಳಿಯದೆ ಮತ್ತೊಂದು ಕಡೆ ಇಳಿದು ಹಳಿಯನ್ನು ದಾಟಲು ಯತ್ನಿಸಿದ್ದಾರೆ. ಆಗ ಇನ್ನೊಂದು ದಿಕ್ಕಿನಿಂದ ಬರುತ್ತಿದ್ದ ಮತ್ತೊಂದು ರೈಲು ಅವರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ವೈರಲ್‌ ಆಗುತ್ತಿರುವ ವಿಡಿಯೊ ಇಲ್ಲಿದೆ



ರೈಲು ಸಂಖ್ಯೆ 13309 (ಚೋಪನ್-ಪ್ರಯಾಗರಾಜ್ ಎಕ್ಸ್‌ಪ್ರೆಸ್) ಚುನಾರ್ ನಿಲ್ದಾಣದ ಪ್ಲಾಟ್‌ಫಾರ್ಮ್ 4 ಕ್ಕೆ ಬಂದಿತು. ಪ್ರಯಾಣಿಕರು ಫ್ಲ್ಯಾಟ್‌ಫಾರ್ಮ್‌ ಬದಿಯಲ್ಲಿ ಇಳಿದರೆ ಮತ್ತೊಂದು ಕಡೆ ದಾಟಲು ಸೇತುವೆ ಏರಬೇಕಾಗುತ್ತದೆ. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಮತ್ತೊಂದು ಬಾಗಿಲಿನಿಂದ ನೇರವಾಗಿ ರೈಲ್ವೇ ಹಳಿಗೆ ಇಳಿದಿದ್ದಾರೆ. ಇದರಿಂದ ಈ ಘೋರ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಪ್ರಯಾಣಿಕರು ಹಳಿ ದಾಟುತ್ತಿದ್ದಾಗ, ಇನ್ನೊಂದು ಬದಿಯಿಂದ ಬಂದ ರೈಲು ಸಂಖ್ಯೆ 12311 (ನೇತಾಜಿ ಎಕ್ಸ್‌ಪ್ರೆಸ್) ನಾಲ್ವರು ಪ್ರಯಾಣಿಕರ ಮೇಲೆ ಹರಿದಿದೆ.

ಈ ಸುದ್ದಿಯನ್ನೂ ಓದಿ: Train service: ರೈಲು ಪ್ರಯಾಣಿಕರೇ ಅಲರ್ಟ್‌...ಅಲರ್ಟ್‌! ಜೂ.1ರಿಂದ ಈ ರೈಲುಗಳ ಸಂಚಾರ ರದ್ದು

ಇನ್ನು ನಿನ್ನೆಯಷ್ಟೇ ಛತ್ತೀಸ್‌ಗಢದ (Chhattisgarh) ಬಿಲಾಸ್‌ಪುರ ಜಿಲ್ಲೆಯಲ್ಲಿ ಮಂಗಳವಾರ ಜೈರಾಮ್‌ನಗರ ನಿಲ್ದಾಣದ ಬಳಿ ಪ್ಯಾಸೆಂಜರ್ ರೈಲು ಸರಕು ರೈಲಿಗೆ ಡಿಕ್ಕಿ (Train Accident) ಹೊಡೆದಿದ್ದು, ಪರಿಣಾಮ ಕನಿಷ್ಠ ನಾಲ್ವರು ಮೃತಪಟ್ಟಿದ್ದರು. ಇದೀಗ ಸಾವಿನ ಸಂಖ್ಯೆ 11ಕ್ಕೆ ಏರಿಕೆ ಆಗಿದೆ. ದುರ್ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಸ್ಥಳೀಯ ಪ್ಯಾಸೆಂಜರ್ ರೈಲು ಮತ್ತು ಸರಕು ರೈಲು ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಕ್ಷಣಾ ಮತ್ತು ಪರಿಹಾರ ತಂಡಗಳು ಸ್ಥಳಕ್ಕೆ ತಲುಪಿದ್ದು, ಗಾಯಾಳುಗಳ ರಕ್ಷಣೆ ನಡೆಯುತ್ತಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಗೆವ್ರಾ ರಸ್ತೆಯಿಂದ ಬಿಲಾಸ್ಪುರಕ್ಕೆ ಪ್ರಯಾಣಿಸುತ್ತಿದ್ದ ಮೆಮು ಸ್ಥಳೀಯ ರೈಲು (ಸಂಖ್ಯೆ 68733) ಇಂದು ಸಂಜೆ 4 ಗಂಟೆ ಸುಮಾರಿಗೆ ಗಟೋರಾ ಮತ್ತು ಬಿಲಾಸ್ಪುರ ನಡುವಿನ ಮೇಲ್ಮುಖ ಮಾರ್ಗದಲ್ಲಿ ಸರಕು ರೈಲಿಗೆ ಡಿಕ್ಕಿ ಹೊಡೆದಿದೆ.