ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Crime News: ಗೆಳತಿಯನ್ನು ಕೊಂದ 48 ವರ್ಷಗಳ ನಂತರ ಆರೋಪಿ ಅರೆಸ್ಟ್; 23ನೇ ಹರೆಯದಲ್ಲಿ ಕೊಲೆ, 71ನೇ ವಯಸ್ಸಿನಲ್ಲಿ ಬಂಧನ

Man arrested 48 years later: 1977ರ ಹಿಂದಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 48 ವರ್ಷಗಳ ನಂತರ ಆರೋಪಿಯ ಬಂಧನವಾದ ವಿಲಕ್ಷಣ ಘಟನೆ ನಡೆದಿದೆ. ಕಾಲೇಕರ್ ಕೊಲಾಬಾದಲ್ಲಿ ತನ್ನ ಗೆಳತಿ ವಿಶ್ವಾಸದ್ರೋಹಿ ಎಂದು ಅನುಮಾನಿಸಿ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದ.

ಗೆಳತಿಯನ್ನು ಕೊಂದ 48 ವರ್ಷಗಳ ನಂತರ ಆರೋಪಿ ಅರೆಸ್ಟ್!

ಸಾಂದರ್ಭಿಕ ಚಿತ್ರ -

Priyanka P Priyanka P Oct 15, 2025 10:28 PM

ಮುಂಬೈ: 1977ರ ಹಿಂದಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಂಬೈಯ ಕೊಲಾಬಾ ಪೊಲೀಸರು 48 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದಾರೆ (Crime News). ರತ್ನಗಿರಿ ಜಿಲ್ಲೆಯ ದಾಪೋಲಿಯಲ್ಲಿರುವ ನಿವಾಸದಿಂದ 71 ವರ್ಷದ ಚಂದ್ರಶೇಖರ್ ಮಧುಕರ್ ಕಲೆಕರ್ ಎಂದು ಗುರುತಿಸಲಾದ ಆರೋಪಿಯನ್ನು ಬಂಧಿಸಲಾಗಿದೆ. ಅಪರಾಧ ನಡೆದ ಸಮಯದಲ್ಲಿ ಆತನಿಗೆ 23 ವರ್ಷ ವಯಸ್ಸಾಗಿತ್ತು.

ಕಾಲೇಕರ್ ಕೊಲಾಬಾದಲ್ಲಿ ತನ್ನ ಗೆಳತಿ ವಿಶ್ವಾಸದ್ರೋಹಿ ಎಂದು ಅನುಮಾನಿಸಿ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದ. ಆಗ ಚಂದ್ರಶೇಖರ್ ಮಧುಕರ್ ಕಲೆಕರ್‌ನನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಆದರೆ ಆತ ಮತ್ತೆ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಮೀನು ದೊರೆತ ನಂತರ, ನ್ಯಾಯಾಲಯದ ವಿಚಾರಣೆಗೆ ಹಾಜರಾಗುವುದನ್ನು ನಿಲ್ಲಿಸಿದ. ಹಲವು ವರ್ಷಗಳಲ್ಲಿ ಆತನ ವಿರುದ್ಧ ಹಲವು ವಾರಂಟ್‌ಗಳನ್ನು ಹೊರಡಿಸಲಾಯಿತು. ಅಂತಿಮವಾಗಿ ಆತನನ್ನು ಅಪರಾಧಿ ಎಂದು ಘೋಷಿಸಲಾಯಿತು. ನಾವು ದಶಕಗಳಿಂದ ಆತನನ್ನು ಹುಡುಕುತ್ತಿದ್ದೆವು ಎಂದು ಕೊಲಾಬಾದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಆರು ತಿಂಗಳ ಹಿಂದೆ ಕೊಲಾಬಾ ಪೊಲೀಸರು ಪ್ರಕರಣವನ್ನು ಮತ್ತೆ ತೆರೆದು ಹುಡುಕಾಟ ಪ್ರಾರಂಭಿಸಿದರು. ಅಧಿಕಾರಿಗಳು ಅವರ ಕೊನೆಯ ವಿಳಾಸಕ್ಕೆ ಭೇಟಿ ನೀಡಿದಾಗ ಚಾಲ್ ಬದಲಿಗೆ ಪುನರಾಭಿವೃದ್ಧಿಗೊಂಡ ಕಟ್ಟಡ ಕಂಡುಬಂತು. ಪೊಲೀಸರು ಮುಂಬೈಯ ವಿವಿಧ ಭಾಗಗಳನ್ನು ಜಾಲಾಡಿದರು. ಮತದಾರರ ಪಟ್ಟಿಗಳನ್ನು ಪರಿಶೀಲಿಸಿದರು ಮತ್ತು ಸಾರ್ವಜನಿಕ ದಾಖಲೆಗಳನ್ನು ಪರಿಶೀಲಿಸಿದರು. ಆದರೆ ಅವರ ಹೆಸರು ಎಲ್ಲಿಯೂ ಕಂಡುಬರಲಿಲ್ಲ.

ಇದನ್ನೂ ಓದಿ: Heart Attack: ಇಸ್ಪಿಟ್‌ ಅಡ್ಡದ ಮೇಲೆ ದಾಳಿ; ಪೊಲೀಸ್‌ ರಿವಾಲ್ವರ್‌ ನೋಡಿ ವ್ಯಕ್ತಿಗೆ ಹೃದಯಾಘಾತ

ಯಾವುದೇ ಚುನಾವಣಾ ದಾಖಲೆಗಳ ಮೂಲಕವೂ ನಾವು ಅವರನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಆದ್ದರಿಂದ ನಾವು ನ್ಯಾಯಾಲಯದ ದಾಖಲೆಗಳು ಮತ್ತು ಸಾರಿಗೆ ಇಲಾಖೆಯ ದತ್ತಾಂಶಗಳನ್ನು ಪರಿಶೀಲಿಸಲು ಪ್ರಾರಂಭಿಸಿದೆವು. ಆಗ ನಾವು ಆಕಸ್ಮಿಕವಾಗಿ 2015ರಲ್ಲಿ ದಾಪೋಲಿ ಪೊಲೀಸ್ ಠಾಣೆಯಲ್ಲಿ ರಸ್ತೆ ಉದ್ರಿಕ್ತ ಘಟನೆಯಲ್ಲಿ ವ್ಯಕ್ತಿಯೊಬ್ಬರನ್ನು ಗಾಯಗೊಳಿಸಿದ್ದಕ್ಕಾಗಿ ಆತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ ಎಂಬುದನ್ನು ಗಮನಿಸಿದ್ದಾಗಿ ಅಧಿಕಾರಿ ಹೇಳಿದರು.

ದಾಪೋಲಿ ಪ್ರಕರಣದಲ್ಲಿ ಪಟ್ಟಿ ಮಾಡಲಾದ ವಿಳಾಸದಲ್ಲಿ ಕಾಲೇಕರ್ ಇನ್ನೂ ವಾಸಿಸುತ್ತಿದ್ದಾನೆ ಎಂಬುದು ಖಚಿತವಾಗಿತ್ತು. ಸೋಮವಾರ ತಡರಾತ್ರಿ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿದಾಗ, ಅಲ್ಲಿ ಇದ್ದ. 48 ವರ್ಷಗಳ ನಂತರ ಪೊಲೀಸರು ತಮ್ಮ ಮನೆ ಬಾಗಿಲಿಗೆ ಬಂದಿರುವುದನ್ನು ನೋಡಿ ಆಘಾತಕ್ಕೊಳಗಾದ. ಆತ ಪ್ರಕರಣದ ಬಗ್ಗೆ ಬಹುತೇಕ ಮರೆತಿದ್ದ ಎಂದು ಅಧಿಕಾರಿ ಹೇಳಿದರು.

ಅಪರಾಧ ನಡೆದಾಗ ಕಾಲೇಕರ್‌ ಕೇವಲ 23 ವರ್ಷದ ಯುವಕನಾಗಿದ್ದ. ಈಗ 71 ವರ್ಷ ವಯಸ್ಸಾಗಿದ್ದರಿಂದ ರೂಪ ಬದಲಾಗಿದೆ. ನಮ್ಮಲ್ಲಿದ್ದ ದಶಕಗಳಷ್ಟು ಹಳೆಯ ಛಾಯಾಚಿತ್ರಗಳ ಆಧಾರದ ಮೇಲೆ ಅವನನ್ನು ಗುರುತಿಸುವುದು ಕಷ್ಟವಾಗಿತ್ತು. ಆದರೆ ಪ್ರಶ್ನಿಸಿದಾಗ, ಅವನು ಅಪರಾಧವನ್ನು ಒಪ್ಪಿಕೊಂಡನು ಎಂದು ಪೊಲೀಸರು ತಿಳಿಸಿದ್ದಾರೆ. ಕಾಲೇಕರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.