ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Coolie Movie: ಕಿರುತೆರೆಗೆ ಎಂಟ್ರಿ ಕೊಟ್ಟ ʼಕೂಲಿʼ; ಎಲ್ಲಿ ಯಾವಾಗ ನೋಡಬಹುದು ರಜನಿಕಾಂತ್ ಚಿತ್ರ?

Actor Rajinikanth: ನಟ ರಜನಿಕಾಂತ್ ಹಾಗೂ ಲೋಕೇಶ್ ಕನಕರಾಜ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದ ಕಾಲಿವುಡ್‌ ಚಿತ್ರ 'ಕೂಲಿ' ಸೂಪರ್ ಹಿಟ್ ಎನಿಸಿಕೊಂಡಿದೆ. ಇದೇ ಚಿತ್ರ ಒಟಿಟಿಯಲ್ಲೂ ತೆರೆ ಕಂಡಿದ್ದು ಅಲ್ಲಿಯೂ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ಇದೀಗ ʼಕೂಲಿʼ ಸಿನಿಮಾ ಕಿರುತೆರೆಗೆ ಎಂಟ್ರಿ ಕೊಡಲು ಸಜ್ಜಾಗಿದೆ. ಅ. 19ರಂದು 6 ಗಂಟೆಗೆ ಉದಯ ಟಿವಿಯಲ್ಲಿ ʼಕೂಲಿʼ ಚಿತ್ರ ಪ್ರಸಾರವಾಗಲಿದೆ.

ರಜನಿಕಾಂತ್ ʼಕೂಲಿʼ ಸಿನಿಮಾ ಕಿರುತೆರೆಗೆ ಎಂಟ್ರಿ

Rajinikanth's Coolie movie -

Profile Pushpa Kumari Oct 15, 2025 10:54 PM

ಬೆಂಗಳೂರು: ಕಾಲಿವುಡ್‌ ಸೂಪರ್‌ ಸ್ಟಾರ್‌ ರಜನೀಕಾಂತ್ (Rajinikanth) ಭಾರತೀಯ ಸಿನಿಮಾ ರಂಗದಲ್ಲಿ ಸ್ಟೈಲ್ ಕಿಂಗ್ ಎಂದೇ ಜನಪ್ರಿಯ. ಅವರಿಗೆ 74 ವರ್ಷ ವಯಸ್ಸಾಗಿದ್ದರೂ ಈಗಲೂ ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿ ಚಿತ್ರದಲ್ಲಿ ಕಾಣಿಸಿಕೊಂಡು ಕೋಟ್ಯಂತರ ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ. 2023ರಲ್ಲಿ ಅವರ ʼಜೈಲರ್ʼ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆದಿತ್ತು. ಇತ್ತೀಚೆಗೆ ರಜನಿಕಾಂತ್ ಹಾಗೂ ಲೋಕೇಶ್ ಕನಕರಾಜ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದ 'ಕೂಲಿ' (Coolie Movie) ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದೆ. ಬಳಿಕ ಇದೇ ಸಿನಿಮಾ ಒಟಿಟಿಗೆ ಬಂದಿದ್ದು ಅಲ್ಲಿಯೂ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ಇದೀಗ ʼಕೂಲಿʼ ಸಿನಿಮಾ ಕಿರುತೆರೆಗೆ ಎಂಟ್ರಿ ಕೊಡಲು ಸಜ್ಜಾಗಿದೆ. ಅ. 19ರಂದು 6 ಗಂಟೆಗೆ ಉದಯ ಟಿವಿಯಲ್ಲಿ ʼಕೂಲಿʼ ಚಿತ್ರ ಪ್ರಸಾರವಾಗಲಿದೆ.

ರಜನಿಕಾಂತ್ ಅಭಿನಯದ ʼಕೂಲಿʼ ಸಿನಿಮಾದಲ್ಲಿ ಬಾಲಿವುಡ್, ಟಾಲಿವುಡ್, ಸ್ಯಾಂಡಲ್‌ವುಡ್ ಸೇರಿದಂತೆ ಬಹುದೊಡ್ಡ ತಾರಾಗಣವಿದೆ. ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ (Amir Khan) ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್ ಉಪೇಂದ್ರ (Upendra), ಟಾಲಿವುಡ್‌ನ ನಾಗಾರ್ಜುನ್ ಅಕ್ಕಿನೇನಿ‌ (Nagarjuna Akkineni), ನಟಿ ರಚಿತಾ ರಾಮ್ (Rachita Ram) ಸೇರಿದಂತೆ ಹಲವು ಸೆಲೆಬ್ರಿಟಿಗಳು ಒಂದೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ದೇವ ಪಾತ್ರದಲ್ಲಿ ನಟ ರಜನಿಕಾಂತ್, ನಾಗಾರ್ಜುನ ಅಕ್ಕಿನೇನಿ ಸೈಮನ್ ಪಾತ್ರದಲ್ಲಿ, ಆಮೀರ್ ಖಾನ್ ದಹಾ ಹಾಗೂ ಉಪೇಂದ್ರ ಕಾಳೀಶನಾಗಿ ನಟಿಸಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ಇದೇ ಸಿನಿಮಾದ ಮೋನಿಕಾ ಹಾಡು ರೀಲ್ಸ್ ಸಾಂಗ್ ಟ್ರೆಂಡ್ ಉಂಟು ಮಾಡಿತ್ತು.

ಇದನ್ನು ಓದಿ:Koragajja Movie: 'ಕಾಂತಾರ ಚಾಪ್ಟರ್ 1' ಚಿತ್ರದ ಬಳಿಕ 'ಕೊರಗಜ್ಜ' ಸಿನಿಮಾ ಆರು ಭಾಷೆಗಳಲ್ಲಿ ಬಿಡುಗಡೆ!

ʼಖೈದಿʼ, ʼವಿಕ್ರಂʼ, ʼಲಿಯೋʼದಂತಹ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ನೀಡಿದ್ದ ನಿರ್ದೇಶಕ ಲೋಕೇಶ್ ಕನಗರಾಜ್ ಅವರ ಈ ಸಿನಿಮಾದಲ್ಲಿ ವಿಭಿನ್ನ ಕಥೆ, ಫೈಟ್ಸ್, ಡ್ಯಾನ್ಸ್, ಕುತೂಹಲದ ಟ್ವಿಸ್ಟ್ ಇದೆ‌. 30 ವರ್ಷಗಳ ಹಿಂದೆ ನಟ ರಜನಿಕಾಂತ್ ʼಕೂಲಿʼ ಎಂಬ ಹೆಸರಿನ ಸಿನಿಮಾ ಮಾಡಿದ್ದು ದೇವ ಎಂಬ ಪಾತ್ರಕ್ಕೆ ಜೀವ ತುಂಬಿದ್ದರು. ಈ ಸಿನಿಮಾದಲ್ಲಿ ಕೂಡ ಅದೇ ಪಾತ್ರಕ್ಕೆ ಲೇಟೆಸ್ಟ್ ವರ್ಶನ್ ಮಿಕ್ಸ್ ಮಾಡಲಾಗಿದೆ.

ಸನ್ ಪಿಕ್ಚರ್ಸ್ ಮಾಲಕರಾದ ಕಲಾನಿಧಿ ಮಾರನ್ ‘ಕೂಲಿ’ ಸಿನಿಮಾ ನಿರ್ಮಾಣ ಮಾಡಿದ್ದು ಭಾರತದ ಬಾಕ್ಸ್ ಆಫೀಸ್​ನಲ್ಲಿ ಈ ಸಿನಿಮಾ 330 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಮೂಲ ತಮಿಳಿನ ಈ ಸಿನಿಮಾವನ್ನು ಕನ್ನಡದಲ್ಲಿ ಡಬ್ ಮಾಡಲಾಗಿದೆ.