ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(PM Modi) ಅವರು ಭಾನುವಾರ(ಸೆ.31) ತಮ್ಮ ಮಾಸಿಕ ಕಾರ್ಯಕ್ರಮ ಮನ್ ಕಿ ಬಾತ್‌ನ(Mann Ki Baat) 125 ನೇ ಸಂಚಿಕೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವ ವೇಳೆ ದೇಶಾದ್ಯಂತ ನಿರಂತರ ಮಳೆಯಿಂದ ಉಂಟಾದ ಪ್ರವಾಹ, ಭೂಕುಸಿತಗಳಿಂದ ಉಂಟಾದ ವಿನಾಶದ ಬಗ್ಗೆ ದುಃಖ ವ್ಯಕ್ತಪಡಿಸಿದರು.
"ಈ ಮಳೆಗಾಲದಲ್ಲಿ, ನೈಸರ್ಗಿಕ ವಿಕೋಪಗಳು ದೇಶವನ್ನು ಪರೀಕ್ಷಿಸುತ್ತಿವೆ. ಕಳೆದ ಕೆಲವು ವಾರಗಳಲ್ಲಿ ನಾವು ಪ್ರವಾಹ ಮತ್ತು ಭೂಕುಸಿತಗಳಿಂದ ಉಂಟಾದ ಭಾರಿ ಹಾನಿಯನ್ನು ಕಂಡಿದ್ದೇವೆ. ಮನೆಗಳು ಛಿದ್ರಗೊಂಡಿವೆ, ಹೊಲಗಳು ಮುಳುಗಿವೆ, ಇಡೀ ಕುಟುಂಬಗಳು ನಾಶವಾಗಿವೆ. ನೀರಿನ ನಿರಂತರ ಉಲ್ಬಣವು ಸೇತುವೆಗಳು-ರಸ್ತೆಗಳನ್ನು ಕೊಚ್ಚಿಹಾಕಿತು ಮತ್ತು ಜನರ ಜೀವಗಳು ಅಪಾಯದಲ್ಲಿವೆ. ಈ ಘಟನೆಗಳು ಪ್ರತಿಯೊಬ್ಬ ಭಾರತೀಯನನ್ನು ದುಃಖಿಸಿವೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳ ನೋವನ್ನು ನಾವೆಲ್ಲರೂ ಹಂಚಿಕೊಳ್ಳುತ್ತೇವೆ" ಎಂದು ಪ್ರಧಾನಿ ಮೋದಿ ಹೇಳಿದರು.
ಮನ್ ಕಿ ಬಾತ್ ನ 124 ನೇ ಆವೃತ್ತಿಯಲ್ಲಿ, ಪ್ರಧಾನಿ ಮೋದಿ ಅವರು ಬಾಹ್ಯಾಕಾಶ ಪರಿಶೋಧನೆ, ವಿಜ್ಞಾನ, ಕ್ರೀಡೆ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತದ ಪ್ರಗತಿಪರ ಸಾಧನೆಗಳ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದ್ದರು. ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸಾಧನೆಯನ್ನು ಕೊಂಡಾಡಿ, ಇದು ದೇಶಕ್ಕೆ ಹೆಮ್ಮೆಯ ಮಹತ್ವದ ಕ್ಷಣವಾಗಿದೆ ಎಂದು ಶ್ಲಾಘಿಸಿದ್ದರು.
ಇದನ್ನೂ ಓದಿ Narendra Modi: ಮೋದಿ-ವ್ಯಾನ್ಸ್ ದ್ವಿಪಕ್ಷೀಯ ಮಾತುಕತೆ; ವ್ಯಾಪಾರ ಒಪ್ಪಂದಕ್ಕೆ ಆದ್ಯತೆ