ಅಯೋಧ್ಯೆ: ಇಂದು ಇಡೀ ದೇಶವೇ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಸುಮಾರು 500 ವರ್ಷಗಳ ನಂತರ ಅಯೋಧ್ಯೆ ಶ್ರೀರಾಮ ಮಂದಿರದ ಶಿಖರದ ಮೇಲೆ ಧರ್ಮ ಧ್ವಜ ಹಾರಾಡಿದೆ. ಪ್ರಧಾನಿ ನರೇಂದ್ರ ಮೋದಿ(PM Narendra Modi) ಇಂದು ಅಭಿಜಿತ್ ಲಘ್ನದಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಇಂದು ಶತಮಾನಗಳ ವೇದನೆಗೆ ಇಂದು ಪೂರ್ಣ ವಿರಾಮ ಸಿಕ್ಕಿದೆ. ಶ್ರೀರಾಮ ಮಂದಿರದ ನಿರ್ಮಾಣ ಪೂರ್ಣಗೊಂಡಿರುವ ಸಾಕ್ಷಿಯಾಗಿ ಈ ಧ್ವಜವನ್ನು ಹಾರಿಸಲಾಗಿದೆ. ಇದು ಶತಮಾನದ ಸಂಕಲ್ಪ ನೆರವೇರಿರುವುದಕ್ಕೆ ಸಾಕ್ಷಿ ಎಂದರು.
ಇಂದು, ಭಗವಾನ್ ರಾಮನ ಹೆಸರು ಇಡೀ ಪ್ರಪಂಚದಾದ್ಯಂತ ಪ್ರತಿಧ್ವನಿಸುತ್ತದೆ. ರಾಮನ ಪ್ರತಿಯೊಬ್ಬ ಭಕ್ತನ ಹೃದಯದಲ್ಲಿ ಅಪ್ರತಿಮವಾದ ತೃಪ್ತಿಯ ಭಾವನೆ, ಅಪಾರ ಕೃತಜ್ಞತೆ ಇದೆ. ಶತಮಾನಗಳ ಗಾಯಗಳು ಗುಣವಾಗಲು ಪ್ರಾರಂಭಿಸಿವೆ. ಶತಮಾನಗಳ ನೋವು ಇಂದು ಮರೆಯಾಗಿದೆ. ಶತಮಾನಗಳ ಸಂಕಲ್ಪ ಇಂದು ಈಡೇರುತ್ತಿದೆ. ಐದುನೂರು ವರ್ಷಗಳ ಕಾಲ ಉರಿಯುತ್ತಿದ್ದ ಆ ಪವಿತ್ರ ಯಜ್ಞದ ಪೂರ್ಣಗೊಳಿಸುವಿಕೆ ಇದು ಸಾಕ್ಷಿ ಎಂದು ಅವರು ಹೇಳಿದರು.
ಪ್ರಧಾನಿ ಮೋದಿ ಭಾಷಣದ ವಿಡಿಯೊ
ಧರ್ಮಧ್ವಜವನ್ನು ಕೇವಲ ಆಚರಣೆಯ ವಸ್ತುವಲ್ಲ, ಬದಲಾಗಿ ಪ್ರಬಲ ಸಂಕೇತ ಎಂದು ಕರೆದ ಮೋದಿ,"ಈ ಧರ್ಮಧ್ವಜವು ಸಂಕಲ್ಪದ ಸಂಕೇತವಾಗಿದೆ. ಈ ಧರ್ಮಧ್ವಜವು ಹೋರಾಟದಿಂದ ಹುಟ್ಟಿದ ವಿಜಯದ ಕಥೆಯಾಗಿದೆ. ಈ ಧರ್ಮಧ್ವಜವು ಶತಮಾನಗಳಿಂದ ಹೊತ್ತೊಯ್ಯಲ್ಪಟ್ಟ ಕನಸಿನ ಸಾಕಾರ ರೂಪವಾಗಿದೆ. ಧ್ವಜವು ಸಂತರ ಭಕ್ತಿ ಮತ್ತು ಸಮಾಜದ ಸಾಮೂಹಿಕ ಭಾಗವಹಿಸುವಿಕೆಯ ಪವಿತ್ರ ಫಲಿತಾಂಶ ಮತ್ತು ಇದು ಭಗವಾನ್ ರಾಮನ ಆದರ್ಶಗಳು ಮತ್ತು ತತ್ವಗಳನ್ನು ಘೋಷಿಸಲು ಸಹಸ್ರಾರು ವರ್ಷಗಳ ಕಾಲ ಮುಂದುವರಿಯುತ್ತದೆ ಎಂದು ಅವರು ಹೇಳಿದರು.
Ayodhya Dhwajarohan: ಅಯೋಧ್ಯೆ ರಾಮಮಂದಿರ ಧ್ವಜಾರೋಹಣಕ್ಕೆ ಕರ್ನಾಟಕದ್ದೇ ಹೂವು!
"ನಾವು ನಮ್ಮ ರಾಮನೊಂದಿಗೆ ವ್ಯತ್ಯಾಸಗಳ ಮೂಲಕ ಅಲ್ಲ, ಭಾವನೆಗಳ ಮೂಲಕ ಸಂಪರ್ಕ ಹೊಂದುತ್ತೇವೆ. ರಾಮನ ಮೌಲ್ಯಗಳಾದ ಕರ್ತವ್ಯ ನಿಷ್ಠೆ, ಕರುಣೆ, ಧೈರ್ಯ ಮತ್ತು ನ್ಯಾಯದ ಮೂಲಕ ಮುಂದಿನ ದಶಕಗಳಲ್ಲಿ ಭಾರತದ ಹಾದಿಯನ್ನು ರೂಪಿಸಬೇಕು. 2047 ರ ವೇಳೆಗೆ ದೇಶವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಆಶಿಸಿದರೆ, ಅದು ರಾಮನ ಆದರ್ಶಗಳಿಂದ ಸ್ಫೂರ್ತಿ ಪಡೆಯಬೇಕು. 2047 ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಬೇಕಾದರೆ, ಜನರು ತಮ್ಮನ್ನು ತಾವು ಸಬಲೀಕರಣಗೊಳಿಸಿಕೊಳ್ಳಲು ಬಯಸಿದರೆ ನಾವು ರಾಮ ತೋರಿಸಿದ ಹಾದಿಯಲ್ಲಿ ನಡೆಯಬೇಕು ಎಂದು ಅಭಿಪ್ರಾಯ ಪಟ್ಟರು.
ಈ ಸಮಾರಂಭವನ್ನು ವಿಶ್ವಾದ್ಯಂತ ಲಕ್ಷಾಂತರ ಭಕ್ತರಿಗೆ ಅಪಾರ ತೃಪ್ತಿ ತಂದ ಕ್ಷಣ ಎಂದು ಮೋದಿ ಬಣ್ಣಿಸಿದರು. "ಇಂದು, ಭಗವಾನ್ ರಾಮನ ಹೆಸರು ಇಡೀ ಪ್ರಪಂಚದಾದ್ಯಂತ ಪ್ರತಿಧ್ವನಿಸುತ್ತದೆ. ಪ್ರತಿಯೊಬ್ಬ ಭಕ್ತರ ಹೃದಯದಲ್ಲಿ ಅಪ್ರತಿಮವಾದ ತೃಪ್ತಿಯ ಭಾವನೆ ಇದೆ. ಪ್ರತಿಯೊಬ್ಬ ಭಕ್ತರು ಅಪಾರವಾದ ಕೃತಜ್ಞತಾ ಭಾವವನ್ನು ಹೊಂದಿದ್ದಾರೆ. ಅಯೋಧ್ಯೆಯ ರಾಮ ಮಂದಿರ ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪುನರುಜ್ಜೀವನದ ಜ್ಞಾಪನೆಗಳಾಗಿವೆ. ನಂಬಿಕೆ ಮತ್ತು ಹೋರಾಟ ಎರಡಕ್ಕೂ ದೀರ್ಘಕಾಲ ಸಂಬಂಧ ಹೊಂದಿದ್ದ ಅಯೋಧ್ಯೆ ಈಗ ಸಾಂಸ್ಕೃತಿಕ ಹೆಮ್ಮೆಯ ದಾರಿದೀಪವಾಗಿ ನಿಂತಿದೆ ಎಂದು ಪ್ರಧಾನಿ ಹೇಳಿದರು. "ಇಂದು, ಅಯೋಧ್ಯಾ ನಗರವು ಭಾರತದ ಸಾಂಸ್ಕೃತಿಕ ಪ್ರಜ್ಞೆಗೆ ಸಾಕ್ಷಿಯಾಗುತ್ತಿದೆ. ರಾಮನ ಮೌಲ್ಯಗಳನ್ನು ನಂಬಿಕೆಯ ವಿಷಯವಾಗಿ ಮಾತ್ರವಲ್ಲದೆ ರಾಷ್ಟ್ರೀಯ ಪ್ರಗತಿ, ಸಾಮಾಜಿಕ ಸಾಮರಸ್ಯ ಮತ್ತು ಭವಿಷ್ಯದ ಪೀಳಿಗೆಗೆ ನೀಲನಕ್ಷೆಯಾಗಿ ಎತ್ತಿಹಿಡಿಯಬೇಕೆಂದು ಅವರು ಭಕ್ತರನ್ನು ಒತ್ತಾಯಿಸಿದರು.