ಲಖನೌ, ಅ. 25: ತಮ್ಮ ಸಂಸದೀಯ ಕ್ಷೇತ್ರವಾದ ಉತ್ತರ ಪ್ರದೇಶದ ವಾರಣಾಸಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಅದ್ಧೂರಿ ಸ್ವಾಗತ ಲಭಿಸಿತು. ರಸ್ತೆಯ ಇಕ್ಕಲೆಗಳಲ್ಲಿ ನೆರೆದ ಸಾವಿರಾರು ಮಂದಿ ಮೋದಿ ಅವರಿಗೆ ಜೈಕಾರ ಹಾಕಿ ಸ್ವಾಗತ ಕೋರಿದರು. ಭರ್ಜರಿ ರೋಡ್ ಶೋ ಮೂಲಕ ಅವರು ನವೋ ಘಾಟ್ಗೆ ಆಗಮಿಸಿ ಭಾರತೀಯ ವಾಯುಪಡೆಯ ರೋಚಕ ಸಾಹಸ ಪ್ರದರ್ಶನ ವೀಕ್ಷಿಸಿದರು. ವಾಯುಪಡೆ 94ನೇ ವಾರ್ಷಿಕೋತ್ಸವ (94th Indian Air Force Day) ಆಚರಿಸುತ್ತಿರುವ ಹಿನ್ನೆಲೆಯಲ್ಲಿ 94 ವಿಮಾನಗಳು ಪ್ರದರ್ಶನ ನೀಡಿದವು.
ವಿಂಗ್ ಓವರ್ ಗಂಗಾಸ್ ಧ್ಯೇಯದಡಿ ಆಯೋಜಿಸಿದ ಈ ವೈಮಾನಿಕ ಪ್ರದರ್ಶನದಲ್ಲಿ ಫೈಟರ್ ಜೆಟ್, ಸಾಮಾನ್ಯ ವಿಮಾನ, ರಕ್ಷಣಾ ಕಾರ್ಯಾಚರಣೆಯ ಹೆಲಿಕಾಪ್ಟರ್ಗಳು ಭಾಗವಹಿಸಿದವು. ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ಈ ಭೇಟಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಮೂಲಕ ಬಿಜೆಪಿ ಚುನಾವಣೆಗೆ ಭರ್ಜರಿ ತಯಾರಿ ಮಾಡಿಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮೋದಿ ಜತೆಗೆ ಉತ್ತರ ಪ್ರದೇಶ ಮುಖ್ಯಮಂತಿ ಯೋಗಿ ಆದಿತ್ಯನಾಥ್ ಕೂಡ ಭಾಗವಹಿಸಿದರು. ಭರ್ಜರಿ ರೋಡ್ ಶೋ ನಡೆಸುವ ಮೂಲಕ ಗಮನ ಸೆಳೆದ ಮೋದಿ ಬಳಿಕ ಸ್ಥಳೀಯರೊಂದಿಗೆ ಸಮಾಲೋಚನೆಯನ್ನೂ ನಡೆಸಿದರು.
ನರೇಂದ್ರ ಮೋದಿ ಅವರ ರೋಡ್ ಶೋ:
ಯುದ್ಧ ವಿಮಾನಗಳೂ ಭಾಗಿ
ಈ ವೈಮಾನಿಕ ಪ್ರದರ್ಶನದಲ್ಲಿ ತೇಜಸ್, ಲಘು ಯುದ್ಧ ಹೆಲಿಕಾಪ್ಟರ್ (LCH) ಪ್ರಚಂಡ, IL-76, IL-78, C-295 ಮತ್ತು AN-32 ಸೇರಿ ವಿವಿಧ ವಿಮಾನಗಳು ಹಾಗೂ SU-30MKI ಮತ್ತು ರಫೇಲ್ನಂತಹ ಮುಂಚೂಣಿ ಯುದ್ಧ ವಿಮಾನಗಳು ಪ್ರದರ್ಶನಗೊಂಡವು. ಭಾರತೀಯ ನೌಕಾಪಡೆ ಮತ್ತು ಭಾರತೀಯ ಸೇನೆಯ ವಿಮಾನಗಳು ಕೂಡ ಇದರಲ್ಲಿ ಭಾಗವಹಿಸಿವೆ.
'ಮನ್ ಕಿ ಬಾತ್' ಒಂದು ಸುಂದರ ತೀರ್ಥಯಾತ್ರೆ: 139ನೇ ಸಂಚಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ
ಅರವಿಂದ್ ಲಿಮಿಟೆಡ್ನ ಹೊಸ ಫ್ಯಾಕ್ಟರಿ ಉದ್ಘಾಟನೆ
ಇದಕ್ಕೂ ಮೊದಲು ಮೋದಿ ವಾರಣಾಸಿಯಲ್ಲಿ ಜವುಳಿ ಕ್ಷೇತ್ರದ ಪ್ರಸಿದ್ಧ ಕಂಪನಿ ಅರವಿಂದ್ ಲಿಮಿಟೆಡ್ನ ಹೊಸ ಉಡುಪು ತಯಾರಿಕಾ ಘಟಕವನ್ನು ಉದ್ಘಾಟಿಸಿದರು. ಕೈಗಾರಿಕಾ ಹೂಡಿಕೆ, ಉತ್ಪಾದನಾ ಆಧಾರಿತ ಬೆಳವಣಿಗೆ ಮತ್ತು ಮಹಿಳಾ ನೇತೃತ್ವದ ಅಭಿವೃದ್ಧಿಗೆ ಈ ಪ್ರದೇಶದ ಕೊಡುಗೆಯನ್ನು ಅವರು ಒತ್ತಿ ಹೇಳಿದರು. ಈ ಘಟಕವು ಕೈಗಾರಿಕಾ ಹೂಡಿಕೆಯ ತಾಣವಾಗಿ ಉತ್ತರ ಪ್ರದೇಶದ ಸ್ಥಾನವನ್ನು ಬಲಪಡಿಸಲಿದೆ ಎಂದರು. ಅಲ್ಲದೆ ಜವುಳಿ ಮತ್ತು ಉಡುಪು ಉತ್ಪಾದನಾ ವಲಯದಲ್ಲಿ ತನ್ನ ಪ್ರಭಾವವನ್ನು ಮತ್ತಷ್ಟು ಹೆಚ್ಚಿಸಲಿದೆ ಎನ್ನುವ ಲೆಕ್ಕಾಚಾರವಿದೆ.
ವೈಮಾನಿಕ ಪ್ರದರ್ಶನ ವೀಕ್ಷಿಸಿದ ಮೋದಿ:
ಮಹಿಳೆಯರ ನೇತೃತ್ವದಲ್ಲಿರುವ ಈ ಯೋಜನೆಯು, ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆ ಮತ್ತು ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಉತ್ತೇಜಿಸಲಿದೆ. ಇದು ಉಡುಪು ತಯಾರಿಕಾ ವಲಯದಲ್ಲಿ ಅವಕಾಶಗಳನ್ನು ಸೃಷ್ಟಿಸುವುದರ ಜತೆಗೆ, ಈ ಪ್ರದೇಶದ ಕೈಗಾರಿಕಾ ಬೆಳವಣಿಗೆಗೆ ಕೊಡುಗೆ ನೀಡುವ ನಿರೀಕ್ಷೆಯಿದೆ ಎಂದು ಬಿಜೆಪಿ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಸಂಸತ್ತಿನಲ್ಲಿ ನರೇಂದ್ರ ಮೋದಿ-ಮಲ್ಲಿಕಾರ್ಜುನ ಖರ್ಗೆ ನಡುವೆ ಲಘು ಹಾಸ್ಯ, ಹಸ್ತಲಾಘವ
ಅರವಿಂದ್ ಲಿಮಿಟೆಡ್ ಜಾಗತಿಕ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿರುವುದರಿಂದ ಈ ಹೊಸ ಘಟಕವು ವಾರಣಾಸಿಯಲ್ಲಿ ತಯಾರಾದ ಉಡುಪುಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸಲು ಅನುವು ಮಾಡಿಕೊಡಲಿದೆ. ಈ ಬೆಳವಣಿಗೆಯು ಭಾರತದ ಜವುಳಿ ಮತ್ತು ಉಡುಪು ಉತ್ಪಾದನಾ ವಲಯವನ್ನು ಇನ್ನಷ್ಟು ಬಲಪಡಿಸುವ ನಿರೀಕ್ಷೆ ಇದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.