ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rajnath Singh: ಪಿಒಕೆ ನಮ್ಮದು... ಅಲ್ಲಿನ ಜನ ಭಾರತಕ್ಕೆ ಮರಳಲಿದ್ದಾರೆ; ಮತ್ತೆ ಆಪರೇಷನ್‌ ಸುಳಿವು ನೀಡಿದ್ರಾ ರಕ್ಷಣಾ ಸಚಿವ?

ಭಾರತ ಹಾಗೂ ಪಾಕಿಸ್ತಾನದ ನಡುವೆ ಇರುವ ಉದ್ವಗ್ನತೆ ಕೊಂಚ ತಣ್ಣಗಾಗಿದೆ. ಇದೀಗ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಅವರು ಮಹತ್ವದ ಹೇಳಿಕೆಯೊಂದನ್ನು ಹೇಳಿದ್ದಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ವಾಸಿಸುವವರು ಭಾರತದ ಸ್ವಂತ ಜನರು ಮತ್ತು ಒಂದು ದಿನ ಅವರು ಭಾರತೀಯರು ಎಂದು ಹೇಳಿಕೊಂಡು ದೇಶಕ್ಕೆ ಹಿಂತಿರುಗುತ್ತಾರೆ ಎಂದು ಗುರುವಾರ ಸಚಿವ ಹೇಳಿದರು.

ಪಿಒಕೆ ನಮ್ಮದು, ಅಲ್ಲಿನ ಜನ ಭಾರತಕ್ಕೆ ಮರಳಿ ಬರಲಿದ್ದಾರೆ; ರಾಜನಾಥ್‌ ಸಿಂಗ್‌

Vishakha Bhat Vishakha Bhat May 29, 2025 3:02 PM

ನವದೆಹಲಿ: ಭಾರತ ಹಾಗೂ ಪಾಕಿಸ್ತಾನದ ನಡುವೆ ಇರುವ ಉದ್ವಗ್ನತೆ ಕೊಂಚ ತಣ್ಣಗಾಗಿದೆ. ಇದೀಗ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ (Rajnath Singh) ಅವರು ಮಹತ್ವದ ಹೇಳಿಕೆಯೊಂದನ್ನು ಹೇಳಿದ್ದಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (POK) ವಾಸಿಸುವವರು ಭಾರತದ ಸ್ವಂತ ಜನರು ಮತ್ತು ಒಂದು ದಿನ ಅವರು ಭಾರತೀಯರು ಎಂದು ಹೇಳಿಕೊಂಡು ದೇಶಕ್ಕೆ ಹಿಂತಿರುಗುತ್ತಾರೆ ಎಂದು ಗುರುವಾರ ಸಚಿವ ಹೇಳಿದರು. ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಪಾಕಿಸ್ತಾನದ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವಾಗ ಭಾರತ ಇನ್ನೂ ಹೆಚ್ಚಿನದನ್ನು ಮಾಡಬಹುದಿತ್ತು. ಆದರೆ ಇಷ್ಟಕ್ಕೇ ಪಾಕಿಸ್ತಾನ ಬೆಚ್ಚಿ ಬಿದ್ದಿದೆ ಎಂದರು.

ಆಪರೇಷನ್‌ ಸಿಂದೂರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು ನಮ್ಮ ತಾಕತ್ತು ಏನೆಂಬುದು ಜಗತ್ತಿಗೆ ತಿಳಿದಿದೆ ಎಂದು ಹೇಳಿದರು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವಾಸಿಸುವ ಜನರು ನಮ್ಮವರು. ಅವರು ಭಾರತಕ್ಕೆ ಸೇರಬೇಕು ಎಂದು ಬಯಸುತ್ತಾರೆ. ಕೆಲವರಿಂದ ಅಲ್ಲಿನ ಪರಿಸ್ಥಿತಿ ಹಾಳಾಗುತ್ತಿದೆ. "ಇಂದು ನಮ್ಮಿಂದ ಭೌಗೋಳಿಕವಾಗಿ ಮತ್ತು ರಾಜಕೀಯವಾಗಿ ಬೇರ್ಪಟ್ಟಿರುವ ನಮ್ಮ ಸಹೋದರರು ಸಹ ಒಂದು ದಿನ ಭಾರತದ ಮುಖ್ಯವಾಹಿನಿಗೆ ಮರಳುತ್ತಾರೆ. ಅವರು ತಮ್ಮ ತಾಯ್ನಾಡಿಗೆ ಮರಳುತ್ತಾರೆ ಎಂದು ಹೇಳಿದ್ದಾರೆ.

ಭಾರತ ಯಾವಾಗಲೂ ಹೃದಯಗಳನ್ನು ಸಂಪರ್ಕಿಸುವ ಬಗ್ಗೆ ಮಾತನಾಡುತ್ತದೆ, ಮತ್ತು ಪ್ರೀತಿ, ಏಕತೆ ಮತ್ತು ಸತ್ಯದ ಹಾದಿಯಲ್ಲಿ ನಡೆಯುವ ಮೂಲಕ, ನಮ್ಮದೇ ಭಾಗವಾದ ಪಿಒಕೆ ನಮ್ಮ ಬಳಿಗೆ ಹಿಂದಿರುಗಿ, ನಾನು ಭಾರತಕ್ಕೆ ಮರಳಿದ್ದೇನೆ ಎಂದು ಹೇಳುವ ಕಾಲ ದೂರ ಇಲ್ಲ ಎಂದು ರಕ್ಷಣಾ ಸಚಿವ ಹೇಳಿದರು.

ಈ ಸುದ್ದಿಯನ್ನೂ ಓದಿ: Spying for Pakistan: ಐಎಸ್‌ಐ ಪರ ಬೇಹುಗಾರಿಕೆ, ಪಾಕಿಸ್ತಾನಕ್ಕೆ 7 ಬಾರಿ ಭೇಟಿ; ರಾಜಸ್ಥಾನ ಸರ್ಕಾರಿ ನೌಕರನ ಬಂಧನ

ಭಾರತ ಹಾಗೂ ಪಾಕಿಸ್ತಾನದ ನಡುವೆ ಇರುವ ಉದ್ವಗ್ನತೆ ಕೊಂಚ ತಣ್ಣಗಾಗಿದೆ. ಇದೀಗ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಅವರು ಮಹತ್ವದ ಹೇಳಿಕೆಯೊಂದನ್ನು ಹೇಳಿದ್ದಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ವಾಸಿಸುವವರು ಭಾರತದ ಸ್ವಂತ ಜನರು ಮತ್ತು ಒಂದು ದಿನ ಅವರು ಭಾರತೀಯರು ಎಂದು ಹೇಳಿಕೊಂಡು ದೇಶಕ್ಕೆ ಹಿಂತಿರುಗುತ್ತಾರೆ ಎಂದು ಗುರುವಾರ ಸಚಿವ ಹೇಳಿದರು. ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಪಾಕಿಸ್ತಾನದ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವಾಗ ಭಾರತ ಇನ್ನೂ ಹೆಚ್ಚಿನದನ್ನು ಮಾಡಬಹುದಿತ್ತು. ಆದರೆ ಇಷ್ಟಕ್ಕೇ ಪಾಕಿಸ್ತಾನ ಬೆಚ್ಚಿ ಬಿದ್ದಿದೆ ಎಂದರು.