ಪುಣೆ: ಮಾವಲ್ ತಾಲೂಕಿನಲ್ಲಿ ಆಘಾತಕಾರಿ ಘಟನೆ ನಡೆದಿದೆ. ತಲೆಗಾಂವ್ ದಭಾಡೆ ಪಟ್ಟಣದ ಬಳಿಯ ಪ್ರಸಿದ್ಧ ಪ್ರವಾಸಿ ತಾಣವಾದ ಕುಂಡ್ಮಾಲಾದಲ್ಲಿ ಇಂದ್ರಯಾಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಹಳೆಯ ಸೇತುವೆ(Pune Bridge Collapse) ಕುಸಿದಿದೆ. ಅನೇಕ ಪ್ರವಾಸಿಗರು ಇಂದ್ರಯಾಣಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಮತ್ತು 20 ರಿಂದ 25 ಜನರು ನೀರುಪಾಲಾಗಿರುವ ಶಂಕೆ ವ್ಯಕ್ತವಾಗಿದೆ.
ಪುಣೆಯ ಮಾವಲ್‌ನಲ್ಲಿರುವ ಕುಂಡ್ ಮಾಲ್‌ನಲ್ಲಿ ಸೇತುವೆ ಕುಸಿದು ಕೆಲವು ಪ್ರವಾಸಿಗರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಭಾನುವಾರ ಮಧ್ಯಾಹ್ನ 3.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಪಿಂಪ್ರಿ-ಚಿಂಚ್‌ವಾಡ್ ಪೊಲೀಸ್ ಕಮಿಷನರೇಟ್‌ನ ತಲೆಗಾಂವ್ ದಭಾಡೆ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಇನ್ನು ಈ ಸೇತುವೆ ಏಕಾಏಕಿ ಕುಸಿದು ಬೀಳಲು ಕಾರಣ ಏನೆಂಬುದು ತಿಳಿದಿಲ್ಲ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುರಿದಿದೆ.
ಈ ಸುದ್ದಿಯನ್ನೂ ಓದಿ: Karnataka Rains: ಮಲಪ್ರಭಾ ನದಿ ರಭಸಕ್ಕೆ ಕೊಚ್ಚಿ ಹೋದ ಸೇತುವೆ; ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ಭಾನುವಾರವಾದ್ದರಿಂದ, ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಇದ್ದರು. ಕೆಲವರು ಸೇತುವೆಯ ಮೇಲೆ ನಿಂತಿದ್ದರು. ಆ ಸಮಯದಲ್ಲಿ, ಈ ಸೇತುವೆ ಕುಸಿದಿದೆ. ಇದರಲ್ಲಿ ಎಷ್ಟು ಜನರು ಮುಳುಗಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸುಮಾರು 20 ರಿಂದ 25 ಜನರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗುತ್ತಿದೆ.