ಶ್ರೀನಗರ, ನ.18: ಜಮ್ಮು ಮತ್ತು ಕಾಶ್ಮೀರದ ಲಷ್ಕರ್-ಎ-ತೊಯ್ಬಾ (LeT) ಉಗ್ರ ಸಂಘಟನೆಯ ಮೋಸ್ಟ್ ವಾಂಟೆಡ್ ಸ್ಥಳೀಯ ಭಯೋತ್ಪಾದಕ ಲತೀಫ್ ಭಟ್ (Lateef Bhat) ಹತ್ಯೆಯ ಬೆನ್ನಲ್ಲೇ, ಸಿಆರ್ಪಿಎಫ್ (CRPF) ಮಹಾನಿರ್ದೇಶಕರು ನೀಡಿರುವ ಹೇಳಿಕೆ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಉಗ್ರನ ಹತ್ಯೆಯ ಕುರಿತು ಪ್ರತಿಕ್ರಿಯಿಸಿರುವ ಸಿಆರ್ಪಿಎಫ್ ಮುಖ್ಯಸ್ಥರು, "ಕೆಲವು ಖಾದ್ಯಗಳನ್ನು ತಣ್ಣಗಿರುವಾಗಲೇ ಬಡಿಸುವುದು ಉತ್ತಮ" (Some dishes are best served cold) ಎಂದು ಹೇಳಿದ್ದಾರೆ.
ಉಗ್ರ ಲತೀಫ್ ಭಟ್ ಹಲವು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ಆರೋಪಿಸಿದ್ದು, ಜುಲೈ 22ರಂದು ನಡೆದ ಅನಂತನಾಗ್ನಲ್ಲಿ ಪೊಲೀಸರ ಮೇಲೆ ನಡೆದ ದಾಳಿಯಲ್ಲೂ ಈತ ಭಾಗಿಯಾಗಿದ್ದ. ಆ ಘಟನೆಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದರು.
ಪೋಸ್ಟ್ ನೋಡಿ
ಕೆಲವು ಖಾದ್ಯಗಳನ್ನು ತಣ್ಣಗೇ ಮುಗಿಸಬೇಕು
ಸೇನಾ ಮತ್ತು ಭದ್ರತಾ ಪಡೆಗಳ ವಿರುದ್ಧ ಈ ಹಿಂದೆ ನಡೆದಿದ್ದ ದಾಳಿಗಳು ಹಾಗೂ ನಾಗರಿಕರ ಹತ್ಯೆಗಳಲ್ಲಿ ಭಾಗಿಯಾಗಿದ್ದ ಉಗ್ರ ಲತೀಫ್ ಭಟ್ನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿರುವ ಬಗ್ಗೆ ಸಿಆರ್ಪಿಎಫ್ ಮುಖ್ಯಸ್ಥ ಜಿಪಿ ಸಿಂಗ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ, ʼʼಅಭಿನಂದನೆಗಳು ಗೆಳೆಯರೇ, ಕೆಲವು ಖಾದ್ಯಗಳನ್ನು ಚಳಿಯ ವಾತಾವರಣದ ವೇಳೆಯೂ ತಣ್ಣಗಿರುವಾಗಲೇ ಮುಗಿಸುವುದು ಉತ್ತಮʼʼ ಎಂದು ಪೋಸ್ಟ್ ಮಾಡಿದ್ದಾರೆ. ಸರಿಯಾದ ಸಮಯಕ್ಕಾಗಿ ಕಾದು, ನಿಖರ ಕಾರ್ಯಾಚರಣೆಯ ಮೂಲಕ ಉಗ್ರನನ್ನು ಮುಗಿಸಿರುವುದನ್ನು ಉಲ್ಲೇಖಿಸಿ ಸಿಆರ್ಪಿಎಫ್ ಮುಖ್ಯಸ್ಥರು ಈ ಮಾತನ್ನು ಹೇಳಿದ್ದಾರೆ. ಪ್ರತೀಕಾರವನ್ನು ತಕ್ಷಣವೇ ತೀರಿಸಿಕೊಳ್ಳುವುದಕ್ಕಿಂತ, ಸಮಯ ಸಾಧಿಸಿ ಶತ್ರುವಿಗೆ ಮರ್ಮಾಘಾತ ನೀಡುವುದು ಹೆಚ್ಚು ಪರಿಣಾಮಕಾರಿ ಎಂಬ ಸಂದೇಶವನ್ನು ಈ ಹೇಳಿಕೆ ನೀಡಿದೆ.
"ಅಲ್ಲಾ ಬಳಿ ಹೋಗುತ್ತೇನೆ"; ಲತೀಫ್ ಭಟ್ನನ್ನು ಸುತ್ತುವರಿದ ಸೇನೆ; ಶರಣಾಗಲು ಕೊನೆಯ ವಾರ್ನಿಂಗ್
ನವೆಂಬರ್ 11ರಂದು ಕುಲ್ಗಾಮ್ನಲ್ಲಿ ಸಿಆರ್ಪಿಎಫ್ ಸಿಬ್ಬಂದಿ ಮೇಲೆ ನಡೆದ ದಾಳಿಯಲ್ಲಿ ಲತೀಫ್ ಭಟ್ ಮತ್ತು ಆತನ ಸಹಚರ ಉಮರ್ ನಿಸಾರ್ ದಾರ್ ಭಾಗಿಯಾಗಿದ್ದರು, ಈ ವೇಳೆ ದಾಳಿಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಉಮರ್ ದಾರ್ ಹತನಾಗಿದ್ದನು. ಮಂಗಳವಾರ ಪೊಲೀಸರು ಬಿಡುಗಡೆ ಮಾಡಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸಿಆರ್ಪಿಎಫ್ ಚೆಕ್ಪೋಸ್ಟ್ ಮೇಲೆ ದಾಳಿ ನಡೆಸುವ ಮುನ್ನ ಉಮರ್ ದಾರ್ ಮತ್ತು ಲತೀಫ್ ಭಟ್ ಸ್ಥಳಗಳ ಪರಿಶೀಲನೆ ನಡೆಸುತ್ತಿರುವ ದೃಶ್ಯ ಸೆರೆಯಾಗಿವೆ. ಈ ದಾಳಿಯಲ್ಲಿ ಮೂವರು ಸಿಆರ್ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದರು.
ʼʼಅಲ್ಲಾನನ್ನು ಭೇಟಿಯಾಗಬೇಕುʼʼ ಉಗ್ರನ ಕೊನೆ ಆಸೆ ಈಡೇರಿಸಿದ ಭದ್ರತಾ ಪಡೆ
ಭದ್ರತಾ ಪಡೆಗಳು ಮಸೀದಿಯಲ್ಲಿ ಅಡಗಿದ್ದ ಉಗ್ರನನ್ನು ಶರಣಾಗುವಂತೆ ವಿಡಿಯೋ ಕಾಲ್ ಮಾಡಿದ ವೇಳೆ, "ತಾನು ಶೀಘ್ರದಲ್ಲೇ ಅಲ್ಲಾನನ್ನು ಭೇಟಿಯಾಗಬೇಕು" ಎಂದು ಹತಾಶೆಯಿಂದ ಆಡಿದ ಕೊನೆಯ ಮಾತುಗಳು ವೈರಲ್ ಆಗಿದ್ದು, ಆತನ ಈ ಆಸೆಯನ್ನು ಭಾರತೀಯ ಸೇನೆ ಹಾಗೂ ಸಿಆರ್ಪಿಎಫ್ ಪಡೆಗಳು ತಕ್ಷಣವೇ ಎನ್ಕೌಂಟರ್ ನಡೆಸುವ ಮೂಲಕ ಈಡೇರಿಸುವ ಮೂಲಕ ಉಗ್ರರಿಗೆ ತಕ್ಕ ಶಾಸ್ತಿ ಮಾಡಿವೆ.