Rahul Gandhi: ಆಳಂದದಲ್ಲಿ 6018 ಮತಗಳ ಕಳ್ಳತನ!; ರಾಹುಲ್ ಗಾಂಧಿ ಸಿಡಿಸಿದ ಹೊಸ ಬಾಂಬ್ ಏನು?
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು, ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧದ ತಮ್ಮ ಮತಗಳ್ಳತನ ಆರೋಪಗಳನ್ನು ಮತ್ತೆ ಮಾಡಿದ್ದಾರೆ. ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ, "ಹೈಡ್ರೋಜನ್ ಬಾಂಬ್ ಪತ್ರಿಕಾಗೋಷ್ಠಿ" ನಡೆಸಿದ ರಾಹುಲ್ ಗಾಂಧಿ, ಭಾರೀ ಆರೋಪಗಳನ್ನು ಮಾಡಿದ್ದಾರೆ.

-

ನವದೆಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರು, ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧದ ತಮ್ಮ ಮತಗಳ್ಳತನ (Vote Chori) ಆರೋಪಗಳನ್ನು ಮತ್ತೆ ಮಾಡಿದ್ದಾರೆ. ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ, "ಹೈಡ್ರೋಜನ್ ಬಾಂಬ್ ಪತ್ರಿಕಾಗೋಷ್ಠಿ" ನಡೆಸಿದ ರಾಹುಲ್ ಗಾಂಧಿ, ಭಾರೀ ಆರೋಪಗಳನ್ನು ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲೂ ರಾಹುಲ್ ಗಾಂಧಿ ಅವರು ಕರ್ನಾಟಕದ ಮತಗಳ್ಳತನದ ಬಗ್ಗೆ ಮಾತನಾಡಿದ್ದು, ಆಳಂದದಲ್ಲಿ ಒಟ್ಟು 6,018 ಮತಗಳನ್ನು ಕಳ್ಳತನ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ. ರಾಹುಲ್ ಗಾಂಧಿ ಅವರು ತಮ್ಮ ಪತ್ರಿಕಾಗೋಷ್ಠಿಯಲ್ಲಿ ಮತದಾರರ ಪಟ್ಟಿಯಿಂದ ಕೈಬಿಡಲಾದ ಮತದಾರರನ್ನು ವೇದಿಕೆ ಮೇಲೆ ಪರಿಚಯಿಸಿದ್ದಾರೆ.
ಮೊದಲು ಗೋದಾಭಾಯಿ ಎಂಬ ಮಹಿಳೆಯ ಹೇಳಿಕೆಯ ವಿಡಿಯೋ ಪ್ರದರ್ಶಿಸಿದ ರಾಹುಲ್ ಗಾಂಧಿ, ಆ ನಂತರ, ಮತದಾರರ ಪಟ್ಟಿಯಿಂದ ಕೈಬಿಡಲಾದ ವ್ಯಕ್ತಿ ಮತ್ತು ಓರ್ವ ಯುವತಿಯನ್ನು ನೇರವಾಗಿ ಪರಿಚಯಿಸಿದರು. ಆಳಂದದ ವ್ಯಕ್ತಿ ನನ್ನ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾದ ಸಂಗತಿ ನನಗೆ ತಡವಾಗಿ ಗೊತ್ತಾಯಿತು. ಆಮೇಕೆ ಈ ಕುರಿತು ದೂರು ದಾಖಲಿಸಿದ ಬಳಿಕವೂ, ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
#WATCH | Delhi: Lok Sabha LoP and Congress MP Rahul Gandhi says, "Aland is a constituency in Karnataka. Somebody tried to delete 6018 votes. We don't know the total number of votes that were deleted in Aland in the 2023 election. They are much higher than 6,018, but somebody got… pic.twitter.com/yjcBdjPbm4
— ANI (@ANI) September 18, 2025
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ, "ಮುಖ್ಯ ಚುನಾವಣಾ ಆಯುಕ್ತರು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡುತ್ತಿರುವ ಶಕ್ತಿಗಳ ಪರವಾಗಿ ಕೆಲಸ ಮಾಡುತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮತದಾರರನ್ನು ಅಳಿಸಲು ಬಳಸುವ ಸೆಲ್‌ಫೋನ್ ಸಂಖ್ಯೆಗಳನ್ನು ಹಂಚಿಕೊಂಡ ರಾಹುಲ್ ಗಾಂಧಿ, ಆ ಸಂಖ್ಯೆಗಳು ಕರ್ನಾಟಕದದ್ದಲ್ಲ, ಬೇರೆ ಬೇರೆ ರಾಜ್ಯಗಳದ್ದಾಗಿವೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ: PM Modi Birthday: ಪ್ರಧಾನಿ ಮೋದಿ ಬರ್ತ್‌ಡೇಗೆ ರಾಹುಲ್ ಗಾಂಧಿ ಸ್ಪೆಷಲ್ ವಿಶ್!
ಇಂದಿನ ಪತ್ರಿಕಾಗೋಷ್ಠಿಯನ್ನು "ಹೈಡ್ರೋಜನ್ ಬಾಂಬ್ ಸ್ಪೋಟ ಅಲ್ಲ" ಎಂದು ಕರೆದಿರುವ ರಾಹುಲ್ ಗಾಂಧಿ, ಹೈಡ್ರೋಜನ್ ಬಾಂಬ್‌ನ್ನು ಶೀಘ್ರದಲ್ಲೇ ಸ್ಪೋಟಿಸುವುದಾಗಿ ಸ್ಪಷ್ಟಪಡಿಸಿದರು. "ಕಳೆದ ಬಾರಿಯ ಪತ್ರಿಕಾಗೋಷ್ಠಿಯಲ್ಲಿ ನಾವು ಮತದಾರರ ಪಟ್ಟಿಯಲ್ಲಿ ಅಕ್ರಮ ಸೇರ್ಪಡೆ ಬಗ್ಗೆ ಮಾಹಿತಿ ನೀಡಿದ್ದೇವು. ಈ ಬಾರಿ ನಾವು ಮತದಾರರ ಪಟ್ಟಿಯಿಂದ ಅಕ್ರಮವಾಗಿ ಮತದಾರರನ್ನು ಡಿಲೀಟ್ ಮಾಡಿದ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ" ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿಲ್ಲ ಎಂದು ಹೇಳಿದ್ದಾರೆ.