ಚೆನ್ನೈ, ನ. 29: ಸದ್ಯ ರಾಜಕೀಯ ಚರ್ಚೆಗೆ ಕಾರಣವಾಗಿರುವ ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ (Delimitation Bill). ಕಾಂಗ್ರೆಸ್ ನೇತೃತ್ವದ ಇಂಡಿ ಒಕ್ಕೂಟದ ಎನ್‌ಸಿಪಿ ಶರದ್ ಬಣ, ಡಿಎಂಕೆ ಈಗಾಗಲೇ ಮಸೂದೆಗೆ ಬೆಂಬಲ ನೀಡಿದೆ. ಈ ಮಧ್ಯೆ ಚೆನ್ನೈಗೆ ತೆರಳಿ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ (MK Stalin) ಮನವೊಲಿಸಲು ಯತ್ನಿಸಿದ ಕಾಂಗ್ರೆಸ್ ಪ್ರಯತ್ನ ವಿಫಲವಾಗಿದೆ. ಮಸೂದೆಯನ್ನೇ ಬೆಂಬಲಿಸಿಯೇ ಸಿದ್ಧ ಎಂದು ಸ್ಟಾಲಿನ್ ಘೋಷಿಸಿದ್ದು, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನೊಳಗೊಂಡ ನಿಯೋಗಕ್ಕೆ ತೀವ್ರ ಮುಖಭಂಗವಾಗಿದೆ.
ಕೇಂದ್ರ ಸರ್ಕಾರದ ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಬೆಂಬಲ ನೀಡದಂತೆ ಕಾಂಗ್ರೆಸ್ ನಾಯಕರು ಮನವಿ ಮಾಡಿದರೂ ಸ್ಟಾಲಿನ್ ಅದಕ್ಕೆ ಒಪ್ಪಿಲ್ಲ. ಈ ಹಿಂದೆ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಡಿಎಂಕೆ ಜತೆಗಿನ ಬಹುಕಾಲದ ಮೈತ್ರಿ ತೊರೆದು ವಿಜಯ್ ನೇತೃತ್ವದ ಟಿವಿಕೆಗೆ ಬೆಂಬಲ ನೀಡಿತ್ತು ಎನ್ನುವುದು ಗಮನಾರ್ಹ.