ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಉಡುಪಿ ಯುವ ಮುಖಂಡ ಅಜಯ್‌ ಪುರುಷೋತ್ತಮ್‌ ಶೆಟ್ಟಿ; ಕೃಷ್ಣನ ವಿಗ್ರಹ ಉಡುಗೊರೆ

PM Narendra Modi: ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಉಡುಪಿಯ ಯುವ ಮುಖಂಡ ಅಜಯ್‌ ಪುರುಷೋತ್ತಮ್‌ ಶೆಟ್ಟಿ ಭೇಟಿಯಾಗಿ ವಿವಿಧ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿದರು. ಮೋದಿ ಅವರಿಗೆ ಅಜಯ್‌ ಶೆಟ್ಟಿ ಉಡುಪಿ ಕೃಷ್ಣನ ವಿಗ್ರಹ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಅಜಯ್‌ ಪುರುಷೋತ್ತಮ್‌ ಶೆಟ್ಟಿ

ದೆಹಲಿ, ನ. 11: ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರನ್ನು ಉಡುಪಿಯ ಯುವ ಮುಖಂಡ ಅಜಯ್‌ ಪುರುಷೋತ್ತಮ್‌ ಶೆಟ್ಟಿ (Ajay Purushotham Shetty) ಭೇಟಿಯಾಗಿ ವಿವಿಧ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿದರು. ಇದೇ ವೇಳೆ ಅವರು ಉಡುಪಿ ಶ್ರೀಕೃಷ್ಣನ ವಿಗ್ರಹವನ್ನು ಮೋದಿ ಅವರಿಗೆ ಉಡುಗೊರೆಯಾಗಿ ನೀಡಿದರು. ಇದೇ ವೇಳೆ ಮೋದಿ ಉಡುಪಿ ಜತೆಗೆ ತಮಗಿರುವ ವಿಶೇಷ ಭಕ್ತಿ ಮತ್ತು ದ್ವಾರಕ-ಉಡುಪಿ ನಡುವಿನ ಪವಿತ್ರ ಸಂಬಂಧವನ್ನು ಸ್ಮರಿಸಿದರು.

ಮೋದಿ ಭಾಗವಹಿಸಿದ 2025ರಲ್ಲಿ ಉಡುಪಿಯಲ್ಲಿ ನಡೆದ ಲಕ್ಷ ಕಂಠಗಳ ಗೀತಾ ಪಾರಾಯಣದಲ್ಲಿ ತಾವೂ ಪಾಲ್ಗೊಂಡಿದ್ದ ಬಗ್ಗೆಯೂ ಅಜಯ್‌ ಶೆಟ್ಟಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಲಕ್ಷ ಭಕ್ತರು ಒಟ್ಟಾಗಿ ಭಗವದ್ಗೀತೆಯ 15ನೇ ಅಧ್ಯಾಯವನ್ನು ಪಠಿಸಿದ್ದರು. ಆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನೀಡಿದ ಸಂದೇಶ ಉಡುಪಿಯ ಜನರಿಗೆ ಇಂದಿಗೂ ಸ್ಪೂರ್ತಿ ಎಂದು ಅಜಯ್ ಶೆಟ್ಟಿ ವಿವರಿಸಿದರು.

ಅಜಯ್ ಶೆಟ್ಟಿ ಅವರ ಎಕ್ಸ್‌ ಪೋಸ್ಟ್‌:



ಭಾರತದ ಪ್ರಾಚೀನ ನಾಗರಿಕ ಸಾಧನೆಗಳ ಕುರಿತೂ ಇಬ್ಬರು ಚರ್ಚಿಸಿದರು. ಭಾರತದ ಕಾರ್ಯತಂತ್ರದ ಸ್ವಾತಂತ್ರ್ಯವನ್ನು ಕಾಪಾಡಲು ಸ್ಥಳೀಯ ತಾಂತ್ರಿಕ ಸಾಮರ್ಥ್ಯಗಳ ಅಗತ್ಯವನ್ನು ಅಜಯ್ ಶೆಟ್ಟಿ ಒತ್ತಿ ಹೇಳಿದರು. ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವಲ್ಲಿನ ಸಾಮಾಜಿಕ ಮಾಧ್ಯಮಗಳ ಪ್ರಭಾವದ ಬಗ್ಗೆ ಪ್ರಧಾನಿ ಕಳವಳ ವ್ಯಕ್ತಪಡಿಸಿದರು.

13ನೇ ಬಾರಿ ಭದ್ರತಾ ಸಿಬ್ಬಂದಿ ಜತೆ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ

ಡಿಜಿಟಲ್‌ ಸ್ವರಾಜ್ಯ ಮತ್ತು ತಂತ್ರಜ್ಞಾನ ಸಾರ್ವಭೌಮತ್ವದ ಹೆಚ್ಚುತ್ತಿರುವ ಮಹತ್ವದ ಕುರಿತು ಇಬ್ಬರೂ ವಿಚಾರ ವಿನಿಮಯ ಮಾಡಿಕೊಂಡರು. ವಿದೇಶಿ ತಂತ್ರಜ್ಞಾನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸ್ವದೇಶಿ ಆಪರೇಟಿಂಗ್‌ ಸಿಸ್ಟಮ್‌ಗಳು, ಸಾಫ್ಟ್‌ವೇರ್‌ ಮೂಲಸೌಕರ್ಯ ಮತ್ತು ಡಿಜಿಟಲ್‌ ವೇದಿಕೆಗಳ ಅಭಿವೃದ್ಧಿ ಅಗತ್ಯವೆಂದು ಅಜಯ್‌ ಶೆಟ್ಟಿ ಹೇಳಿದರು. ಭಾರತೀಯ ನಾಗರಿಕತೆಯ ಅಡಿಪಾಯವಾಗಿರುವ ಆದ್ಯಾತ್ಮಿಕತೆಯ ಮಹತ್ವದ ಬಗ್ಗೆಯೂ ಚರ್ಚೆ ನಡೆಯಿತು.

ಆತ್ಮನಿರ್ಭರ ಭಾರತದ ವಿಶಾಲ ದೃಷ್ಟಿಕೋನಕ್ಕೆ ಅನುಗುಣವಾಗಿ ತಾಂತ್ರಿಕ ಮತ್ತು ಸಾಫ್ಟ್‌ವೇರ್ ಸ್ವಾವಲಂಬನೆ ಎರಡನ್ನೂ ಅನುಸರಿಸುವ ಮಹತ್ವವನ್ನು ಮೋದಿ ಒತ್ತಿ ಹೇಳಿದರು. ಅಜಯ್ ಶೆಟ್ಟಿ ಪ್ರಧಾನ ಮಂತ್ರಿ ಅವರಿಗೆ ‘ಬಿಜೆವೈಎಂ’ ನಿಯತಕಾಲಿಕದ ವಿಶೇಷ ಸಂಚಿಕೆ ‘ಸೇವಾ@25 – ಪ್ರಧಾನ್ ಸೇವಕ್, ವಿಕಸಿತ್ ಭಾರತ್’ ನ ಪ್ರತಿಯೊಂದನ್ನು ನೀಡಿದರು. ಇದರಲ್ಲಿ ಅಜಯ್‌ ಶೆಟ್ಟಿ ʼಕರ್ತವ್ಯ ಪೀಳಿಗೆ: 25 ವರ್ಷಗಳ ಸೇವೆಯ ಪರಂಪರೆʼ ಎಂಬ ಶೀರ್ಷಿಕೆಯ ಲೇಖನವೊಂದನ್ನು ಬರೆದಿದ್ದಾರೆ. ಇದೇ ವೇಳೆ ಅಜಯ್ ಶೆಟ್ಟಿ ಪ್ರಧಾನಿ ಮೋದಿ ಅವರಿಗೆ ದೀಪಾವಳಿಯ ಶುಭಾಶಯ ತಿಳಿಸಿದರು.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ

Ramesh Ballamoole

View all posts by this author