ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Budget 2026: ಅನಿವಾಸಿ ಭಾರತೀಯರಿಗೆ ಭರ್ಜರಿ ಗಿಫ್ಟ್: ಷೇರು ಹೂಡಿಕೆಗೆ ಅವಕಾಶ ದುಪ್ಪಟ್ಟು

ಭಾರತದ ಹೊರಗಿರುವ ನಿವಾಸಿಗಳು (PROI) ಈಗ ಪೋರ್ಟ್‌ಫೋಲಿಯೊ ಇನ್ವೆಸ್ಟ್‌ಮೆಂಟ್ ಸ್ಕೀಮ್ (PIS) ಮೂಲಕ ಲಿಸ್ಟ್‌ ಮಾಡಲಾದ ಭಾರತೀಯ ಕಂಪನಿಗಳ ಇಕ್ವಿಟಿ ಷೇರುಗಳಲ್ಲಿ ಹೂಡಿಕೆ ಮಾಡಲು ಅನುಮತಿ ನೀಡಲಾಗುತ್ತದೆ. ಇದುವರೆಗೆ ಒಬ್ಬ PROIಗೆ 5% ಹೂಡಿಕೆ ಮಿತಿಯಿದ್ದರೆ, ಈಗ ಅದನ್ನು 10%ಕ್ಕೆ ಹೆಚ್ಚಿಸಲಾಗಿದೆ. ಜೊತೆಗೆ, ಎಲ್ಲಾ ವೈಯಕ್ತಿಕ PROIಗಳ ಒಟ್ಟು ಹೂಡಿಕೆ ಮಿತಿಯನ್ನು ಪ್ರಸ್ತುತ 10%ರಿಂದ 24%ಕ್ಕೆ ಏರಿಸಲಾಗಿದೆ.

ಕೇಂದ್ರ ಬಜೆಟ್‌ 2026

ನವದೆಹಲಿ, ಫೆ.1: ಅನಿವಾಸಿ ಭಾರತೀಯರಿಗೆ 2026-27ರ ಕೇಂದ್ರ ಬಜೆಟ್‌ನಲ್ಲಿ (Union Budget 2026) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಖುಷಿ ಸುದ್ದಿ ನೀಡಿದ್ದಾರೆ. ವಿದೇಶದಲ್ಲಿ ನೆಲೆಸಿರುವ ಭಾರತೀಯರು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೆಚ್ಚು ಸ್ವಾತಂತ್ರ್ಯದಿಂದ ಹೂಡಿಕೆ ಮಾಡಲು ಅವಕಾಶ ನೀಡಲಾಗಿದೆ. ಎನ್‌ಆರ್‌ಐಗಳ ಹೂಡಿಕೆ ಮಿತಿಯನ್ನು ಇದೀಗ ದುಪ್ಪಟ್ಟು ಮಾಡಲಾಗಿದ್ದು, 5%ದಿಂದ 10%ಕ್ಕೆ ಹೆಚ್ಚಿಸಲಾಗಿದೆ.

ಬಜೆಟ್ ಭಾಷಣದಲ್ಲಿ ಮಾತನಾಡಿದ ಸಚಿವೆ, ಭಾರತದ ಹೊರಗಿರುವ ನಿವಾಸಿಗಳು (PROI) ಈಗ ಪೋರ್ಟ್‌ಫೋಲಿಯೊ ಇನ್ವೆಸ್ಟ್‌ಮೆಂಟ್ ಸ್ಕೀಮ್ (PIS) ಮೂಲಕ ಲಿಸ್ಟ್‌ ಮಾಡಲಾದ ಭಾರತೀಯ ಕಂಪನಿಗಳ ಇಕ್ವಿಟಿ ಷೇರುಗಳಲ್ಲಿ ಹೂಡಿಕೆ ಮಾಡಲು ಅನುಮತಿ ನೀಡಲಾಗುತ್ತದೆ. ಇದುವರೆಗೆ ಒಬ್ಬ PROIಗೆ 5% ಹೂಡಿಕೆ ಮಿತಿಯಿದ್ದರೆ, ಈಗ ಅದನ್ನು 10%ಕ್ಕೆ ಹೆಚ್ಚಿಸಲಾಗಿದೆ. ಜೊತೆಗೆ, ಎಲ್ಲಾ ವೈಯಕ್ತಿಕ PROIಗಳ ಒಟ್ಟು ಹೂಡಿಕೆ ಮಿತಿಯನ್ನು ಪ್ರಸ್ತುತ 10%ರಿಂದ 24%ಕ್ಕೆ ಏರಿಸಲಾಗಿದೆ. ಇದು ವಿದೇಶದಲ್ಲಿರುವ ಭಾರತೀಯ ಹೂಡಿಕೆದಾರರಿಗೆ ದೊಡ್ಡ ಉತ್ತೇಜನವಾಗಿದೆ ಎಂದು ತಿಳಿಸಿದರು.

ಹಿಂದಿನ ಬಜೆಟ್‌ನಲ್ಲೂ NRIಗಳಿಗೆ ತೆರಿಗೆ ಸಡಿಲಿಕೆ

ಹಿಂದಿನ ಕೇಂದ್ರ ಬಜೆಟ್‌ನಲ್ಲಿ NRIಗಳು ಹಾಗೂ ದೇಶೀಯ ತೆರಿಗೆದಾರರಿಗೆ ಸಂಬಂಧಿಸಿದಂತೆ ಮಹತ್ವದ ತೆರಿಗೆ ಬದಲಾವಣೆಗಳನ್ನು ಮಾಡಲಾಗಿತ್ತು. ತೆರಿಗೆ ಪಾವತಿ ಸರಳಗೊಳಿಸುವುದು, ಹೊಸ ತೆರಿಗೆ ಸ್ಲ್ಯಾಬ್‌ಗಳು, ಹೆಚ್ಚಿನ ವಿನಾಯಿತಿಗಳು ಹಾಗೂ ವಿದೇಶಿ ಹಣ ವರ್ಗಾವಣೆ, ಬಾಡಿಗೆ ಆದಾಯ ಮತ್ತು ಆಸ್ತಿ ವ್ಯವಹಾರಗಳಿಗೆ ಸುಲಭ ನಿಯಮಗಳನ್ನು ಪರಿಚಯಿಸಲಾಗಿತ್ತು. NRI ನಿವಾಸ ನಿಯಮಗಳು ಮತ್ತು ಜಾಗತಿಕ ಆದಾಯ ತೆರಿಗೆ ವ್ಯವಸ್ಥೆಯಲ್ಲೂ ಬದಲಾವಣೆ ತರಲಾಗಿತ್ತು.

ವಿದೇಶ ಶಿಕ್ಷಣಕ್ಕೆ ಮತ್ತಷ್ಟು ನೆರವು

ವಿದೇಶದಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಕುಟುಂಬಗಳಿಗೆ ಕಳೆದ ಬಜೆಟ್ ಮಹತ್ವದ ರಿಲೀಫ್ ನೀಡಿತ್ತು. LRS (Liberalised Remittance Scheme) ಅಡಿಯಲ್ಲಿ ಶಿಕ್ಷಣ ಸಾಲದ ಮೂಲಕ ವಿದೇಶಕ್ಕೆ ಹಣ ಕಳುಹಿಸುವಾಗ ವಿಧಿಸಲಾಗುತ್ತಿದ್ದ TCS (Tax Collected at Source) ಅನ್ನು ರದ್ದುಪಡಿಸಲಾಗಿತ್ತು. ಇದರಿಂದ ವಿದೇಶ ಶಿಕ್ಷಣದ ಒಟ್ಟು ವೆಚ್ಚ ಕಡಿಮೆಯಾಗಿದೆ.

Budget 2026: ಮಧ್ಯಮ ವರ್ಗಕ್ಕೆ ಮೋದಿ ಸರ್ಕಾರದಿಂದ ಗುಡ್‌ನ್ಯೂಸ್‌; ಕ್ಯಾನ್ಸರ್, ಡಯಾಬಿಟಿಸ್‌ ಔಷಧ ಅಗ್ಗ

ಇದಲ್ಲದೆ, ಕುಟುಂಬ ಸದಸ್ಯರಿಗೆ ತೆರಿಗೆ ರಹಿತವಾಗಿ ಹಣ ಕಳುಹಿಸುವ ಮಿತಿಯನ್ನು ರೂ. 10 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಮಿತಿಗಿಂತ ಹೆಚ್ಚು ಹಣ ಕಳುಹಿಸಿದರೆ, ಹೆಚ್ಚುವರಿ ಮೊತ್ತಕ್ಕೆ 20% TCS ವಿಧಿಸಲಾಗುತ್ತದೆ.

ಬಾಡಿಗೆ ಆದಾಯ ಮತ್ತು ಮನೆ ಮಾಲೀಕರಿಗೆ ರಿಲೀಫ್

ಹಿಂದಿನ ನಿಯಮಗಳ ಪ್ರಕಾರ, ಒಬ್ಬ ವ್ಯಕ್ತಿ ಒಂದೇ ಮನೆಯನ್ನು ಸ್ವಯಂ ವಾಸದ ಮನೆ ಎಂದು ಘೋಷಿಸಬಹುದಿತ್ತು. ಈಗ ಹೊಸ ನಿಯಮದಂತೆ, ಎರಡು ಮನೆಗಳನ್ನು ಸ್ವಯಂ ವಾಸದ ಮನೆಗಳಾಗಿ ಪರಿಗಣಿಸಲು ಅವಕಾಶ ನೀಡಲಾಗಿದೆ. ಇದರಿಂದ ಒಂದಕ್ಕಿಂತ ಹೆಚ್ಚು ಮನೆ ಹೊಂದಿರುವವರಿಗೆ ತೆರಿಗೆ ಭಾರ ಕಡಿಮೆಯಾಗಿದೆ.

ಆಸ್ತಿ ವ್ಯವಹಾರಗಳ TDS ನಿಯಮಗಳು

ಆಸ್ತಿ ಮಾರಾಟದ ಸಂದರ್ಭದಲ್ಲಿ ನಿವಾಸಿ ಮತ್ತು NRIಗಳಿಗೆ ವಿಭಿನ್ನ TDS ನಿಯಮಗಳು ಅನ್ವಯವಾಗುತ್ತವೆ. ನಿವಾಸಿ ಮಾರಾಟದಾರರ ಆಸ್ತಿ ಮೌಲ್ಯ ರೂ.50 ಲಕ್ಷ ಮೀರಿದರೆ 1% TDS ವಿಧಿಸಲಾಗುತ್ತದೆ. ಆದರೆ NRIಗಳ ವಿಷಯದಲ್ಲಿ, TDS ಮೊತ್ತವು ಬಂಡವಾಳ ಲಾಭದ ಆಧಾರದ ಮೇಲೆ ಹೆಚ್ಚಾಗಿರುತ್ತದೆ. ಖರೀದಿದಾರರು ಸರಿಯಾದ ಪ್ರಮಾಣದಲ್ಲಿ TDS ಕಡಿತ ಮಾಡಿ ಸಮಯಕ್ಕೆ ಸರಿಯಾಗಿ ಸರ್ಕಾರಕ್ಕೆ ಜಮಾ ಮಾಡಬೇಕಾಗುತ್ತದೆ.

⁠Union Budget 2026: ಕೇಂದ್ರದಿಂದ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಬಜೆಟ್‌: ಬಿ.ಎಸ್‌. ಯಡಿಯೂರಪ್ಪ

ಇದರ ಜೊತೆಗೆ, ಸಂಬಳದಾರರಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ಹೆಚ್ಚಿಸಲಾಗಿದ್ದು, ಇದರಿಂದ ಮಧ್ಯಮ ವರ್ಗದ ತೆರಿಗೆದಾರರಿಗೆ ಮತ್ತಷ್ಟು ರಿಲೀಫ್ ಸಿಕ್ಕಿದೆ. ಒಟ್ಟಾರೆ, ಬಜೆಟ್ 2026 ವಿದೇಶದಲ್ಲಿರುವ ಭಾರತೀಯರು, ಮನೆ ಮಾಲೀಕರು ಹಾಗೂ ಮಧ್ಯಮ ವರ್ಗದ ತೆರಿಗೆದಾರರಿಗೆ ಅನುಕೂಲಕರ ಬಜೆಟ್ ಆಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹರೀಶ್‌ ಕೇರ

View all posts by this author