ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Union Budget 2026: ಇಂದಿನಿಂದ ಬಜೆಟ್‌ ಅಧಿವೇಶನ ಆರಂಭ, ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ

ಸಂಸತ್ತಿನ ಬಜೆಟ್ ಅಧಿವೇಶನ (budget session) ಇಂದು ಪ್ರಾರಂಭವಾಗಲಿದೆ. ಎಕನಾಮಿಕ್ ಸರ್ವೆ ಆಫ್ ಇಂಡಿಯಾ ಜನವರಿ 29ರಂದು ಮಂಡನೆಯಾಗಲಿದ್ದು, 2026-27ರ ಕೇಂದ್ರ ಬಜೆಟ್ (Union Budget 2026) ಅನ್ನು ಫೆಬ್ರವರಿ 1 ರಂದು ಮಂಡಿಸಲಾಗುವುದು. ಅಧಿವೇಶನವು 65 ದಿನಗಳ ಕಾಲ 30 ಕಲಾಪಗಳನ್ನು ನಡೆಸಲಿದೆ.

ನಿರ್ಮಲಾ ಸೀತಾರಾಮನ್

ನವದೆಹಲಿ, ಜ. 28: ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರು ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವುದರೊಂದಿಗೆ ಸಂಸತ್ತಿನ ಬಜೆಟ್ ಅಧಿವೇಶನ (budget session) ಇಂದು ಪ್ರಾರಂಭವಾಗಲಿದೆ. ಎಕನಾಮಿಕ್ ಸರ್ವೆ ಆಫ್ ಇಂಡಿಯಾ ಜನವರಿ 29ರಂದು ಮಂಡನೆಯಾಗಲಿದ್ದು, 2026-27ರ ಕೇಂದ್ರ ಬಜೆಟ್ (Union Budget 2026) ಅನ್ನು ಫೆಬ್ರವರಿ 1 ರಂದು ಮಂಡಿಸಲಾಗುವುದು.‌ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾಋಆನ್‌ ಅವರು ಬಜೆಟ್‌ ಮಂಡಿಸಲಿದ್ದಾರೆ.

ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಆರ್ಥಿಕ ವಿಭಾಗವು ಸಿದ್ಧಪಡಿಸಿದ ಮತ್ತು ಮುಖ್ಯ ಆರ್ಥಿಕ ಸಲಹೆಗಾರರ ಮೇಲ್ವಿಚಾರಣೆಯಲ್ಲಿ ರೂಪಿಸಲಾದ ಆರ್ಥಿಕ ಸಮೀಕ್ಷೆಯ ದಾಖಲೆಯು ಆರ್ಥಿಕತೆಯ ಸ್ಥಿತಿ ಮತ್ತು 2025-26 ರ (ಏಪ್ರಿಲ್-ಮಾರ್ಚ್) ವಿವಿಧ ಸೂಚಕಗಳ ಒಳನೋಟಗಳನ್ನು ಒದಗಿಸುತ್ತದೆ.

ಅಧಿವೇಶನವು 65 ದಿನಗಳ ಕಾಲ 30 ಕಲಾಪಗಳನ್ನು ನಡೆಸಲಿದ್ದು, ಏಪ್ರಿಲ್ 2 ರಂದು ಕೊನೆಗೊಳ್ಳಲಿದೆ. ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಅನುದಾನದ ಬೇಡಿಕೆಗಳನ್ನು ಪರಿಶೀಲಿಸಲು ಸ್ಥಾಯಿ ಸಮಿತಿಗಳಿಗೆ ಅನುವು ಮಾಡಿಕೊಡಲು ಉಭಯ ಸದನಗಳು ಫೆಬ್ರವರಿ 13 ರಂದು ವಿರಾಮಕ್ಕಾಗಿ ಮುಂದೂಡಲಿವೆ ಮತ್ತು ಮಾರ್ಚ್ 9 ರಂದು ಪುನಃ ಸಭೆ ಸೇರಲಿವೆ.

ಅಧಿವೇಶನದ ಮೊದಲ ಭಾಗವನ್ನು ಮುಖ್ಯವಾಗಿ 2026-27ರ ಕೇಂದ್ರ ಬಜೆಟ್ ಗೆ ಸಂಬಂಧಿಸಿದ ಹಣಕಾಸು ವ್ಯವಹಾರ ಮತ್ತು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಮೀಸಲಿಡಲಾಗುವುದು.

ಈ ಬಾರಿ ಮನರೇಗಾ ಕಾಯಿದೆ ತಿದ್ದುಪಡಿಯ ಮೂಲಕ ಜಿ ರಾಮ್‌ ಜಿ ಕಾಯಿದೆಯನ್ನು ತಂದಿರುವ ಕೇಂದ್ರದ ಕ್ರಮವನ್ನು ವಿರೋಧ ಪಕ್ಷಗಳು ಉಗ್ರವಾಗಿ ಖಂಡಿಸಿದ್ದು, ಈ ಕುರಿತ ಬಿಸಿಬಿಸಿ ಚರ್ಚೆ ಸದನದಲ್ಲಿಯೂ ಮುಂದುವರಿಯುವ ಸೂಚನೆ ದೊರೆತಿದೆ.

ಹರೀಶ್‌ ಕೇರ

View all posts by this author