ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Train accident: ವಂದೇ ಭಾರತ್ ರೈಲು ಡಿಕ್ಕಿ: ಮೂವರು ಸಾವು, ಹಲವರಿಗೆ ಗಾಯ

Train accident: ಬಿಹಾರದ ಪುರ್ನಿಯಾದಲ್ಲಿ ವಂದೇ ಭಾರತ್ ರೈಲು ಡಿಕ್ಕಿಯಾಗಿ ಮೂವರು ಯುವಕರು ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. 18ರಿಂದ 25 ವರ್ಷ ವಯಸ್ಸಿನ ಯುವಕರೆಲ್ಲರೂ ಕಸ್ಬಾ ರೈಲ್ವೆ ಕ್ರಾಸಿಂಗ್ ಬಳಿ ದಾಟಲು ಪ್ರಯತ್ನಿಸುತ್ತಿದ್ದಾಗ ಅಪಘಾತ ಸಂಭವಿಸಿದೆ.

ವಂದೇ ಭಾರತ್ ರೈಲು ಡಿಕ್ಕಿಯಾಗಿ ಮೂವರ ಸಾವು

-

Profile Pushpa Kumari Oct 3, 2025 9:42 PM

ಪಾಟ್ನಾ: ಬಿಹಾರದ ಪುರ್ನಿಯಾದಲ್ಲಿ ವಂದೇ ಭಾರತ್ ರೈಲು ಡಿಕ್ಕಿಯಾಗಿ (Vande Bharat Train) ಮೂವರು ಯುವಕರು ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. 18ರಿಂದ 25 ವರ್ಷ ವಯಸ್ಸಿನ ಯುವಕರೆಲ್ಲರೂ ಕಸ್ಬಾ ರೈಲ್ವೆ ಕ್ರಾಸಿಂಗ್ ಬಳಿ ದಾಟಲು ಪ್ರಯತ್ನಿಸುತ್ತಿದ್ದಾಗ ಅಪಘಾತಕ್ಕೀಡಾಗಿದ್ದಾರೆ. ಬಿಹಾರದ ಪೂರ್ಣಿಯಾ ಜಿಲ್ಲೆಯ ಕಸ್ಬಾ ಪಟ್ಟಣದ ರೈಲ್ವೆ ಕ್ರಾಸಿಂಗ್ ಬಳಿ ಶುಕ್ರವಾರ ಮುಂಜಾನೆ ‌ಈ ಭೀಕರ ದುರಂತ ಸಂಭವಿಸಿದ್ದು, ಈ ದೃಶ್ಯ ನೋಡಿದ ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ಜೋಗ್ಬಾನಿಯಿಂದ ಪಾಟಲಿಪುತ್ರಕ್ಕೆ ಚಲಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಸ್ಬಾ ರೈಲ್ವೆ ಕ್ರಾಸಿಂಗ್ ಬಳಿ ಹಾದುಹೋಗುತ್ತಿದ್ದಾಗ, ಮುಂಜಾನೆ ಸುಮಾರು 5 ಗಂಟೆಗೆ ಈ ಘಟನೆ ಸಂಭವಿಸಿದೆ. ಯುವಕರು ಹಳಿ ದಾಟುತ್ತಿದ್ದಾಗ ವೇಗವಾಗಿ ಬಂದ ರೈಲು ಅವರಿಗೆ ಡಿಕ್ಕಿ ಹೊಡೆದಿದೆ.



"ಮೋಡ ಕವಿದ ವಾತಾವರಣ ಹಾಗೂ ಕತ್ತಲೆ ಇದ್ದ ಕಾರಣ, ಯುವಕರಿಗೆ ರೈಲನ್ನು ಸರಿಯಾಗಿ ಗಮನಿಸಲು ಸಾಧ್ಯವಾಗಲಿಲ್ಲ" ಎಂದು ಪೂರ್ಣಿಯಾ ಜಂಕ್ಷನ್‌ನ ನಿಲ್ದಾಣ ವ್ಯವಸ್ಥಾಪಕ ಮುನ್ನಾ ಕುಮಾರ್ ಹೇಳಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ತಕ್ಷಣವೇ ಪೂರ್ಣಿಯಾದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು. ಆದರೆ ಆಸ್ಪತ್ರೆಗೆ ಸಾಗಿಸುವ ಮೊದಲು ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದರು.

ಇದನ್ನು ಓದಿ:Fire Accident: ಬೆಂಗಳೂರಿನಲ್ಲಿ ಭಾರಿ ಅಗ್ನಿ ಅವಘಡ; 19 ಎಲೆಕ್ಟ್ರಿಕ್ ಸ್ಕೂಟರ್‌ಗಳು ಸುಟ್ಟು ಭಸ್ಮ

ರೈಲ್ವೆ ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ಅಪಘಾತದ ಕಾರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಈ ದುರಂತಕ್ಕೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ರೈಲ್ವೆ ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ಕಂಡು ಹಿಡಿಯಲು ತನಿಖೆ ಆರಂಭಿಸಲಾಗಿದೆ.