ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತಮಿಳುನಾಡು ರಾಜಕೀಯ ಥ್ರಿಲ್ಲರ್‌ಗೆ ಮತ್ತೊಂದು ಟ್ವಿಸ್ಟ್‌; ಬಹುಮತ ಸಾಮೀತುಪಡಿಸುವಲ್ಲಿ ಮತ್ತೆ ಎಡವಿದ ವಿಜಯ್‌

ಟಿವಿಕೆ ಮುಖ್ಯಸ್ಥ ವಿಜಯ್‌ ಬಹುಮತ ಸಾಬೀತು ಪಡಿಸುವಲ್ಲಿ ಮತ್ತೊಮ್ಮೆ ಎಡವಿದ್ದಾರೆ ಎನ್ನಲಾಗಿದ್ದು, ಶನಿವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವುದು ಸಂಶಯ. ವಿಜಯ್‌ ಕೇವಲ 116 ಶಾಸಕ ಬಹುಮತ ಸಾಬೀತುಪಡಿಸಿದ್ದಾರೆ ಎಂದು ತಮಿಳುನಾಡು ರಾಜ್ಯಪಾಲರ ಕಚೇರಿ ತಿಳಿಸಿದೆ. ಬಹುಮತಕ್ಕೆ 118 ಶಾಸಕರ ಬೆಂಬಲ ಅಗತ್ಯ.

ವಿಜಯ್‌ (ಸಂಗ್ರಹ ಚಿತ್ರ)

ಚೆನ್ನೈ, ಮೇ 8: ತಮಿಳುನಾಡು ರಾಜಕೀಯದಾಟ ಕ್ಲೈಮ್ಯಾಕ್ಸ್‌ ಹಂತಕ್ಕೆ ಬಂದೇ ಬಿಟ್ಟಿತು ಎನ್ನುಷ್ಟರಲ್ಲಿ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ. ಟಿವಿಕೆ ಮುಖ್ಯಸ್ಥ ವಿಜಯ್‌ ಬಹುಮತ ಸಾಬೀತು ಪಡಿಸುವಲ್ಲಿ ಮತ್ತೊಮ್ಮೆ ಎಡವಿದ್ದಾರೆ ಎನ್ನಲಾಗಿದ್ದು, ಶನಿವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವುದು ಸಂಶಯ. ವಿಜಯ್‌ ಕೇವಲ 116 ಶಾಸಕರ ಬೆಂಬಲ ಹಾಜರುಪಡಿಸಿದ್ದಾರೆ ಎಂದು ತಮಿಳುನಾಡು ರಾಜ್ಯಪಾಲರ ಕಚೇರಿ ತಿಳಿಸಿದೆ. ಕೊನೆಯ ಹಂತದಲ್ಲಿ ಮುಸ್ಲಿಂ ಲೀಗ್‌ ಬೆಂಬಲ ಹಿಂಪಡೆದಿದ್ದು ವಿಜಯ್‌ಗೆ ತೊಡಕಾಗಿ ಪರಿಣಮಿಸಿದೆ. ಅಲ್ಲದೆ ವಿಸಿಕೆಯಿಂದಲೂ ಟಿವಿಕೆಗೆ ಅಧಿಕೃತ ಬೆಂಬಲ ಪತ್ರ ಸಿಕ್ಕಿಲ್ಲ ಎನ್ನಲಾಗಿದೆ. ಬಹುಮತಕ್ಕೆ 118 ಶಾಸಕರ ಬೆಂಬಲ ಅಗತ್ಯವಿದೆ.

ಡಿಸಿಎಂ ಹುದ್ದೆಗೆ ಪಟ್ಟು ಹಿಡಿದಿರುವ ವಿಸಿಕೆ ಇದೀಗ ಯುಟರ್ನ್‌ ತೆಗೆದುಕೊಂಡಿದ್ದು, ವಿಜಯ್‌ಗೆ ಘೋಷಿಸಿದ ಬೆಂಬಲ ಹಿಂಪಡೆದಿದೆ. ಬೇಡಿಕೆ ಟಿವಿಕೆ ಸೂಕ್ತ ಪ್ರತಿಕ್ರಿಯೆ ನೀಡಿಲ್ಲ ಎಂದು ವಿಸಿಕೆ ಮುನಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಇದೀಗ ಸಿವಿಕೆ ಮುಖಂಡರು ಡಿಎಂಕೆ ನಾಯಕ ಸ್ಟಾಲಿನ್‌ ಭೇಟಿಯಾಗಿದ್ದು, ಮುಂದಿನ ನಡೆ ಕುತೂಹಲ ಮೂಡಿಸಿದೆ.

Ramesh Ballamoole

View all posts by this author