ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: 7 ವರ್ಷದ ಹಿಂದೆ ನಾಪತ್ತೆಯಾಗಿದ್ದ ಗಂಡ ಇನ್ಸ್ಟಾಗ್ರಾಂ ರೀಲ್‍ನಲ್ಲಿ ಪ್ರತ್ಯಕ್ಷನಾದ! ಆಮೇಲೆ ನಡೆದಿದ್ದೇ ಬೇರೆ

Woman spots missing husband: ಸುಮಾರು ಏಳು ವರ್ಷಗಳಿಂದ ಕಾಣೆಯಾಗಿದ್ದ ವ್ಯಕ್ತಿಯನ್ನು ಆತನ ಪತ್ನಿ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ ನೋಡಿ ಪತ್ತೆಹಚ್ಚಿದ್ದಾಳೆ. ಮತ್ತೊಂದು ಮದುವೆಯಾಗಿದ್ದ ಪತಿಮಹಾಶಯ ಎರಡನೇ ಹೆಂಡತಿ ಜೊತೆ ಮಾಡಿದ ರೀಲ್ಸ್‌ನಿಂದ ಸಿಕ್ಕಿಬಿದ್ದಿದ್ದಾನೆ. ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಲಖನೌ: ಏಳುವರ್ಷಗಳಿಂದ ನಾಪತ್ತೆಯಾಗಿದ್ದ ಗಂಡನನ್ನು ಇನ್ಸ್ಟಾಗ್ರಾಂ (Instagram) ನಲ್ಲಿ ಗುರುತಿಸಿ, ಆತನಿಗೆ ಮತ್ತೊಂದು ಮದುವೆಯಾಗಿರುವ ಮಾಹಿತಿ ತಿಳಿದು ಬಂದಿದೆ. ಉತ್ತರ ಪ್ರದೇಶ (Uttar Pradesh) ದ ಹಾರ್ಡೋಯ್‌ನಲ್ಲಿ ಈ ಘಟನೆ ನಡೆದಿದ್ದು, ಪತ್ನಿ ಕೂಡಲೇ ಪೊಲೀಸರಿಗೆ ದೂರು ನೀಡಿ ಪತಿಯ ಬಂಧನಕ್ಕೆ ಕಾರಣಳಾಗಿದ್ದಾಳೆ. ಹೌದು, ಸುಮಾರು ಏಳು ವರ್ಷಗಳಿಂದ ಕಾಣೆಯಾಗಿದ್ದ ವ್ಯಕ್ತಿಯನ್ನು ಆತನ ಪತ್ನಿ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ ಬೇರೊಬ್ಬ ಮಹಿಳೆಯೊಂದಿಗೆ ನೋಡಿದಾಗ ಪತ್ತೆಹಚ್ಚಿ ಬಂಧಿಸಲಾಗಿದೆ. ಈ ಸುದ್ದಿ ಭಾರೀ ವೈರಲ್‌(Viral News) ಆಗಿದೆ.

ಜಿತೇಂದ್ರ ಕುಮಾರ್ ಅಲಿಯಾಸ್ ಬಬ್ಲು ಅವರನ್ನು 2018ರಿಂದ ಕಾಣೆಯಾಗಿರುವುದಾಗಿ ಘೋಷಿಸಲಾಗಿತ್ತು. 2017 ರಲ್ಲಿ ಶೀಲು ಅವರನ್ನು ವಿವಾಹವಾದ ಈ ದಂಪತಿಗಳ ಸಂಬಂಧವು ಒಂದು ವರ್ಷದೊಳಗೆ ಹಳಸಿತು. ಶೀಲು ಅವರನ್ನು ವರದಕ್ಷಿಣೆ, ಚಿನ್ನದ ಸರ ಮತ್ತು ಉಂಗುರಕ್ಕಾಗಿ ಕಿರುಕುಳ ನೀಡಲಾಗುತ್ತಿತ್ತು ಎನ್ನಲಾಗಿದೆ. ಬೇಡಿಕೆ ಈಡೇರದಿದ್ದಾಗ ಆಕೆಯನ್ನು ಮನೆಯಿಂದ ಹೊರದಬ್ಬಲಾಯಿತು. ನಂತರ, ಆಕೆಯ ಕುಟುಂಬವು ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿತ್ತು.

ಪೊಲೀಸರು ವರದಕ್ಷಿಣೆ ಪ್ರಕರಣದ ತನಿಖೆ ನಡೆಸುತ್ತಿರುವಾಗ, ಜಿತೇಂದ್ರ ನಿಗೂಢವಾಗಿ ನಾಪತ್ತೆಯಾಗಿದ್ದ. ಅವನ ತಂದೆ ಏಪ್ರಿಲ್ 20, 2018 ರಂದು ನಾಪತ್ತೆಯಾದ ವ್ಯಕ್ತಿಯ ಬಗ್ಗೆ ದೂರು ದಾಖಲಿಸಿದರು. ಪೊಲೀಸರು ಹುಡುಕಲು ಪ್ರಯತ್ನಿಸಿದರೂ, ಆತ ಎಲ್ಲೂ ಪತ್ತೆಯಾಗಲಿಲ್ಲ. ಯಾವುದೇ ಸುಳಿವುಗಳು ಸಿಗದ ಕಾರಣ, ಜಿತೇಂದ್ರ ಅವರ ಕುಟುಂಬವು ಆತನ ಪತ್ನಿ ಶೀಲು ಮತ್ತು ಅವರ ಕುಟುಂಬಸ್ಥರ ಮೇಲೆ ಹಿಂಸಾಚಾರದ ಆರೋಪ ಹೊರಿಸಿತ್ತು. ಜಿತೇಂದ್ರನನ್ನು ಹತ್ಯೆ ಮಾಡಲಾಗಿದ್ದು, ದೇಹವನ್ನು ಕಣ್ಮರೆಯಾಗುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: Viral Video: ವಿಮಾನದ ರನ್‌ವೇ ಬಳಿ ಮೂತ್ರ ವಿಸರ್ಜಿಸಿದ ವೃದ್ಧ; ಕಾಕ್‍ಪಿಟ್‍ನಲ್ಲಿ ಕುಳಿತು ದೃಶ್ಯ ಚಿತ್ರೀಕರಿಸಿದ ಪೈಲಟ್

ಗಂಡ ಪತ್ತೆಯಾಗದ ಕಾರಣ ಕೆಲವು ವರ್ಷಗಳಿಂದ ಶೀಲು ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ದಳು. ಅಂತಿಮವಾಗಿ, ಏಳು ವರ್ಷಗಳ ನಂತರ, ತನ್ನ ಪತಿ ಇನ್ನೊಬ್ಬ ಮಹಿಳೆಯೊಂದಿಗೆ ಮಾಡಿರುವ ಇನ್‌ಸ್ಟಾಗ್ರಾಮ್ ರೀಲ್ ಅನ್ನು ಅವಳು ನೋಡಿದಳು. ಅವನನ್ನು ತಕ್ಷಣ ಗುರುತಿಸಿದ ಶೀಲು ಕೂಡಲೇ ಕೊಟ್ವಾಲಿ ಸ್ಯಾಂಡಿಲಾ ಪೊಲೀಸರಿಗೆ ವಿಷಯ ತಿಳಿಸಿದ್ದಾಳೆ.

ಜಿತೇಂದ್ರ ಓಡಿಹೋಗಿ, ಲೂಧಿಯಾನದಲ್ಲಿ ವಾಸಿಸುತ್ತಿದ್ದ. ಅಲ್ಲಿ ಅವನು ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಿ ಹೊಸ ಜೀವನವನ್ನು ಪ್ರಾರಂಭಿಸಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಶೀಲು ಅವರು ನೀಡಿರುವ ದೂರಿನ ಮೇರೆಗೆ ಮತ್ತು ಸಾಮಾಜಿಕ ಮಾಧ್ಯಮದಿಂದ ಬಂದ ಸಾಕ್ಷ್ಯಗಳ ಆಧಾರದ ಮೇಲೆ, ಜಿತೇಂದ್ರನನ್ನು ವಶಕ್ಕೆ ಪಡೆಯಲಾಗಿದೆ ಎಂದು ಸ್ಯಾಂಡಿಲಾ ಸರ್ಕಲ್ ಅಧಿಕಾರಿ (ಸಿಒ) ಸಂತೋಷ್ ಸಿಂಗ್ ಹೇಳಿದರು. ದ್ವಿಪತ್ನಿತ್ವ, ವಂಚನೆ ಮತ್ತು ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಸಂಬಂಧಿತ ಕಾನೂನು ವಿಭಾಗಗಳ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದೀಗ ಪೊಲೀಸ್ ಬಂಧನದಲ್ಲಿರುವ ಜಿತೇಂದ್ರನ ವಿರುದ್ಧ ಕಾನೂನು ಕ್ರಮಗಳು ನಡೆಯುತ್ತಿವೆ. ಅಂತೂ ನಾಪತ್ತೆಯಾಗಿದ್ದಾತ ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಸದ್ಯ, ಈ ಸುದ್ದಿ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ (Viral News) ಆಗಿದೆ.