Viral Video: ವಿಮಾನದ ರನ್‌ವೇ ಬಳಿ ಮೂತ್ರ ವಿಸರ್ಜಿಸಿದ ವೃದ್ಧ; ಕಾಕ್‍ಪಿಟ್‍ನಲ್ಲಿ ಕುಳಿತು ದೃಶ್ಯ ಚಿತ್ರೀಕರಿಸಿದ ಪೈಲಟ್
Elderly Man Urinates Near Aircraft: ವಿಮಾನದ ಬಳಿ ವೃದ್ಧರೊಬ್ಬರು ಮೂತ್ರ ವಿಸರ್ಜಿಸಿದ ವಿಚಿತ್ರ ಘಟನೆ ಬಿಹಾರದ ದರ್ಭಾಂಗ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಕಾಕ್‍ಪಿಟ್‌ನಲ್ಲಿ ಕುಳಿತಿದ್ದ ಪೈಲಟ್ ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಸದ್ಯ, ಈ ವಿಡಿಯೊ ಭಾರಿ ವೈರಲ್ ಆಗಿದೆ.

-

ಪಾಟ್ನಾ: ಏರ್‌ಪೋರ್ಟ್‌ನಲ್ಲಿ ವಿಮಾನದ ಬಳಿ ವೃದ್ಧ ವ್ಯಕ್ತಿಯೊಬ್ಬರು ಮೂತ್ರ ವಿಸರ್ಜಿಸಿದ ವಿಚಿತ್ರ ಘಟನೆ ಬಿಹಾರದ ದರ್ಭಾಂಗ ವಿಮಾನ ನಿಲ್ದಾಣದಲ್ಲಿ ಬೆಳಕಿಗೆ ಬಂದಿದೆ. ಪೈಲಟ್ (Pilot) ಕಾಕ್‌ಪಿಟ್‌ನಿಂದ ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ (Viral Video) ಆಗಿದೆ. ಬಿಳಿ ಕುರ್ತಾ-ಪೈಜಾಮ ಧರಿಸಿದ ವ್ಯಕ್ತಿಯೊಬ್ಬರು ವಿಮಾನದಿಂದ ಕೆಲವೇ ಮೀಟರ್ ದೂರದಲ್ಲಿ, ರನ್‌ವೇ ಪಕ್ಕದ ಹುಲ್ಲಿನ ಪ್ರದೇಶದಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿರುವುದನ್ನು ವಿಡಿಯೊದಲ್ಲಿ ಸೆರೆ ಹಿಡಿಯಲಾಗಿದೆ.
ಪೈಲಟ್ ಈ ದೃಶ್ಯವನ್ನು ವಿಡಿಯೊ ಮಾಡುತ್ತಾ ನಕ್ಕಿದ್ದಾರೆ. ರನ್ ವೇ ಬಳಿ ವಿಮಾನ ಹತ್ತಲು ಪ್ರಯಾಣಿಕರು ಸಾಲಾಗಿ ನಿಂತಿದ್ದರೆ, ಒಬ್ಬ ಪ್ರಯಾಣಿಕ ಅಲ್ಲೇ ಮೂತ್ರ ವಿಸರ್ಜಿಸಿದ್ದಾನೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಇದರ ಅರ್ಥ, ಸಾಮಾನ್ಯ ಜನರು ಸಹ ವಿಮಾನದಲ್ಲಿ ಪ್ರಯಾಣಿಸುತ್ತಿರುವುದು ಎಂಬುದು ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ.
ವಿಡಿಯೊ ವೀಕ್ಷಿಸಿ:
दरभंगा एयरपोर्ट पर पायलट ने कॉकपिट से यह वीडियो बनाया है। pic.twitter.com/5LXtTRVLDm
— Adarsh Anand (@ExplorerAdarsh) August 30, 2025
ಮತ್ತೊಬ್ಬ ಬಳಕೆದಾರರು, ಏನೂ ತಪ್ಪಿಲ್ಲ, ಭಾರತದಾದ್ಯಂತ ಎಲ್ಲೇ ಹೋದರು ಇಂತಹ ಘಟನೆಗಳು ಸಾಮಾನ್ಯ ಎಂದು ಹೇಳಿದರು. ವೈರಲ್ ವಿಡಿಯೊ ಕುರಿತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಯಾವ ವಿಮಾನದ ಕಾಕ್‌ಪಿಟ್‌ನಿಂದ ವಿಡಿಯೊವನ್ನು ರೆಕಾರ್ಡ್ ಮಾಡಲಾಗಿದೆ ಮತ್ತು ವೃದ್ಧ ವ್ಯಕ್ತಿ ಪ್ರಯಾಣಿಕರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಭಾರತದಲ್ಲಿ ಎಲ್ಲ ಕಡೆಗಳಲ್ಲಿ ಮೂತ್ರ ವಿಸರ್ಜಿಸುವುದು ಸಾಮಾನ್ಯವಾಗಿದೆ. ಕೆಲವೆಡೆ ಮೂತ್ರ ವಿಸರ್ಜನೆ ಮಾಡದಂತೆ ಬೋರ್ಡ್ ಹಾಕಲಾಗುತ್ತದೆ. ಆದರೂ ಕೂಡ ಜನ ಅಲ್ಲಿ ಮೂತ್ರ ವಿಸರ್ಜಿಸುತ್ತಾರೆ. ಅದರಲ್ಲೂ ಜನಜಂಗುಳಿಯಲ್ಲಿ ತುಂಬಿದ ಪ್ರದೇಶಗಳಲ್ಲಿ ಮೂತ್ರ ವಿಸರ್ಜಿಸುವವರ ಸಂಖ್ಯೆ ಹೆಚ್ಚು. ಸಾರ್ವಜನಿಕ ಶೌಚಾಲಯವಿದ್ದರೂ ಕೆಲವರು ಅದನ್ನು ಬಳಸುವುದಿಲ್ಲ.
ಇದೀಗ ವಿಮಾನದ ರನ್ ವೇ ಬಲಿ ವೃದ್ಧರೊಬ್ಬರು ಮೂತ್ರ ವಿಸರ್ಜನೆ ಮಾಡಿರುವುದು ಅಚ್ಚರಿಯ ಸಂಗತಿಯೇನಲ್ಲ. ಅವರು ಗ್ರಾಮೀಣ ಭಾಗದಿಂದ ಬಂದಿರಬಹುದು. ಶೌಚಾಲಯದ ಬಗೆಗಿನ ಅರಿವು ಅವರಿಗೆ ಇರಲಿಕ್ಕಿಲ್ಲ. ಹೀಗಾಗಿ ಅವರು ರನ್ ವೇ ಬಳಿ ಮೂತ್ರವಿಸರ್ಜಿಸಿದ್ದಾರೆ. ಹೀಗಾಗಿ ನೆಟ್ಟಿಗರು ಕೂಡ ಇದನ್ನು ಟೀಕಿಸಿಲ್ಲ. ಯಾಕೆಂದರೆ ಅವರು ವೃದ್ಧರಾಗಿದ್ದು, ತಿಳುವಳಿಕೆ ಇಲ್ಲದಿರಬಹುದು. ಅಲ್ಲದೆ, ಭಾರತದಲ್ಲಿ ಎಲ್ಲೆಂದರಲ್ಲಿ ಮೂತ್ರವಿಸರ್ಜಿಸುವುದು ಸಾಮಾನ್ಯ ಎಂದು ಕೂಡ ನೆಟ್ಟಿಗರು ತಿಳಿಸಿದ್ದಾರೆ.
ಇದನ್ನೂ ಓದಿ: Viral News: ಬಾಡಿಗೆಗೆ ಬೇಸತ್ತು ಬಸ್ಸನ್ನೇ ಮನೆಯನ್ನಾಗಿ ಮಾಡಿದ್ರು! ಇದನ್ನು ನೋಡಿದ್ರೆ ನಿಮ್ಗೂ ಶಾಕ್ ಆಗುತ್ತೆ