ದೆಹಲಿ: ಭಾನುವಾರ (ಸೆಪ್ಟೆಂಬರ್ 7) ಭಾರತದಲ್ಲೂ ರಕ್ತಚಂದ್ರ ಗ್ರಹಣ (Blood Moon 2025) ಗೋಚರವಾಗಲಿದೆ. ಈ ಬಾರಿಯ ರಕ್ತಚಂದ್ರಗ್ರಹಣವನ್ನು ನೋಡಲು ಉತ್ತಮ ಸ್ಥಳಗಳೆಂದರೆ ಮುಂಬೈ, ನವದೆಹಲಿ, ಕೋಲ್ಕತ್ತಾ ಮತ್ತು ಬೆಂಗಳೂರು ಎನ್ನುತ್ತಾರೆ ತಜ್ಞರು. ಹಾಗೆಯೇ ಏಷ್ಯಾ, ಪಶ್ಚಿಮ ಆಸ್ಟ್ರೇಲಿಯಾ ಮತ್ತು ಆಫ್ರಿಕಾ ಹಾಗೂ ಯುರೋಪಿನ ಹೆಚ್ಚಿನ ಭಾಗಗಳ ಪ್ರಮುಖ ತಾಣಗಳಲ್ಲೂ ವೀಕ್ಷಿಸಬಹುದು.
ಭಾನುವಾರ ಸಂಭವಿಸಲಿರುವ ರಕ್ತ ಚಂದ್ರ ಗ್ರಹಣವು 82 ನಿಮಿಷಗಳ ಕಾಲ ನಡೆಯುವ ಸಂಪೂರ್ಣ ಚಂದ್ರ ಗ್ರಹಣವಾಗಿದ್ದು, ಇದು ದಶಕದ ಅತಿ ಉದ್ದ ಮತ್ತು ಹೆಚ್ಚು ಗೋಚರವಾಗುವ ವಿದ್ಯಾಮಾನಗಳಲ್ಲಿ ಒಂದಾಗಿದೆ. ಗ್ರಹಣದ ಸಮಯದಲ್ಲಿ, ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಸಂಪೂರ್ಣವಾಗಿ ನಿಂತಿರುವುದರಿಂದ, ಚಂದ್ರನು ತಾಮ್ರ-ಕೆಂಪು ಬಣ್ಣವನ್ನು ಹೊಂದಿರುತ್ತಾನೆ. ದೂರದರ್ಶಕಗಳು ಅಥವಾ ರಕ್ಷಣಾತ್ಮಕ ಸಾಧನಗಳ ಸಹಾಯವಿಲ್ಲದೆ ವೀಕ್ಷಿಸಬಹುದು. ಚಂದ್ರಗ್ರಹಣಗಳನ್ನು ಬರಿಗಣ್ಣಿನಲ್ಲೂ ವೀಕ್ಷಿಸುವುದು ಸುರಕ್ಷಿತವಾಗಿದೆ.
ರಕ್ತಚಂದ್ರ ಗ್ರಹಣವನ್ನು ವೀಕ್ಷಿಸಲು ಭಾರತದ ಅತ್ಯುತ್ತಮ ನಗರಗಳು
2025ರ ರಕ್ತಚಂದ್ರ ಗ್ರಹಣ ಗೋಚರವಾಗುವ ಅತ್ಯುತ್ತಮ ರಾಷ್ಟ್ರಗಳಲ್ಲಿ ಭಾರತವೂ ಒಂದು. ಯಾವೆಲ್ಲಾ ನಗರದಲ್ಲಿ ವೀಕ್ಷಿಸಬಹುದು ಎನ್ನುವ ವಿವರ ಇಲ್ಲಿದೆ.
- ಮುಂಬೈ: ಬ್ಲಡ್ ಮೂನ್ ದಿಗಂತದಲ್ಲಿ ಎತ್ತರಕ್ಕೆ ಏರುತ್ತದೆ. ವಿಶೇಷವಾಗಿ ಛಾವಣಿಗಳಲ್ಲಿ ನಿಂತು ವೀಕ್ಷಿಸಿದರೆ ಸುಂದರವಾಗಿ ಗೋಚರಿಸುತ್ತದೆ.
- ನವದೆಹಲಿ: ಚಂದ್ರಗ್ರಹಣ ವೀಕ್ಷಣೆಗೆ ಪರಿಪೂರ್ಣ ಅನುಕೂಲಕರ ಸ್ಥಳಗಳನ್ನು ಒದಗಿಸುತ್ತವೆ.
- ಕೋಲ್ಕತ್ತಾ: ಗ್ರಹಣ ತಡರಾತ್ರಿಯಲ್ಲಿ ಸಂಭವಿಸುತ್ತದೆ. ಆದ್ದರಿಂದ ಕೋಲ್ಕತ್ತಾ ಜನರು ಗ್ರಹಣ ಪೂರ್ಣವಾಗುವವರೆಗೆ ನೋಡಲು ಸಾಧ್ಯವಾಗುತ್ತದೆ.
- ಬೆಂಗಳೂರು, ಹೈದರಾಬಾದ್, ಚೆನ್ನೈ: ದಕ್ಷಿಣ ಭಾರತದ ನಗರಗಳಲ್ಲೂ ವೀಕ್ಷಣಾ ಪರಿಸ್ಥಿತಿಗಳು ಉತ್ತಮವಾಗಿವೆ.
- ಅಹಮದಾಬಾದ್, ಪುಣೆ, ಲಖನೌ: ಪಶ್ಚಿಮ ಮತ್ತು ಮಧ್ಯ ಭಾರತದ ನಗರಗಳು ಸಹ ಅತ್ಯುತ್ತಮ ಗೋಚರತೆಯನ್ನು ಹೊಂದಿದ್ದು, ಚಂದ್ರ ವೀಕ್ಷಣೆಗೆ ಉತ್ತಮ ಸ್ಥಳವಾಗಿದೆ.
ಭಾರತದ ಹೊರಗೆ ಅತಿ ಹೆಚ್ಚು ವೀಕ್ಷಿಸಬಹುದಾದ ನಗರಗಳು
- ಬ್ಯಾಂಕಾಕ್ (ಥೈಲ್ಯಾಂಡ್)
- ಬೀಜಿಂಗ್, ಶಾಂಘೈ (ಚೀನಾ)
- ಟೋಕಿಯೋ (ಜಪಾನ್)
- ಪರ್ತ್, ಸಿಡ್ನಿ (ಆಸ್ಟ್ರೇಲಿಯಾ)
- ಲಂಡನ್, ಬರ್ಲಿನ್, ಪ್ಯಾರಿಸ್, ಅಥೆನ್ಸ್ (ಯುರೋಪ್)
- ಕೈರೋ, ಜೋಹಾನ್ಸ್‌ಬರ್ಗ್, ನೈರೋಬಿ (ಆಫ್ರಿಕಾ).
ಸಮಯ
ಭಾರತದಲ್ಲಿ ಪೂರ್ಣ ಚಂದ್ರನ ಹಂತವು (ರಕ್ತ ಚಂದ್ರನ ಹಂತ) ಭಾರತೀಯ ಕಾಲಮಾನ ಪ್ರಕಾರ ರಾತ್ರಿ 11 ಗಂಟೆಗೆ ಪ್ರಾರಂಭವಾಗುತ್ತದೆ. ಭಾರತೀಯ ಕಾಲಮಾನ ಪ್ರಕಾರ, ರಕ್ತಚಂದ್ರನವು ರಾತ್ರಿ 11 ರಿಂದ ಪ್ರಾರಂಭವಾಗಿ ಸೋಮವಾರ ಮಧ್ಯರಾತ್ರಿ 12:22ರವರೆಗೆ ಇರುತ್ತದೆ ಎನ್ನಲಾಗಿದೆ.
ಅತ್ಯುತ್ತಮ ವೀಕ್ಷಣೆಗೆ ಕಾರಣವಾಗುವ ಅಂಶಗಳು
- ಸೂಕ್ತ ಪರಿಸ್ಥಿತಿಗಳು: ಮುಂಬೈಯ ಮೆರೈನ್ ಡ್ರೈವ್, ದೆಹಲಿಯ ಲೋಧಿ ಗಾರ್ಡನ್ಸ್, ಬೆಂಗಳೂರಿನ ಲಾಲ್‌ಬಾಗ್ ಅಥವಾ ಕೋಲ್ಕತ್ತಾದ ಮೈದಾನ ಮತ್ತು ಕನಿಷ್ಠ ಬೆಳಕಿನ ಮಾಲಿನ್ಯವನ್ನು ಹೊಂದಿರುವ ನಗರಗಳಲ್ಲಿ ಅದ್ಭುತವಾಗಿ ಗೋಚರಿಸುತ್ತದೆ.
- ಹವಾಮಾನ: ಶುಭ್ರ ಆಕಾಶವು ಅತ್ಯಂತ ಮುಖ್ಯ. ಮಾನ್ಸೂನ್ ಅಥವಾ ಮೋಡ ಕವಿದ ವಾತಾವರಣವು ಗೋಚರತೆಯನ್ನು ಕುಂಠಿತಗೊಳಿಸಬಹುದು.
- ತೆರೆದ ಸ್ಥಳಗಳು: ಉದ್ಯಾನವನಗಳು, ಟೆರೇಸ್, ಸರೋವರದ ದಂಡೆಗಳು ಮತ್ತು ಎತ್ತರದ ಪ್ರದೇಶಗಳು ಗ್ರಹಣವನ್ನು ವೀಕ್ಷಿಸಲು ಅತ್ಯುತ್ತಮ ಅನುಕೂಲದ ಸ್ಥಳಗಳಾಗಿವೆ.
ಇದನ್ನೂ ಓದಿ: Spoorthivani Column: ಮನಸ್ಸು ಭಕ್ತಿಯಲ್ಲಿ ತಲ್ಲೀನವಾದಾಗಲೇ ಅಮರತ್ವ ಸಾಧನೆ ಸಾಧ್ಯ