ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದೇಶದಲ್ಲಿ ಅತೀ ಹೆಚ್ಚು ಜನರು ಮಾತನಾಡುವ ಭಾಷೆ ಹಿಂದಿ; ಕನ್ನಡಕ್ಕೆ ಎಷ್ಟನೇ ಸ್ಥಾನ? ಕರ್ನಾಟಕ ಹೊರತುಪಡಿಸಿ ಬೇರೆಲ್ಲಿ ಕನ್ನಡಿಗರಿದ್ದಾರೆ?

Most Spoken Language: ಭಾಷೆ ಎನ್ನುವುದು ಮಾನವನಿಗೆ ಸಿಕ್ಕ ದೊಡ್ಡ ವರ ಎಂದೇ ಪರಿಗಣಿಸಲಾಗುತ್ತಿದೆ. ಪರಸ್ಪರ ಸಂವಹನ ನಡೆಸಲು ಭಾಷೆ ಸಂಪರ್ಕ ಸೇತುವಾಗಿ ಕಾರ್ಯ ನಿರ್ವಹಿಸುತ್ತದೆ. ಪ್ರಪಂಚದಾದ್ಯಂತ ಸುಮಾರು 7,100 ಭಾಷೆಗಳಿವೆ. 2011ರ ಜನಗಣತಿ ಪ್ರಕಾರ ದೇಶದಲ್ಲಿ ಅತೀ ಹೆಚ್ಚು ಜನರು ಮಾತನಾಡುವ ಭಾಷೆ ಹಿಂದಿ. ಹಾಗಾದರೆ ಕನ್ನಡ ಎಷ್ಟನೇ ಸ್ಥಾನದಲ್ಲಿದೆ? ಎಷ್ಟು ಮಂದಿ ಕನ್ನಡ ಮಾತನಾಡುತ್ತಾರೆ? ಎನನುವ ವಿವರ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು, ಏ. 27: ಭಾಷೆ (Language) ಎನ್ನುವುದು ಮಾನವನಿಗೆ ಸಿಕ್ಕ ದೊಡ್ಡ ವರ ಎಂದೇ ಪರಿಗಣಿಸಲಾಗುತ್ತಿದೆ. ಪರಸ್ಪರ ಸಂವಹನ ನಡೆಸಲು ಭಾಷೆ ಸಂಪರ್ಕ ಸೇತುವಾಗಿ ಕಾರ್ಯ ನಿರ್ವಹಿಸುತ್ತದೆ. ಪ್ರಪಂಚದಾದ್ಯಂತ ಸುಮಾರು 7,100 ಭಾಷೆಗಳಿವೆ. ಸಂಸ್ಕೃತ, ತಮಿಳಿನಂತಹ ಪ್ರಾಚೀನ ಭಾಷೆಯಿಂದ ಹಿಡಿದು ಎಸ್ಪರಾಂಟೊದಂತಹ ಕೃತಕವಾಗಿ ಅಭಿವೃದ್ದಿಪಡಿಸಿದ ಭಾಷೆಗಳಿವೆ. ಇನ್ನು ವೈವಿಧ್ಯತೆಗೆ ಹೆಸರಾದ ಭಾರತವೊಂದರಲ್ಲೇ 22 ಅಧಿಕೃತ ಮತ್ತು 121 ಪ್ರಮುಖ ಭಾಷೆಗಳಿವೆ. 2011ರ ಜನಗಣತಿ ಪ್ರಕಾರ ದೇಶದಲ್ಲಿ ಅತೀ ಹೆಚ್ಚು ಜನರು ಮಾತನಾಡುವ ಭಾಷೆ ಹಿಂದಿ. ವಿದೇಶವೂ ಸೇರಿ ಹಿಂದಿಯನ್ನು ಸುಮಾರು 60 ಕೋಟಿ ಜನರು ಬಳಸುತ್ತಾರೆ (Most Spoken Language). ಇನ್ನು ದೇಶದಲ್ಲಿ ಎರಡನೇ ಅತೀ ದೊಡ್ಡ ಭಾಷೆ ಎನಿಸಿಕೊಂಡಿರುವುದು ಬಂಗಾಳಿ. ಹಾಗಾದರೆ ಕನ್ನಡ ಎಷ್ಟನೇ ಸ್ಥಾನದಲ್ಲಿದೆ? ಎಷ್ಟು ಮಂದಿ ಸಂವಹನಕ್ಕೆ ಕನ್ನಡ ಬಳಸುತ್ತಾರೆ? ಕರ್ನಾಟಕ ಹೊರತುಪಡಿಸಿ ಬೇರೆ ಯಾವ್ಯಾವ ಪ್ರದೇಶದಲ್ಲಿ ಕನ್ನಡ ಬಳಸುತ್ತಾರೆ? ನಿಮ್ಮೆಲ್ಲ ಪ್ರಶ್ನೆಗೆ ಇಲ್ಲಿದೆ ಉತ್ತರ.

2011ರ ಜನಗಣತಿ ಪ್ರಕಾರ ಬಂಗಾಳಿ ದೇಶದ 2ನೇ ಅತೀ ದೊಡ್ಡ ಭಾಷೆ ಎನಿಸಿಕೊಂಡಿದೆ. ಬಂಗಾಳಿಯನ್ನು ದೇಶದಲ್ಲಿ 9.72 ಕೋಟಿ ಮಂದಿ ಮಾತನಾಡುತ್ತಾರೆ. ಇದು ದೇಶದ ಜನಸಂಖ್ಯೆಯ ಶೇಕಡಾ 8.03ರಷ್ಟು. ಭಾರತ ಮಾತ್ರವಲ್ಲ ವಿದೇಶದಲ್ಲೂ ಬಂಗಾಳಿ ಮಾತನಾಡುವವರಿದ್ದಾರೆ.

ಹಿಂದಿ

ಭಾರತದಲ್ಲಿ ಹೆಚ್ಚು ವ್ಯಾಪಕವಾಗಿ ಮಾತನಾಡುವ ಭಾಷೆಯಾಗಿ ಹಿಂದಿ ಗುರುತಿಸಿಕೊಂಡಿದೆ. ದೇಶದಲ್ಲಿ ಹಿಂದಿಯನ್ನು 32 ಕೋಟಿ ಮಂದಿ ಮಾತನಾಡುತ್ತಿದ್ದರೆ ಪ್ರಪಂಚದಾದ್ಯಂತ 60 ಕೋಟಿ ಮಂದಿ ಬಳಸುತ್ತಾರೆ. ಇದು ಕೇಂದ್ರ ಸರ್ಕಾರದ ಅಧಿಕೃತ ಭಾಷೆಯಾಗಿ ಕಾರ್ಯ ನಿರ್ವಹಿಸುತ್ತದೆ. ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ ಮತ್ತು ಮಧ್ಯಪ್ರದೇಶ ಸೇರಿದಂತೆ ಹಲವಾರು ಉತ್ತರ ಮತ್ತು ಮಧ್ಯ ರಾಜ್ಯಗಳಲ್ಲಿ ಪ್ರಾಥಮಿಕ ಭಾಷೆಯಾಗಿದೆ.

ಬಂಗಾಳಿ ಭಾಷೆಯ ವೈಶಿಷ್ಟ್ಯ

ಬಂಗಾಳಿಯನ್ನು ಪಶ್ಚಿಮ ಬಂಗಾಳ ಮತ್ತು ತ್ರಿಪುರದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇನ್ನು ಬಾಂಗ್ಲಾದೇಶದ ರಾಷ್ಟ್ರೀಯ ಭಾಷೆ ಬಂಗಾಳಿ. ಚರಿತ್ರೆ, ಸಂಸ್ಕೃತಿಯೊಂದಿಗೆ ಆಳವಾದ ಸಂಬಂಧ ಬೆಸೆದುಕೊಂಡಿರುವ ಬಂಗಾಳಿ ಪ್ರಾಚೀನ ಭಾಷೆಗಳಲ್ಲಿ ಒಂದು. ಇಂಡೋ-ಆರ್ಯನ್‌ ಭಾಷಾ ಕುಟುಂಬಕ್ಕೆ ಸೇರಿದ ಬಂಗಾಳಿ ಸಂಸ್ಕೃತ ಮತ್ತು ಮಗಧಿ ಪ್ರಾಕೃತದಿಂದ ಅಭಿವೃದ್ಧಿ ಹೊಂದಿದೆ ಎನ್ನುತ್ತಾರೆ ಸಂಶೋಧಕರು.

ಭಾರತಕ್ಕೆ ಮೊದಲ ಸಾಹಿತ್ಯ ನೊಬೆಲ್‌ ಪ್ರಶಸ್ತಿ ತಂದುಕೊಟ್ಟದ್ದು ಇದೇ ಬಂಗಾಳಿ ಭಾಷೆ. ರವೀಂದ್ರನಾಥ್‌ ಠಾಗೂರ್‌ ತಮ್ಮ 'ಗೀತಾಂಜಲಿ' ಕೃತಿಗಾಗಿ 1913ರಲ್ಲಿ ನೊಬೆಲ್‌ ಪ್ರಶಸ್ತಿ ಪಡೆಯುವ ಮೂಲಕ ಇಡೀ ವಿಶ್ವದ ಗಮನ ಭಾರತದತ್ತ ತಿರುಗುವಂತೆ ಮಾಡಿದರು. ಬಂಗಾಳಿ ಭಾಷೆಯನ್ನು ಬ್ರಾಹ್ಮಿ ಲಿಪಿಯಲ್ಲಿ ಬರೆಯಲಾಗುತ್ತದೆ. ಇನ್ನು ಜಾಗತಿಕವಾಗಿ ಅತಿ ಹೆಚ್ಚು ಬಳಸುವ ಭಾಷೆಯ ಪೈಕಿ ಬಂಗಾಳಿ 7ನೇ ಸ್ಥಾನದಲ್ಲಿದೆ.

70 ಎಕ್ರೆ ಬಯಲು ಪ್ರದೇಶದಲ್ಲಿ ಕಾಡು ನಿರ್ಮಿಸಿದ ದುಶರ್ಲ ಸತ್ಯನಾರಾಯಣ ಎಂಬ ಮಾಂತ್ರಿಕ

ಕನ್ನಡ

ಇನ್ನು ನಮ್ಮ ಕನ್ನಡ ದೇಶದಲ್ಲಿ 8ನೇ ಸ್ಥಾನದಲ್ಲಿದೆ. ದೇಶದಲ್ಲಿ ಕನ್ನಡವನ್ನು ಸುಮಾರು 4.37 ಕೋಟಿ ಮಂದಿ ಬಳಸುತ್ತಾರೆ. ಹೆಚ್ಚಾಗಿ ಕನ್ನಡ ಮತ್ತು ಕೇರಳದಲ್ಲಿ ಕನ್ನಡವನ್ನು ಬಳಸಲಾಗುತ್ತದೆ. ಇನ್ನು ಅಮೆರಿಕ, ಆಸ್ಟ್ರೇಲಿಯ ಮತ್ತು ಸಿಂಗಾಪುರದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸುಮಾರು ಶೇಕಡಾ 65ರಷ್ಟು ಜನರು ಕನ್ನಡವನ್ನು ತಮ್ಮ ಮಾತೃಭಾಷೆಯಾಗಿ ಬಳಸುತ್ತಾರೆ. 2,000 ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಪ್ರಾಚೀನ ಭಾರತೀಯ ಭಾಷೆಯಾಗಿ, ಕನ್ನಡವು ಶ್ರೇಷ್ಠ ಸಾಹಿತ್ಯವನ್ನು ಹೊಂದಿದೆ. 2008ರಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವೂ ಲಭಿಸಿದೆ.

ಜಾಗತಿಕ 100 ಬಿಸಿ ನಗರಗಳ ಪಟ್ಟಿಯಲ್ಲಿ ದೇಶದ 95, ಕರ್ನಾಟಕದ 3 ನಗರ!

ಭಾರತದಲ್ಲಿ ಅತೀ ಹೆಚ್ಚು ಬಳಸುವ ಭಾಷೆಗಳ ವಿವರ (2011ರ ಜನಗಣತಿ ಪ್ರಕಾರ)

ಟಾಪ್‌ 8 ಭಾಷೆಗಳ ವಿವರ

ರ‍್ಯಾಂಕ್‌ ಭಾಷೆ ಮಾತೃಭಾಷೆಯನ್ನಾಗಿ ಮಾತನಾಡುವವರ ಸಂಖ್ಯೆ ಮಾತನಾಡುವವರ ಒಟ್ಟು ಸಂಖ್ಯೆ ದೇಶದಲ್ಲಿನ ಪ್ರಮುಖ ಸ್ಥಳಗಳು ವಿದೇಶಗಳಲ್ಲಿನ ಪ್ರಮುಖ ಸ್ಥಳಗಳು
1 ಹಿಂದಿ 32 ಕೋಟಿ 60 ಕೋಟಿ ದೆಹಲಿ, ಬಿಹಾರ, ಛತ್ತೀಸ್‌ಗಢ, ಹರಿಯಾಣ, ಹಿಮಾಚಲ ಪ್ರದೇಶ, ಜಾರ್ಖಂಡ್‌, ಮಧ್ಯ ಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಉತ್ತರಾಖಂಡ ನೇಪಾಳ, ಫಿಜಿ, ಅಮೆರಿಕ, ದಕ್ಷಿಣ ಆಫ್ರಿಕಾ, ಗಯಾನ, ಯುಎಇ
2 ಬಂಗಾಳಿ 9.72 ಕೋಟಿ 10.72 ಕೋಟಿ ಪಶ್ಚಿಮ ಬಂಗಾಳ, ತ್ರಿಪುರ, ಅಸ್ಸಾಂ ಬಾಂಗ್ಲಾದೇಶ, ಇಂಗ್ಲೆಂಡ್‌, ಅಮೆರಿಕ, ಸೌದಿ ಅರೇಬಿಯಾ
3 ಮರಾಠಿ 8.30 ಕೋಟಿ 9.90 ಕೋಟಿ ಮಹಾರಾಷ್ಟ್ರ, ಗೋವ ಇಸ್ರೇಲ್, ಮಾರಿಷಸ್, ಅಮೆರಿಕ
4 ತೆಲುಗು 8.11 ಕೋಟಿ 9.41 ಕೋಟಿ ಆಂಧ್ರ ಪ್ರದೇಶ, ತೆಲಂಗಾಣ ಅಮೆರಿಕ, ಮಲೇಷ್ಯ
5 ತಮಿಳು 6.90 ಕೋಟಿ 7.70 ಕೋಟಿ ತಮಿಳುನಾಡು, ಪುದುಚೆರಿ ಶ್ರೀಲಂಕ, ಸಿಂಗಾಪುರ, ಮಲೇಷ್ಯ
6 ಗುಜರಾತಿ 5.54 ಕೋಟಿ 6.00 ಕೋಟಿ ಗುಜರಾತ್, ದಾದ್ರಾ ಮತ್ತು ನಗರ ಹವೇಲಿ ಇಂಗ್ಲೆಂಡ್‌, ಅಮೆರಿಕ, ಕೀನ್ಯಾ, ಕೆನಡಾ
7 ಉರ್ದು 5.07 ಕೋಟಿ 6.30 ಕೋಟಿ ಉತ್ತರ ಪ್ರದೇಶ, ಬಿಹಾರ, ತೆಲಂಗಾಣ, ದೆಹಲಿ ಪಾಕಿಸ್ತಾನ, ಯುಎಇ, ಇಂಗ್ಲೆಂಡ್‌
8 ಕನ್ನಡ 4.37 ಕೋಟಿ 5.90 ಕೋಟಿ ಕರ್ನಾಟಕ ಅಮೆರಿಕ, ಆಸ್ಟ್ರೇಲಿಯಾ, ಸಿಂಗಾಪುರ

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author