ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BSF Jawan: ಅತ್ತ ಪಾಕ್‌ ವಶದಲ್ಲಿರೋ BSF ಯೋಧ... ಇತ್ತ ಪತಿಗಾಗಿ ಫಿರೋಜ್‌ಪುರಕ್ಕೆ ಹೊರಟ ಗರ್ಭಿಣಿ ಪತ್ನಿ!

ಆಕಸ್ಮಿಕವಾಗಿ ಗಡಿ ದಾಟಿದ ಕಾರಣಕ್ಕೆ ಪಾಕಿಸ್ತಾನ ರೇಂಜರ್ಸ್‌ನಿಂದ ಬಂಧನಕ್ಕೊಳಗಾದ ಬಿಎಸ್‌ಎಫ್ ಯೋಧ ಪೂರ್ಣಮ್ ಸಾಹು ಅವರ ಪತ್ನಿ ರಜನಿ, ತಮ್ಮ ಪತಿಯ ಬಿಡುಗಡೆಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಲು ಪಂಜಾಬ್‌ನ ಫಿರೋಜ್‌ಪುರಕ್ಕೆ ಭೇಟಿ ನೀಡುವುದಾಗಿ ಭಾನುವಾರ ತಿಳಿಸಿದ್ದಾರೆ.

ಪಾಕ್‌ ವಶದಲ್ಲಿರುವ BSF ಯೋಧ- ಇತ್ತ ಗರ್ಭಿಣಿ ಪತ್ನಿಯ ಗೋಳಾಟ!

Profile Sushmitha Jain Apr 28, 2025 4:07 PM

ಕೋಲ್ಕತ್ತಾ: ಆಕಸ್ಮಿಕವಾಗಿ ಗಡಿ ದಾಟಿದ ಕಾರಣಕ್ಕೆ ಪಾಕಿಸ್ತಾನ ರೇಂಜರ್ಸ್‌ನಿಂದ (Pakistan Rangers) ಬಂಧನಕ್ಕೊಳಗಾದ ಬಿಎಸ್‌ಎಫ್ ಯೋಧ (BSF jawan) ಪೂರ್ಣಮ್ ಸಾಹು (Purnam Sahu) ಅವರ ಪತ್ನಿ ರಜನಿ, ತಮ್ಮ ಪತಿಯ ಬಿಡುಗಡೆಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಲು ಪಂಜಾಬ್‌ನ ಫಿರೋಜ್‌ಪುರಕ್ಕೆ (Ferozepur) ಭೇಟಿ ನೀಡುವುದಾಗಿ ಭಾನುವಾರ ತಿಳಿಸಿದ್ದಾರೆ. ಗರ್ಭಿಣಿಯಾಗಿರುವ ರಜನಿ, ತಮ್ಮ ಮಗ ಮತ್ತು ಇತರ ಮೂವರು ಸಂಬಂಧಿಕರೊಂದಿಗೆ ಸೋಮವಾರ ಚಂಡೀಗಢಕ್ಕೆ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ. ಅಲ್ಲಿಂದ ಭಾರತ-ಪಾಕಿಸ್ತಾನ ಗಡಿಯಲ್ಲಿರುವ ಫಿರೋಜ್‌ಪುರಕ್ಕೆ ತೆರಳಲಿದ್ದಾರೆ. ಪಾಕ್‌ನಿಂದ ಬಂಧಿಸಲ್ಪಟ್ಟ ಸಾಹು ಅವರು ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯವರು.

ಬಿಎಸ್‌ಎಫ್ ಅಧಿಕಾರಿಗಳ ಪ್ರಕಾರ, ಈ ಘಟನೆಯು ಸಾಹು ಅವರು ಗಡಿಯಲ್ಲಿ ರೈತರ ಗುಂಪನ್ನು ಕರೆದೊಯ್ಯುತ್ತಿದ್ದ ವೇಳೆ, ವಿಶ್ರಾಂತಿಗಾಗಿ ಮರದ ಕೆಳಗೆ ಕುಳಿತಾಗ ತಿಳಿಯದೆ ಪಾಕಿಸ್ತಾನದ ಗಡಿ ದಾಟಿದ್ದಾರೆ. ಸಾಹು ಅವರು ಫಿರೋಜ್‌ಪುರ ಗಡಿಯಲ್ಲಿ ಬಿಎಸ್‌ಎಫ್‌ನ 182ನೇ ಬೆಟಾಲಿಯನ್‌ನಲ್ಲಿ ನಿಯೋಜಿತರಾಗಿದ್ದರು.

ಭಾರತ ಮತ್ತು ಪಾಕಿಸ್ತಾನದ ಗಡಿ ರಕ್ಷಣಾ ಪಡೆಗಳು ಸಾಹು ಅವರ ಬಿಡುಗಡೆಗಾಗಿ ಗುರುವಾರ ರಾತ್ರಿ ಧ್ವಜ ಸಭೆ ನಡೆಸಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಕುಟುಂಬಕ್ಕೆ ಯಾವುದೇ ಹೆಚ್ಚಿನ ಮಾಹಿತಿ ಲಭಿಸಿಲ್ಲ. "ಈ ಸುದ್ದಿ ತಿಳಿದಾಗಿನಿಂದ ನಾನು ತೀವ್ರ ಒತ್ತಡದಲ್ಲಿದ್ದೇನೆ. ಐದನೇ ದಿನವಾದರೂ ಅವರ ಬಿಡುಗಡೆ ಕುರಿತು ಯಾವುದೇ ಮಾಹಿತಿಯಿಲ್ಲ," ಎಂದು ಸಾಹು ಅವರ ಪತ್ನಿ ರಜನಿ ತಿಳಿಸಿದ್ದಾರೆ. "ನಾಳೆಯ ಚಂಡೀಗಢಕ್ಕೆ ವಿಮಾನದ ಟಿಕೆಟ್ ಪಡೆದಿದ್ದೇನೆ. ಅಲ್ಲಿಂದ ಫಿರೋಜ್‌ಪುರಕ್ಕೆ ಹೋಗುತ್ತೇನೆ. ನನ್ನ ಮಗ ಮತ್ತು ಇತರ ಮೂವರು ಸಂಬಂಧಿಕರು ನನ್ನೊಂದಿಗೆ ಇರಲಿದ್ದಾರೆ," ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಓದಿ: Viral News: ಉದ್ಯೋಗಾರ್ಥಿಗಳಲ್ಲಿ ಕನ್ನಡ ಬಯಸದ ಬೆಂಗಳೂರು ಕಂಪನಿ, ನೆಟ್ಟಿಗರ ಸಿಟ್ಟು

ರಜನಿ ಅವರು ಆರಂಭದಲ್ಲಿ ಭಾನುವಾರ ಸಂಜೆ ಹೌರಾದಿಂದ ಪಠಾಣ್‌ಕೋಟ್ ಮೂಲಕ ಫಿರೋಜ್‌ಪುರಕ್ಕೆ ಹೋಗುವ ಅಮೃತಸರ್ ಮೇಲ್ ರೈಲಿನಲ್ಲಿ ಪ್ರಯಾಣಿಸಲು ಯೋಜಿಸಿದ್ದರು. ಆದರೆ ಟಿಕೆಟ್ ಲಭಿಸದ ಕಾರಣ ಈ ಯೋಜನೆ ರದ್ದಾಯಿತು. ತಮ್ಮ ಪ್ರಶ್ನೆಗಳಿಗೆ ಉತ್ತರ ಸಿಗದಿದ್ದರೆ, ಫಿರೋಜ್‌ಪುರದಿಂದ ದೆಹಲಿಗೆ ತೆರಳಿ ಸರ್ಕಾರಿ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ರಜನಿ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ರಿಷ್ರಾದ ಹರಿಸಭಾ ಪ್ರದೇಶದವರಾದ ಸಾಹು ಅವರ ಪೋಷಕರು, ತಮ್ಮ ಮಗನ ಬಿಡುಗಡೆಗೆ ಅಗತ್ಯವಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದಾಗಿ ಹೇಳಿದ್ದಾರೆ. "ನಾನು ಎಷ್ಟು ಒತ್ತಡದಲ್ಲಿದ್ದೇನೆ ಎಂದು ಹೇಳಲಾಗದು. ನನ್ನ ಮಗನನ್ನು ವಾಪಸ್ ಕರೆತರಲು ಬಿಎಸ್‌ಎಫ್ ಅಧಿಕಾರಿಗಳಿಗೆ ವಿನಂತಿಸುತ್ತೇನೆ" ಎಂದು ಸಾಹು ಅವರ ತಾಯಿ ಭಾವುಕರಾಗಿ ತಿಳಿಸಿದ್ದಾರೆ.