Viral News: ಉದ್ಯೋಗಾರ್ಥಿಗಳಲ್ಲಿ ಕನ್ನಡ ಬಯಸದ ಬೆಂಗಳೂರು ಕಂಪನಿ, ನೆಟ್ಟಿಗರ ಸಿಟ್ಟು
ಕನ್ನಡದ ರಾಜಧಾನಿ ನಗರದಲ್ಲಿ ನೆಲೆಗೊಂಡಿರುವ ಸಂಸ್ಥೆಯು ಉದ್ಯೋಗಿಗಳಲ್ಲಿ ಕನ್ನಡವನ್ನು ಕಡೆಗಣಿಸಿರುವುದು ಸೋಶಿಯಲ್ ಮೀಡಿಯಾದಲ್ಲಿ ತೀವ್ರವಾದ (Viral news) ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಅನೇಕ ಬಳಕೆದಾರರು ಕೋಪವನ್ನು ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ನೆಲೆಗೊಂಡಿರುವ ಉದ್ಯೋಗಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಜಾಹೀರಾತು

ಬೆಂಗಳೂರು: ಬೆಂಗಳೂರಿನಲ್ಲಿ ಕಂಪನಿಯೊಂದು ಉದ್ಯೋಗಾರ್ಥಿಗಳಿಗೆ ನೀಡಿರುವ ಜಾಹೀರಾತಿನಲ್ಲಿ (Advertisement), ಕನ್ನಡ (Kannada) ಹೊರತುಪಡಿಸಿ ಇಂಗ್ಲಿಷ್, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಪ್ರಾವೀಣ್ಯತೆಗೆ ಆದ್ಯತೆ ನೀಡಿ ಪ್ರಕಟಿಸಿದ್ದು ಇದೀಗ ಕನ್ನಡಿಗರನ್ನು ರೊಚ್ಚಿಗೆಬ್ಬಿಸಿದೆ. ಬೆಂಗಳೂರಿನ ಜಯನಗರದಲ್ಲಿರುವ ಹೌಸಿಂಗ್ ಫೈನಾನ್ಸ್ ಕಂಪನಿಯೊಂದು ಹೀಗೆ ಮಾಡಿದೆ. ಸಂಪರ್ಕ ಕೇಂದ್ರದ ಕಾರ್ಯನಿರ್ವಾಹಕರಿಗಾಗಿ ಕರೆಯಲಾದ ವಾಕ್-ಇನ್ ಸಂದರ್ಶನ ಜಾಹೀರಾತಿನಲ್ಲಿ ಅದು ಹೀಗೆ ಮಾಡಿ ಇದೀಗ ಕನ್ನಡಿಗರ ಆಕ್ರೋಶ (Viral news) ಎದುರಿಸುತ್ತಿದೆ.
ಪಿಎನ್‌ಬಿ ಬ್ಯಾಂಕ್‌ನ ಅಧೀನ ಸಂಸ್ಥೆಯಾದ ಪಿಎನ್‌ಬಿ ಹೌಸಿಂಗ್ ಫೈನಾನ್ಸ್ , ಸಂಪರ್ಕ ಕೇಂದ್ರದ ಕಾರ್ಯನಿರ್ವಾಹಕರಿಗಾಗಿ ಕರೆಯಲಾದ ವಾಕ್-ಇನ್ ಸಂದರ್ಶನ ಜಾಹೀರಾತಿನಲ್ಲಿ "ಉದ್ಯೋಗಾರ್ಥಿಗಳಿಗೆ ಇಂಗ್ಲಿಷ್, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಪ್ರಾವೀಣ್ಯತೆ ಬೇಕು" ಎಂದು ಪ್ರಕಟಿಸಿದೆ. ಆದರೆ ಕನ್ನಡವನ್ನು ಉಲ್ಲೇಖಿಸಿಲ್ಲ. "ಉತ್ತಮ ಸಂವಹನ ಕೌಶಲ್ಯ ಹೊಂದಿರುವ, ಇಂಗ್ಲಿಷ್, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ, ಸಾಲ ಅಥವಾ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು" ಎಂದು ಉಲ್ಲೇಖಿಸಲಾಗಿದೆ.
ಆದರೆ ಕನ್ನಡದ ರಾಜಧಾನಿ ನಗರದಲ್ಲಿ ನೆಲೆಗೊಂಡಿರುವ ಸಂಸ್ಥೆಯು ಉದ್ಯೋಗಿಗಳಲ್ಲಿ ಕನ್ನಡವನ್ನು ಕಡೆಗಣಿಸಿರುವುದು ಸೋಶಿಯಲ್ ಮೀಡಿಯಾದಲ್ಲಿ ತೀವ್ರವಾದ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಅನೇಕ ಬಳಕೆದಾರರು ಕೋಪವನ್ನು ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ನೆಲೆಗೊಂಡಿರುವ ಉದ್ಯೋಗಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಕನ್ನಡಿಗರು ತಮ್ಮ ಭಾಷಾ ಮತ್ತು ಸಾಂಸ್ಕೃತಿಕ ಪ್ರಾಮುಖ್ಯವನ್ನು ಮರಳಿ ಪಡೆಯಬೇಕಿದ್ದರೆ, ರಾಜ್ಯವು 10ನೇ ತರಗತಿಯವರೆಗೆ ಕನ್ನಡ ಮಾಧ್ಯಮ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ.
Fluent in Tamil or Telugu?? get a Job Bengaluru ❗
— Janardhan || ಜನಾರ್ಧನ್ (@TITTUCOOL) April 26, 2025
PNB Housing Finance ( Subsidiary of PNB bank ) wants it's contact centre executive in Jayanagar to know English and Tamil / Telugu.
Kannadigas?? ಉಂಡೆ ನಾಮ ಹಾಕೊಳ್ಳಿ 🙏🙏 @ShyamSPrasad @dp_satish @ganeshchetan @abhispake… pic.twitter.com/bfAzOdMLYF
ಕರ್ನಾಟಕದ ಅಧಿಕೃತ ಮತ್ತು ಸಾರ್ವಜನಿಕ ಸಂವಹನಗಳಲ್ಲಿ ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸುವ ಭಾಷಾ ನಿಯಮಗಳನ್ನು ಕೆಲವರು ಉಲ್ಲೇಖಿಸಿದ್ದಾರೆ. ಸಂಸ್ಥೆಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೆಲವರು ಒತ್ತಾಯಿಸಿದ್ದಾರೆ. "ತಮಿಳು ಮತ್ತು ತೆಲುಗು ಮಾತನಾಡುವ ಜನಸಂಖ್ಯೆಯು ಬೆಂಗಳೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬರುತ್ತಿದೆ. ಹೀಗಾಗಿ ಇದೆಲ್ಲ ನಡೆಯುತ್ತಿದೆ" ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ವಲಸಿಗರ ಪ್ರಭಾವದಿಂದಾಗಿ ಹೀಗೆಲ್ಲ ಆಗುತ್ತಿದೆ ಎಂದಿದ್ದಾರೆ.
ಆದರೆ ಕೆಲವು ಬಳಕೆದಾರರು ವಿಭಿನ್ನ ದೃಷ್ಟಿಕೋನವನ್ನು ನೀಡಿದ್ದಾರೆ. ಅನೇಕ ಕಂಪನಿಗಳು ಬಹು ರಾಜ್ಯಗಳ ಗ್ರಾಹಕರಿಗೆ ಸೇವೆ ಸಲ್ಲಿಸುವ ಕೇಂದ್ರೀಕೃತ ಕಾಲ್ ಸೆಂಟರ್‌ಗಳನ್ನು ನಿರ್ವಹಿಸುತ್ತವೆ. ಇದು ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೆ ಸೇವೆ ಸಲ್ಲಿಸುವ ಕೇಂದ್ರೀಕೃತ ಕಾಲ್ ಸೆಂಟರ್ ಆಗಿರಬಹುದು. ದೆಹಲಿಯಲ್ಲಿರುವ ಅನೇಕ ಕಂಪನಿಗಳು ವಿವಿಧ ಪ್ರಾದೇಶಿಕ ಭಾಷೆಗಳಿಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳುತ್ತವೆ ಎಂದು ಒಬ್ಬ ಬಳಕೆದಾರರು ಹೇಳಿದ್ದಾರೆ. ಆ ಕಂಪನಿ ಬಹುಶಃ ಈಗಾಗಲೇ ಕನ್ನಡ ಮಾತನಾಡುವ ಸಿಬ್ಬಂದಿಯನ್ನು ಹೊಂದಿರಬಹುದು. ಈ ಖಾಲಿ ಹುದ್ದೆಯು ನಿರ್ದಿಷ್ಟವಾಗಿ ಇತರ ಭಾಷೆ ಮಾತನಾಡುವವರಿಗೆ, ಬಹುಶಃ ಕೆಲವು ಹುದ್ದೆಗಳಿಗೆ ಮಾತ್ರ ಇರಬಹುದು ಎಂದು ಇನ್ನೊಬ್ಬ ಬಳಕೆದಾರರು ಹೇಳಿದ್ದಾರೆ.
ಇದನ್ನೂ ಓದಿ: Viral News: ಅರೇಂಜ್ ಮ್ಯಾರೇಜ್ ಧಿಕ್ಕರಿಸಿ ಮನೆಬಿಟ್ಟು ಓಡಿ ಹೋಗಿದ್ದವಳ ಯಶೋಗಾಥೆ ಇದೀಗ ಎಲ್ಲೆಡೆ ಫುಲ್ ವೈರಲ್