ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮುಂದುವರಿದ ಪಶ್ಚಿಮ ಏಷ್ಯಾ ಸಂಘರ್ಷ: ಮತ್ತೊಮ್ಮೆ ಸ್ವದೇಶಿ ಮಂತ್ರ ಜಪಿಸಿದ ಪ್ರಧಾನಿ ನರೇಂದ್ರ ಮೋದಿ; ಭಾರತೀಯ ಉತ್ಪನ್ನ ಖರೀದಿಗೆ ಕರೆ

Narendra Modi: ಇರಾನ್‌ ವಿಶ್ವದ ಪ್ರಮುಖ ತೈಲ ಮಾರ್ಗ ಹೊರ್ಮುಜ್‌ ಜಲಸಂಧಿಯ ಮೇಲಿನ ನಿರ್ಬಂಧ ಇನ್ನೂ ಸಡಿಲಿಸದ ಹಿನ್ನೆಲೆಯಲ್ಲಿ ಇಂಧನ ಬೆಲೆ ಏರಿಕೆಯಾಗುತ್ತಿದ್ದು, ದೇಶವಾಸಿಗಳು ಅನಗತ್ಯ ಖರ್ಚು ಮಾಡದಂತೆ, ವಿದೇಶ ಪ್ರವಾಸ ಕಡಿಮೆ ಮಾಡುವಂತೆ ಮತ್ತು ಭಾರತದಲ್ಲೇ ತಯಾರಾಗುವ ಉತ್ಪನ್ನ ಬಳಸುವಂತೆ ಪ್ರಧಾನಿ ನರೇಂದ್ರ ಮೋದಿ

ನರೇಂದ್ರ ಮೋದಿ

ಹೈದರಾಬಾದ್‌, ಮೇ 10: ಪಶ್ಚಿಮ ಏಷ್ಯಾದಲ್ಲಿ ಆರಂಭವಾದ ಸಂಘರ್ಷ ಇನ್ನೂ ತಿಳಿಯಾಗಿಲ್ಲ. ಇರಾನ್‌ ವಿಶ್ವದ ಪ್ರಮುಖ ತೈಲ ಮಾರ್ಗ ಹೊರ್ಮುಜ್‌ ಜಲಸಂಧಿಯ ಮೇಲಿನ ನಿರ್ಬಂಧ ಇನ್ನೂ ಸಡಿಲಿಸದ ಹಿನ್ನೆಲೆಯಲ್ಲಿ ಇಂಧನ ಬೆಲೆ ಏರಿಕೆಯಾಗುತ್ತಿದ್ದು, ದೇಶವಾಸಿಗಳು ಅನಗತ್ಯ ಖರ್ಚು ಮಾಡದಂತೆ, ವಿದೇಶ ಪ್ರವಾಸ ಕಡಿಮೆ ಮಾಡುವಂತೆ ಮತ್ತು ಭಾರತದಲ್ಲೇ ತಯಾರಾಗುವ ಉತ್ಪನ್ನ ಬಳಸುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕರೆ ನೀಡಿದ್ದಾರೆ. ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ಮಾತನಾಡಿದ ಅವರು ಸ್ವದೇಶಿ ಮಂತ್ರ ಜಪಿಸಿದ್ದಾರೆ.

ಸಾರ್ವಜನಿಕ ವಾಹನ ಬಳಸುವ ಮೂಲಕ ಪ್ರಜೆಗಳು ಪೆಟ್ರೋಲ್‌, ಡೀಸೆಲ್‌ ಉಪಯೋಗ ಕಡಿಮೆ ಮಾಡುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಅನಗತ್ಯವಾಗಿ ಚಿನ್ನ ಖರೀದಿಸದಂತೆಯೂ, ಸಾಧ್ಯವಾದಷ್ಟು ವರ್ಕ್‌ ಫ್ರಮ್‌ ಹೋಂ ಮಾಡುವಂತೆಯೂ ಸಲಹೆ ನೀಡಿದ್ದಾರೆ.

ನರೇಂದ್ರ ಮೋದಿ ಭಾಷಣ:



ವಿದೇಶ ಪ್ರವಾಸ ಕಡಿಮೆ ಮಾಡಿ

ಉಳಿತಾಯದತ್ತ ಗಮನ ಹರಿಸುವಂತೆ ತಿಳಿಸಿದ ಪ್ರಧಾನಿ ವಿದೇಶ ಪ್ರವಾಸ ಮುಂದೂಡುವಂತೆ ಹೇಳಿದ್ದಾರೆ. ʼʼದೇಶಪ್ರೇಮ ಎಂದರೆ ಗಡಿಯಲ್ಲಿ ಪ್ರಾಣ ತ್ಯಾಗ ಮಾಡುವುದು ಮಾತ್ರವಲ್ಲ. ಇಂತಹ ಸಮಯದಲ್ಲಿ ನಮ್ಮ ಕರ್ತವ್ಯವನ್ನು ಅರಿತುಕೊಂಡು ಜೀವಿಸುವುದು ಕೂಡ ದೇಶಪ್ರೇಮವೇʼʼ ಎಂದಿ ಪ್ರತಿಪಾದಿಸಿದ್ದಾರೆ. ʼʼಪ್ರತಿಯೊಬ್ಬರ ಸಹಕಾರ, ಕೊಡುಗೆಯಿಂದ ಈಗ ಎದುರಾಗಿರುವ ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು. ಹೀಗಾಗಿ ಪ್ರವಾಸಕ್ಕಾಗಿ ವಿದೇಶಕ್ಕೆ ಹೋಗುವುದನ್ನು ನಿಲ್ಲಿಸಿʼʼ ಎಂದು ಹೇಳಿದ್ದಾರೆ.

ʼʼಇಂಧನ ಉಳಿಸಲು ಅಗತ್ಯವಿರುವಲ್ಲೆಲ್ಲ ಸಾರ್ವಜನಿಕ ಸಾರಿಗೆ, ಮೆಟ್ರೋ ಬಳಸುವುದನ್ನು ರೂಢಿಸಿಕೊಳ್ಳಿ. ಕಾರ್‌ ಪೊಲೀಂಗ್‌ ಅನುಸರಿಸಿ. ವಸ್ತುಗಳ ಸಾಗಾಟಕ್ಕೆ ರೈಲುಗಳಲ್ಲೇ ಉಪಯೋಗಿಸಿʼʼ ಎಂದು ಮೋದಿ ಸಲಹೆ ನೀಡಿದ್ದಾರೆ. ಜತೆಗೆ ಎಲೆಕ್ಟ್ರಿಕ್‌ ವಾಹನಗಳ ಬಳಕೆ ಉತ್ತೇಜಿಸುವಂತೆ ಸೂಚಿಸಿದ್ದಾರೆ.

ಸರ್ಕಾರ ರಚಿಸಲು ಬಹುಮತ ನೀಡಿದ ಪಶ್ಚಿಮ ಬಂಗಾಳದ ಜನತೆಗೆ ಅಡ್ಡಬಿದ್ದು ನಮಸ್ಕರಿಸಿದ ಪ್ರಧಾನಿ ನರೇಂದ್ರ ಮೋದಿ

ವಿದೇಶಗಳಲ್ಲಿನ ಮದುವೆ ತಪ್ಪಿಸಿ

ರಾಷ್ಟ್ರೀಯ ಹಿತಾಸಕ್ತಿಗಾಗಿ ಕೋವಿಡ್ ಕಾಲದ ಕ್ರಮಗಳನ್ನು ಪುನರುಜ್ಜೀವನಗೊಳಿಸಬೇಕೆಂದು ಅವರು ಹೇಳಿದ್ದಾರೆ. ವರ್ಕ್‌ ಫ್ರಮ್‌ ಹೋಂ, ಆನ್‌ಲೈನ್ ಮತ್ತು ವರ್ಚುವಲ್ ಸಭೆ ನಡೆಸಬೇಕು. ವಿದೇಶಿ ವಿನಿಮಯ ಮೀಸಲು ಉಳಿಸಲು ವಿದೇಶಗಳಲ್ಲಿ ರಜೆ ಕಳೆಯುವುದನ್ನು ಮತ್ತು ವಿದೇಶಿ ವಿವಾಹಗಳನ್ನು ತಪ್ಪಿಸುವಂತೆ ಮೋದಿ ಮನವಿ ಮಾಡಿದ್ದಾರೆ. ʼʼಒಂದು ವರ್ಷದವರೆಗೆ ಅನಗತ್ಯ ಚಿನ್ನದ ಖರೀದಿ ತಪ್ಪಿಸಿ. ಖಾದ್ಯ ತೈಲ ಬಳಕೆ ಕಡಿಮೆ ಮಾಡಬೇಕು. ಇದು ರಾಷ್ಟ್ರೀಯ ಆರ್ಥಿಕ ವ್ಯವಸ್ಥೆ ಮತ್ತು ವೈಯಕ್ತಿಕ ಆರೋಗ್ಯ ಎರಡಕ್ಕೂ ಪ್ರಯೋಜನ ನೀಡುತ್ತದೆʼʼ ಎಂದು ಒತ್ತಿ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು: ಮೋದಿಗೆ ಡೊನಾಲ್ಡ್ ಟ್ರಂಪ್ ಅಭಿನಂದನೆ

ಸ್ವದೇಶಿ ಮಂತ್ರ

ಭಾರತದಲ್ಲೇ ತಯಾರಾಗುವ ದಿನಬಳಕೆಯ ವಸ್ತುಗಳಾದ ಶೂ, ಬ್ಯಾಗ್‌ ಇತ್ಯಾದಿ ಬಳಸುವಂತೆ ಮೋದಿ ಸಲಹೆ ನೀಡಿದ್ದಾರೆ. ರೈತರು ರಾಸಾಯನಿಕ ಗೊಬ್ಬರ, ಕೀಟನಾಶಕದ ಬಳಕೆಯನ್ನು ಶೇಕಡ 50ರಷ್ಟು ಕಡಿಮೆ ಮಾಡುವಂತೆಯೂ ಸೋಲಾರ್‌ ಬಳಕೆ ಹೆಚ್ಚಿಸಬೇಕು. ದೇಶಿಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮೂಲಕ ಆರ್ಥಿಕತೆ ಬಲ ತುಂಬುವಂತೆಯೂ ಹೇಳಿದ್ದಾರೆ.

image

ಇದು ಕೇವಲ ಬಿಜೆಪಿಯ ಸಮಸ್ಯೆಯಲ್ಲ - ಇದು ಇಡೀ ರಾಷ್ಟ್ರಕ್ಕೆ ಸಂಬಂಧಿಸಿದ ವಿಷಯ. ಇದಕ್ಕಾಗಿ ಪ್ರತಿಯೊಬ್ಬ ನಾಗರಿಕ, ಪ್ರತಿಯೊಂದು ರಾಜಕೀಯ ಪಕ್ಷ, ಪ್ರತಿಯೊಂದು ಸರ್ಕಾರ, ಪ್ರತಿಯೊಂದು ಸಮುದಾಯ ಮತ್ತು ಪ್ರತಿಯೊಂದು ಸಂಘಟನೆಯು ಬದ್ಧವಾಗಿರಬೇಕು ಮತ್ತು ದೃಢನಿಶ್ಚಯದಿಂದ ಒಗ್ಗಟ್ಟಾಗಿರಬೇಕು

ನರೇಂದ್ರ ಮೋದಿ, ಪ್ರಧಾನ ಮಂತ್ರಿ

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author