Photos: ದಾಂಪತ್ಯ ಬದುಕಿಗೆ ಕಾಲಿಟ್ಟ '777 ಚಾರ್ಲಿ' ಡೈರೆಕ್ಟರ್ ಕಿರಣ್ ರಾಜ್; ಮದುವೆಗೆ ಬಂದು ಶುಭ ಹಾರೈಸಿದ ರಕ್ಷಿತ್ ಶೆಟ್ಟಿ
ʻ777 ಚಾರ್ಲಿʼ ಸಿನಿಮಾ ನಿರ್ದೇಶಕ ಕಿರಣ್ ರಾಜ್ ಕೆ. ಅವರು ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಇದೇ ವರ್ಷ ಜನವರಿಯಲ್ಲಿ ಅನಯ ವಸುಧಾ ಅವರೊಂದಿಗೆ ಕಿರಣ್ ರಾಜ್ ಅವರ ಮದುವೆ ಎಂಗೇಜ್‌ಮೆಂಟ್ ನಡೆದಿತ್ತು. ಇದೀಗ ಮದುವೆ ಸಮಾರಂಭ ನಡೆದಿದೆ. ಅನಯ ವಸುಧಾ ಅವರು ವೃತ್ತಿಪರ ನೃತ್ಯಗಾರ್ತಿ ಆಗಿದ್ದು, ಇದೀಗ ಇವರಿಬ್ಬರ ಮದುವೆ ಫೋಟೋಗಳು ಸಖತ್ ವೈರಲ್ ಆಗಿವೆ. ಮದುವೆಗೆ ನಟ ರಕ್ಷಿತ್ ಶೆಟ್ಟಿ ಅವರು ಆಗಮಿಸಿ, ನೂತನ ಜೋಡಿಗೆ ಶುಭ ಹಾರೈಸಿದ್ದಾರೆ.
1/5
ಶಾಸ್ತ್ರೋಕ್ತವಾಗಿ ನಡೆದ ಕಿರಣ್ ರಾಜ್ ಮದುವೆ, ಕುಟುಂಬಸ್ಥರು, ಸ್ನೇಹಿತರು, ಆಪ್ತರು ಭಾಗಿ
2/5
ಕಿರಣ್ ರಾಜ್ ಮತ್ತು ಅನಯ ವಸುಧಾ ಇಬ್ಬರು ಕೂಡ ಕಾಸರಗೋಡು ಮೂಲದವರು.
3/5
ಹಲವು ದಿನಗಳ ಹಿಂದೆಯೇ ಶುರುವಾಗಿದ್ದ ಮದುವೆ ತಯಾರಿಗಳು, ಇದೀಗ ಸಪ್ತಪದಿ ತುಳಿದಿರುವ ಕಿರಣ್ ರಾಜ್ ಮತ್ತು ಅನಯಾ ವಸುಧಾ
4/5
ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಾಣ ಮಾಡಿದ್ದ '777 ಚಾರ್ಲಿ' ಸಿನಿಮಾವನ್ನು ನಿರ್ದೇಶಿಸುವ ಮೂಲಕ ಸ್ಯಾಂಡಲ್‌ವುಡ್‌ಗೆ ನಿರ್ದೇಶಕ ಕಿರಣ್‌ರಾಜ್ ಕೆ. ಎಂಟ್ರಿ ನೀಡಿದ್ದರು
5/5
ಕಿರಣ್ ರಾಜ್ ಕೆ. ಅವರು ತಮ್ಮ ಮೊದಲ ಸಿನಿಮಾದ ನಿರ್ದೇಶನಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.