ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Darshan: ಸೀಕ್ರೆಟ್‌ ಆಗಿ ಮದುವೆ ಆಗಿದ್ರಾ ನಟ ದರ್ಶನ್‌; ಪವಿತ್ರಾ ಗೌಡ ಜತೆಗಿನ ಹಳೆಯ ಫೋಟೊಗಳು ವೈರಲ್‌!

Sandalwood News: ದರ್ಶನ್ ಹಾಗೂ ಪವಿತ್ರಾ ಗೌಡ ಮದುವೆಯದ್ದು ಎಂಬುವುದನ್ನು ಬಿಂಬಿಸಲು ಲೀಕ್ ಮಾಡಿರುವ ಫೋಟೊಗಳಂತೆ ಇವು ಕಾಣುತ್ತಿದೆ. ಇದರಿಂದ ನಟ ದರ್ಶನ್‌ ಮತ್ತು ಪವಿತ್ರಾ ಗೌಡಗೆ ರಹಸ್ಯವಾಗಿ ಮದುವೆಯಾಗಿತ್ತಾ? ಎಂಬ ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣ ಪವಿತ್ರಾ ಕೊರಳಲ್ಲಿರುವ ಅರಿಶಿನ ದಾರವಾಗಿದೆ.

ದರ್ಶನ್ ಹಾಗೂ ಪವಿತ್ರಾ ಗೌಡ ಅವರ ಮದುವೆಯದ್ದು ಎನ್ನಲಾದ ಫೋಟೊಗಳು.
1/5

ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್ ಮತ್ತು ಪವಿತ್ರಾ ಗೌಡ ( Actor Darshan and Pavithra Gowda) ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಶುಕ್ರವಾರ ಈ ಪ್ರಕರಣದ ವಿಚಾರಣೆ ನಡೆಸಿರುವ ಕೋರ್ಟ್‌, ಆರೋಪಿಗಳ ವಿರುದ್ಧ ದೋಷಾರೋಪ ನಿಗದಿಯನ್ನು ನ.3ಕ್ಕೆ ಮುಂದೂಡಿದೆ. ಈ ನಡುವೆ ದರ್ಶನ್‌ ಮತ್ತು ಪವಿತ್ರಾ ಗೌಡ ಅವರ ಹಳೆಯ ಫೋಟೊಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಈ ಫೋಟೊಗಳು ಹಲವು ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ.

2/5

ಇವುಗಳನ್ನು ಪ್ರಾಥಮಿಕವಾಗಿ ಲೀಕ್ ಮಾಡಿದ ಫೋಟೊಗಳು ಎನ್ನಲಾಗುತ್ತಿದ್ದು, ದರ್ಶನ್ ಹಾಗೂ ಪವಿತ್ರಾ ಗೌಡ ಮದುವೆಯದ್ದು ಎಂಬುವುದನ್ನು ಬಿಂಬಿಸಲು ಲೀಕ್ ಮಾಡಿರುವ ಫೋಟೋಗಳಂತೆ ಕಾಣುತ್ತಿದೆ. ಇದರಿಂದ ನಟ ದರ್ಶನ್‌ ಮತ್ತು ಪವಿತ್ರಾ ಗೌಡಗೆ ಹಲವು ವರ್ಷಗಳ ಹಿಂದೆಯೇ ಮದುವೆಯಾಗಿತ್ತಾ? ಎಂಬ ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣ ಪವಿತ್ರಾ ಕೊರಳಲ್ಲಿರುವ ಅರಶಿನ ದಾರವಾಗಿದೆ.

3/5

ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇವರಿಬ್ಬರಿಗೆ ಸಂಬಂಧಿಸಿದ ಫೋಟೊಗಳು ವೈರಲ್ ಆಗಿವೆ. ಆದರೆ, ಈ ಜೋಡಿ ತೆಗೆದುಕೊಂಡಿರುವ ಹಳೆಯ ಫೋಟೊಗಳು ಈ ಸಂದರ್ಭದಲ್ಲಿ ಯಾಕೆ ವೈರಲ್‌ ಆಗುತ್ತಿವೆ ಎಂಬ ಪ್ರಶ್ನೆಯೂ ಉದ್ಭವಿಸಿದೆ.

4/5

ಪವಿತ್ರಾ ಹಾಗೂ ದರ್ಶನ್ ಬಿಳಿಯ ರೇಷ್ಮೆ ವಸ್ತ್ರದಲ್ಲಿ ವಧು-ವರರ ಅವತಾರದಲ್ಲಿದ್ದಾರೆ. ಪವಿತ್ರಾ ಕತ್ತಲ್ಲಿ ಅರಿಶಿಣ ದಾರದ ಮಾಂಗಲ್ಯ ಕಾಣುತ್ತದೆ. ಕೆನ್ನೆಗೆ ಅರಿಶಿಣ ಹಚ್ಚಿದ್ದಾರೆ, ಹಣೆಗೆ ಕುಂಕುಮವಿಟ್ಟಿದ್ದಾರೆ. ದರ್ಶನ್ ಕೂಡ ಹಣೆಗೆ ತಿಲಕವಿಟ್ಟು ಪವಿತ್ರಾ ಜತೆ ಅನ್ಯೋನ್ಯವಾಗಿ ಸೆಲ್ಫಿಗೆ ಪೋಸ್ ಕೊಟ್ಟಿದ್ದಾರೆ. 10 ವರ್ಷಗಳ ಹಿಂದಿನ ಫೋಟೋಗಳು ಎನ್ನುವಂತೆ ಕಾಣುತ್ತಿದೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

5/5

ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ದರ್ಶನ್ ಹಾಗೂ ಪವಿತ್ರಾ ಪ್ರಕರಣದ ಸಂಬಂಧ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಮಾಡಲಾಗಿದೆ.‌