ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರೆಂಟ್‌ ಬ್ಲ್ಯೂ ಸ್ಕರ್ಟ್ ಸೆಟ್‌ನಲ್ಲಿ ಮಿಂಚಿದ ನಟಿ ನಭಾ ನಟೇಶ್‌

Actress Nabha Natesh: ನಟಿ ನಭಾ ನಟೇಶ್‌ ಕರೆಂಟ್‌ ಬ್ಲ್ಯೂ ಶೇಡ್‌ನ ಸಿಕ್ವೀನ್ಸ್ ಸ್ಕರ್ಟ್‌ ಸೆಟ್‌ನಲ್ಲಿ ಮಿಂಚಿದ್ದಾರೆ. ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಲುಕ್‌ ಹೇಗಿದೆ? ಧರಿಸಿರುವ ಔಟ್‌ಫಿಟ್‌ ವಿಶೇಷತೆಯೇನು? ಇಲ್ಲಿದೆ ಡಿಟೇಲ್ಸ್.

ಸಂಗ್ರಹ ಚಿತ್ರ
1/5

ನಟಿ ನಭಾ ನಟೇಶ್‌ ಮಿನುಗುವ ಸಿಕ್ವೀನ್ಸ್ ಟೂ ಪೀಸ್‌ ಸ್ಕರ್ಟ್ನಲ್ಲಿ ಸಖತ್‌ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ.

ಮಿನುಗುವ ಕರೆಂಟ್‌ ಬ್ಲ್ಯೂ ಸ್ಕರ್ಟ್ ಸೆಟ್‌

ಹೌದು, ಎದ್ದು ಕಾಣಿಸುವಂತಹ ಕರೆಂಟ್‌ ಬ್ಲ್ಯೂ ಕಲರ್‌ನ ಮಿನುಗುವ ಸಿಕ್ವೀನ್ಸ್ ವಿನ್ಯಾಸದ ಮೆರ್ಮೈಡ್‌ ವಿನ್ಯಾಸದ ಸ್ಕರ್ಟ್‌ ಹಾಗೂ ಬಿಕಿನಿ ಸ್ಟೈಲ್‌ನ ಕ್ರಾಪ್‌ ಸ್ಟ್ರಾಪ್‌ ಬ್ಲೌಸ್‌ನಲ್ಲಿ ಹಾಟ್‌ ಪೋಸ್‌ ನೀಡುತ್ತಾ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಹೊಸ ಲುಕ್‌ ಟ್ರೆಂಡಿ ಫ್ಯಾಷನ್‌ಗೆ ಸಾಥ್‌ ನೀಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ಮಿಂಚು.

2/5

ನಭಾ ನಟೇಶ್‌ ಔಟ್‌ಫಿಟ್‌ ವಿಶೇ‍ಷತೆ :

ಅಂದಹಾಗೆ, ಈ ಫೋಟೋಗಳಲ್ಲಿ ನಭಾ ಧರಿಸಿರುವ ಸ್ಕರ್ಟ್ ಸಾಮಾನ್ಯ ಸ್ಕರ್ಟ್ ಅಲ್ಲವೇ ಅಲ್ಲ, ಇದೊಂದು ಡಿಸೈನರ್‌ ಸ್ಕರ್ಟ್. ಮೆರ್ಮೈಡ್‌ ಕಟ್‌ ಹಾಗೂ ವಿನ್ಯಾಸ ಹೊಂದಿದೆ. ಇದರೊಂದಿಗೆ ಧರಿಸಿರುವ ಬಿಕಿನಿ ಶೈಲಿಯ ಸ್ಟ್ರಾಪ್‌ಲೆಸ್‌ ಬ್ಲೌಸ್‌ ಅವರಿಗೆ ಹಾಟ್‌ ಲುಕ್‌ ನೀಡಿದೆ. ಪರಿಣಾಮ, ನಭಾರ ಬಾಡಿ ಮಾಸ್‌ ಇಂಡೆಕ್ಸನ್ನು ಹೈಲೈಟ್‌ ಮಾಡಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

3/5

ನಭಾ ನಟೇಶ್‌ ಫ್ಯಾಷನ್‌ ಲವ್‌ :

ಇನ್ನು, ನಭಾ ನಟೇಶ್‌ ಮೊದಲಿನಿಂದಲೂ ಸಖತ್‌ ಫ್ಯಾಷನೆಬಲ್‌ ನಟಿ. ಧರಿಸುವ ಒಂದೊಂದು ಔಟ್‌ಫಿಟ್ಟನ್ನು ಕರಾರುವಕ್ಕಾಗಿ ಸ್ಟೈಲಿಂಗ್‌ ಮಾಡುತ್ತಾರೆ ಎನ್ನುತ್ತಾರೆ ಸ್ಟೈಲಿಸ್ಟ್ಸ್.

ನಭಾ ನಟೇಶ್‌ ಡಿಟೇಲ್ಸ್

4/5

ನಟಿ ನಭಾ ನಟೇಶ್‌ ಶೃಂಗೇರಿಯವರು, ಸ್ಯಾಂಡಲ್‌ವುಡ್‌ನಲ್ಲಿ ಶಿವರಾಜ್‌ ಕುಮಾರ್‌ ಅಭಿನಯದ ವಜ್ರಕಾಯ, ಸುಮಂತ್‌ ಜೊತೆಗೆ ಲೀ ಸೇರಿದಂತೆ ಒಂದೆರೆಡು ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

5/5

ತೆಲುಗಿನ ಸ್ಮಾರ್ಟ್ ಶಂಕರ್‌ ಚಿತ್ರದಲ್ಲೂ ನಟಿಸಿದ್ದಾರೆ. ಫ್ಯಾಷನ್‌ ವಿಶ್ಲೇಷಕರ ಪ್ರಕಾರ, ಸದ್ಯ ನಭಾ ಸಿನಿಮಾಗಳಿಗಿಂತ ಜಾಹೀರಾತು ಹಾಗೂ ಫೋಟೋಶೂಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.

ಶೀಲಾ ಸಿ ಶೆಟ್ಟಿ

View all posts by this author