ʻನಿಮ್ ಹುಡುಗಿ ಕೊಟ್ಟ ಮಾತು ಉಳಿಸಿಕೊಂಡಿದ್ದಾಳೆʼ; ಎಂಬಿಬಿಎಸ್ ಪದವಿ ಪಡೆದ ಖುಷಿಯಲ್ಲಿ ಡಾ. ಶ್ರೀಲೀಲಾ; ಇಲ್ಲಿವೆ ಘಟಿಕೋತ್ಸವದ ಫೋಟೋಗಳು
ನಟಿ ಶ್ರೀಲೀಲಾ ಅವರು ತಮ್ಮ ಎಂಬಿಬಿಎಸ್ ಕೋರ್ಸ್ ಮುಗಿಸಿ, ಪದವಿಯನ್ನು ಪಡೆದುಕೊಂಡಿದ್ದಾರೆ. ಅವರೀಗ ಡಾ. ಶ್ರೀಲೀಲಾ ಆಗಿದ್ದಾರೆ. ನಟಿಯಾಗಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಅವರು, ಅದರ ನಡುವೆಯೂ ವೈದ್ಯಕೀಯ ಪದವಿ ಪಡೆದಿರುವುದು ನಿಜಕ್ಕೂ ಸಾಧನೆಯೇ ಸರಿ. ಸದ್ಯ ತಮ್ಮ ಘಟಿಕೋತ್ಸವದ ಪೋಟೋಗಳನ್ನು ಹಂಚಿಕೊಂಡಿರುವ ಶ್ರೀಲೀಲಾ, ತಮ್ಮ ಮನದಾಳದ ಮಾತುಗಳನ್ನು ಬರೆದುಕೊಂಡಿದ್ದಾರೆ. ತಾವು ವೈದ್ಯಕೀಯ ಪದವಿ ಪಡೆದುಕೊಂಡಿದ್ದನ್ನು ಒಂದು ಮೈಲಿಗಲ್ಲು, ಒಂದು ಪಯಣ ಎಂದು ಕರೆದುಕೊಂಡಿರುವ ಅವರು, "ತಿಳಿದೋ ಅಥವಾ ತಿಳಿಯದೆಯೋ ನೀವೆಲ್ಲರೂ ಇದರ ಭಾಗವಾಗಿದ್ದಿರಿ" ಎಂದು ಹೇಳಿದ್ದಾರೆ. ಅವರ ಮನದಾಳದ ಮಾತುಗಳು ಮತ್ತು ಘಟಿಕೋತ್ಸವದ ಸುಂದರ ಪೋಟೋಗಳು ಇಲ್ಲಿವೆ ನೋಡಿ.
"ಇದೊಂದು ಪವಿತ್ರ ತಾಣ. ಹೊರಗಿನ ತೋರ್ಪಡಿಕೆಯ ಪ್ರಪಂಚದಿಂದ ದೂರವಿರಲು ನನಗೆ ಸಿಕ್ಕ ಏಕಾಂತದ ಜಾಗವಿದು... ಇಲ್ಲಿ ನಾನು ನಾನಾಗಿಯೇ ಇರಬಹುದಿತ್ತು" ಎಂದು ಶ್ರೀಲೀಲಾ ಹೇಳಿಕೊಂಡಿದ್ದಾರೆ.
"ನಿಮ್ಮ ಹುಡುಗಿ ಕೊಟ್ಟ ಮಾತು ಉಳಿಸಿಕೊಂಡಿದ್ದಾಳೆ. ಇದೊಂದು ಬರೀ ಪದವಿಯಲ್ಲ. ಇದು ಬೆಳವಣಿಗೆ, ನಂಬಿಕೆ, ಕಣ್ಣೀರು, ಛಲ ಮತ್ತು ನನ್ನನ್ನು ನಾನು ರೂಪಿಸಿಕೊಂಡ ಹಾದಿ" ಎಂದಿದ್ದಾರೆ ಶ್ರೀಲೀಲಾ.
"ನನ್ನ ಕುಟುಂಬ, ಸ್ನೇಹಿತರು ಮತ್ತು ನನ್ನ ಜೊತೆ ಕೆಲಸ ಮಾಡುವ ಸ್ನೇಹಿತರಿಗೆ—ವಿಶೇಷವಾಗಿ ನನ್ನ ಪರೀಕ್ಷೆಯ ಸಮಯದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದಕ್ಕೆ ಮತ್ತು ಗೊಂದಲದ ನಡುವೆಯೂ ನನ್ನ ಬೆನ್ನೆಲುಬಾಗಿ ನಿಂತಿದ್ದಕ್ಕೆ—ಹೃದಯಾಳದಿಂದ ಧನ್ಯವಾದಗಳು" ಎಂದ ಶ್ರೀಲೀಲಾ.
"ನನ್ನ ಮೇಲೆ ನನಗೇ ನಂಬಿಕೆ ಬರುವ ಮುನ್ನವೇ, ನನ್ನನ್ನು ನಂಬಿದ ಪ್ರತಿಯೊಬ್ಬರಿಗೂ ಧನ್ಯವಾದಗಳು" ಎಂದ ಶ್ರೀಲೀಲಾ.
"ನಾನು ನಿಮಗೆ ಆಭಾರಿ. ನೀವು ನನಗಾಗಿ ಮೀಸಲಿಟ್ಟ ಸಮಯಕ್ಕೆ. ಪ್ರತಿಯೊಂದು ನಗುವಿಗೆ, ಪ್ರೋತ್ಸಾಹದ ಮಾತುಗಳಿಗೆ ಮತ್ತು ನಿಮ್ಮ ಮೌನ ಪ್ರಾರ್ಥನೆಗಳಿಗೆ ನಾನು ಕೃತಜ್ಞಳು" ಎಂದಿರುವ ಶ್ರೀಲೀಲಾ.
"ಈ ಅಧ್ಯಾಯ ನನ್ನನ್ನು ರೂಪಿಸಿದೆ. ವಿನಯವನ್ನು ಕಲಿಸಿದೆ. ನನ್ನನ್ನು ಬಲಗೊಳಿಸಿದೆ. ಹೀಗಾಗಿ, ನನ್ನನ್ನು ನಾನು ನಿಮಗೆ ಮರುಪರಿಚಯಿಸಿಕೊಳ್ಳುತ್ತಿದ್ದೇನೆ ಪ್ರೀತಿಯಿಂದ.. ಡಾ. ಶ್ರೀಲೀಲಾ" ಎಂದು ಬರೆದುಕೊಂಡ ನಟಿ.
ಸದ್ಯ ತಮ್ಮ ತಾಯಿ ಸ್ವರ್ಣಲತಾ ಅವರಂತೆಯೇ ತಾವು ಡಾಕ್ಟರ್ ಆದ ಖುಷಿಯಲ್ಲಿದ್ದಾರೆ ಶ್ರೀಲೀಲಾ.