ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aisha Sharma: ನಟಿ ಐಶಾ ಶರ್ಮಾ ಸೆಕ್ಸಿ ಲುಕ್‌ಗೆ ನೆಟ್ಟಿಗರು ಫಿದಾ; ಇಲ್ಲಿದೆ ನೋಡಿ ಫೋಟೋಸ್‌

ಮಾಡೆಲ್ ಹಾಗೂ ನಟಿಯಾಗಿ ಮಿಂಚುತ್ತಿರುವ ಐಶಾ ಶರ್ಮಾ ಸಿನಿಮಾ ಅಲ್ಲದೆ ವೈಯಕ್ತಿಕ ವಿಚಾರ ವಾಗಿಯೂ ಬಹಳಷ್ಟು ಸುದ್ದಿಯಲ್ಲಿರುತ್ತಾರೆ. ತಮ್ಮ ವಿಶಿಷ್ಟ ಫ್ಯಾಷನ್ ಸೆನ್ಸ್‌ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿದ ಇವರು ಈ ಭಾರಿ ಮುಂಬೈನ ಸ್ಟ್ರೀಟ್ ನಲ್ಲಿ‌ ಫೋಟೋ ಶೂಟ್ ಮಾಡಿಸಿ ಸುದ್ದಿಯಾಗಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿವೆ‌.

Aisha Sharma
1/7

ಮಾಡೆಲ್ ಹಾಗೂ ನಟಿಯಾಗಿ ಖ್ಯಾತಿ ಪಡೆದಿರುವ ಐಶಾ ಶರ್ಮಾ 2018 ರಲ್ಲಿ ಬಿಡುಗಡೆಯಾದ 'ಸತ್ಯಮೇವ ಜಯತೇ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು, ಇದರಲ್ಲಿ ಜಾನ್ ಅಬ್ರಹಾಂ ಮತ್ತು ಮನೋಜ್ ಬಾಜಪೇಯಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

2/7

ತನ್ನ ಫಿಟ್ನೆಸ್ ಹಾಗೂ ಫ್ಯಾಷನ್‌ನಿಂದಲೇ ಬಾಲಿವುಡ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಐಶಾ ಫ್ಯಾಷನ್ ಸೆನ್ಸ್‌ಗೆ ಹೆಸರುವಾಸಿಯಾಗಿದ್ದಾರೆ‌‌. ಸದ್ಯ ತನ್ನ ಇನ್‌ಸ್ಟಾಗ್ರಾಮ್ ನಲ್ಲಿ ಬೋಲ್ಡ್ ಲುಕ್‌ನ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದು ಫ್ಯಾನ್ಸ್ ಕಳೆದು ಹೋಗಿದ್ದಾರೆ.

3/7

ಐಶಾ ಶರ್ಮಾ ಧರಿಸಿದ್ದ ಲೈಟ್ ಬ್ಲೂ ಆಫ್-ಶೋಲ್ಡರ್ ಡ್ರೆಸ್‌ ವಿಶೇಷ ಗಮನ ಸೆಳೆದಿದ್ದು, ಕಟ್ ಔಟ್ ವಿನ್ಯಾಸ ಮೂಲಕ ಗ್ಲಾಮರ್‌ ಲುಕ್ ನೀಡಿದೆ. ತಿಳಿ ನೀಲಿ ಬಣ್ಣದ ಆಫ್‌ ಶೋಲ್ಡರ್ ಡ್ರೆಸ್‌ ನಲ್ಲಿ ನಟಿ ಬಹಳಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

4/7

ಈ ಡ್ರೆಸ್‌ಗೆ ಹೊಂದಿಕೊಳ್ಳುವಂತಹ ಸಿಂಪಲ್ ಇಯರಿಂಗ್‌ ಮತ್ತು ನೆಕ್ಲೆಸ್‌ ಆಯ್ದುಕೊಂಡಿದ್ದ ಅವರು ಒಂದು ಕೈಗೆ ವಾಚ್ ಧರಿಸಿಕೊಂಡಿದ್ದಾರೆ. ಹೀಗಾಗಿ ಸಿಂಪಲ್ ಆಭರಣಗಳೊಂದಿಗೆ ಅವರ ಲುಕ್‌ ಇನ್ನಷ್ಟು ಹೆಚ್ಚಿಸಿದೆ.

5/7

ಅವರ ಮೇಕ್‌ ಅಪ್‌ ಸಹ ಅಷ್ಟೇ ನ್ಯಾಚುರಲ್ ಆಗಿದ್ದು , ನ್ಯೂಡ್ ಬ್ರೌನ್ ಲಿಪ್‌ಸ್ಟಿಕ್‌, ಹಾಗೂ ಸಿಂಪಲ್ ಹೇರ್ ಸ್ಟೈಲ್ ಇವರಿಗೆ ಗ್ಲಾಮರ್ ಲುಕ್‌ ನೀಡಿದೆ. ಐಶಾ ಅವರು ಹಿಡಿದಿದ್ದ ಚಿಕ್ ಬ್ಯಾಗ್ ಮತ್ತು ಧರಿಸಿದ್ದ ಶೂ ಅವರ ಲುಕ್ ಗೆ ಇನ್ನಷ್ಟು ಪರ್ಫೆಕ್ಷನ್‌ ನೀಡಿವೆ.

6/7

ಬಾಲಿವುಡ್ ಬ್ಯೂಟಿ ಐಶಾ ಶರ್ಮಾ ತನ್ನ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದ ಈ ಫೋಟೊ ಗಳು ಬಹಳಷ್ಟು ಸದ್ದು ಮಾಡುತ್ತಿವೆ. ಬೋಲ್ಡ್ ಡ್ರೆಸ್‌ನಲ್ಲಿ ಪೋಸ್ ಕೊಟ್ಟಿದ್ದ ನಟಿಯ ಫೋಟೊ ಗಳಿಗೆ ಬಹಳಷ್ಟು ಲೈಕ್ಸ್ ಕಮೆಂಟ್ಸ್‌ ಬರುತ್ತಿವೆ.

7/7

ಬಾಲಿವುಡ್ ನಟ ಆಯುಷ್ಮಾನ್ ಖುರಾನ ಅವರ 'ವಾರಿ' ಮ್ಯೂಸಿಕ್ ಅಲ್ಬಮ್‌ನಲ್ಲಿ ಕಾಣಿಸಿ ಕೊಂಡಿದ್ದ ಇವರು ಕಳೆದ ಕೆಲವು ವರ್ಷಗಳಿಂದ ವೆಬ್‌ ಸೀರಿಸ್ ಹಾಗೂ ಮ್ಯೂಸಿಕ್ ಅಲ್ಬಮ್‌ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ.