ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Housefull 5: ಕಿಲ್ಲರ್ ಮುಖವಾಡ ಧರಿಸಿ‌ ತನ್ನದೇ ಸಿನಿಮಾದ ವಿಮರ್ಶೆ ಕೇಳಿದ ಸ್ಟಾರ್ ನಟ

ಬಾಲಿವುಡ್ ಕೆಲವು ಸಿನಿಮಾಗಳು ಹಿಟ್ ಆಗುತ್ತಿದ್ದಂತೆ ಅದರ ಮುಂದಿನ ಭಾಗ ತೆರೆ ಕಾಣುವುದು ಸಾಮಾನ್ಯ ಎಂಬಂತಾಗಿದೆ. ಅಂತೆಯೇ ಕಾಮಿಡಿ ಕಿಕ್ ಮೂಲಕ ಜನರನ್ನು ನಕ್ಕು ನಗಿಸುವ ʼಹೌಸ್‌ಫುಲ್‌ʼ ಸಿನಿಮಾದ 5 ವರ್ಷನ್‌ ತೆರೆ ಕಂಡಿದೆ. ಅಭಿಮಾನಿಗಳಿಗೆ ಈ ಸಿನಿಮಾ ನಿಜಕ್ಕೂ ಇಷ್ಟವಾಗುತ್ತಾ? ಪ್ರೇಕ್ಷಕರಿಗೆ ಈ ಸಿನಿಮಾ ಬಗ್ಗೆ ಯಾವ ಅಭಿಪ್ರಾಯ ಇದೆ? ಎಂದು ತಿಳಿಯಲು ಸ್ವತಃ ಅಕ್ಷಯ್ ಕುಮಾರ್ ಥಿಯೇಟರ್ ಮುಂದೆ ಜನರ ಬಳಿ ಸಿನಿಮಾ ವಿಮರ್ಶೆ ಕೇಳಿದ್ದಾರೆ. ಈ ಕುರಿತಾದ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Akshay Kumar
1/5

ತಮ್ಮನ್ನು ಕಂಡರೆ ಜನರು ಮುಗಿ ಬೀಳುತ್ತಾರೆ ಎಂಬ ಕಾರಣಕ್ಕೆ ನಟ ಅಕ್ಷಯ್ ಕುಮಾರ್ ಅವರು ಕಿಲ್ಲರ್‌ನಂತಹ ಮುಸುಕು ಧರಿಸಿಕೊಂಡು ಪ್ರೇಕ್ಷಕರಿಂದ ಅಭಿಪ್ರಾಯ ಪಡೆದುಕೊಂಡಿದ್ದಾರೆ. ಈ ಸಿನಿಮಾ ನಿಮಗೆ ಇಷ್ಟವಾಗಿದ್ಯಾ? ಸಿನಿಮಾದ ಯಾವ ಅಂಶ ಇಷ್ಟವಾಯ್ತು? ಯಾವ ನಟರ ಅಭಿನಯ ನಿಮಗೆ ಇಷ್ಟವಾಯ್ತು? ಎಂಬ ಪ್ರಶ್ನೆಗಳನ್ನು ಕೇಳಿ ಪ್ರೇಕ್ಷಕರಿಂದ ಉತ್ತರ ಪಡೆದಿದ್ದಾರೆ.

2/5

ಸಿಂಗಲ್ ಸ್ಕ್ರೀನ್ ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರ ಬಳಿ ನಟ ಅಕ್ಷಯ್ ಕುಮಾರ್ ಅಭಿಪ್ರಾಯ ಕೇಳಿದ್ದಾರೆ. ಬಹುತೇಕರು ಸಿನಿಮಾ ಬಹಳ ಚೆನ್ನಾಗಿದೆ, ಸಿನಿಮಾದ ಕಾಮಿಡಿ ಚೆನ್ನಾಗಿದೆ, ಪಂಚ್ ಡೈಲಾಗ್ ಇಷ್ಟವಾಯ್ತು ಎಂದಿದ್ದಾರೆ. ಯಾವ ನಟನ ಅಭಿನಯ ಇಷ್ಟವಾಯಿತು ಎಂಬ ಪ್ರಶ್ನೆಗೆ ಬಹುತೇಕರು ನಟ ಅಕ್ಷಯ್ ಕುಮಾರ್ ನಮಗೆ ಇಷ್ಟವಾದರು ಎಂದೇ ಹೇಳಿದ್ದಾರೆ. ಆದರೆ ಇಂತಹ ಅಭಿಪ್ರಾಯ ವಿನಿಯೋಗಿಸಿದ ಅನೇಕ ಪ್ರೇಕ್ಷಕರಿಗೆ ತಮ್ಮ ಸಿನಿಮಾ ವಿಮರ್ಶೆ ಕೇಳುತ್ತಿರುವುದು ಸ್ವತಃ ಅಕ್ಷಯ್ ಕುಮಾರ್ ಎಂಬುದು ಗೊತ್ತಾಗಲೇ ಇಲ್ಲ.

3/5

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೊ ಹಂಚಿಕೊಂಡಿದ್ದಾರೆ. ಹೌಸ್‌ಫುಲ್ 5 ಕಾರ್ಯಕ್ರಮದಿಂದ ಹೊರಬರುವ ಜನರನ್ನು ಕಿಲ್ಲರ್ ಮುಖವಾಡ ಧರಿಸಿ ಸಂದರ್ಶಿಸಲು ನಿರ್ಧರಿಸಿದೆ. ಆರಂಭದಲ್ಲಿ ಯಾರೂ ನನ್ನನ್ನು ಗುರುತು ಹಿಡಿಯಲಿಲ್ಲ ಆದರೆ ಕೆಲವರಿಗೆ ಗೊತ್ತಾಗಿಬಿಟ್ಟಿತು, ಎಲ್ಲರೂ ಗುರುತಿಸುವ ಮೊದಲೇ ಅಲ್ಲಿಂದ ಪರಾರಿ ಆದೆ. ಇದೊಂದು ಉತ್ತಮ ಅನುಭವ ಎಂದು ಬರೆದುಕೊಂಡಿದ್ದಾರೆ.

4/5

'ಹೌಸ್‌ಫುಲ್ 1' ಸಿನಿಮಾ 2010ರಲ್ಲಿ ತೆರೆಕಂಡು ಪ್ರೇಕ್ಷಕರ ಮನ ಗೆದ್ದಿತ್ತು. ಬಳಿಕ 2012, 2016, 2019ರಲ್ಲಿ ʼಹೌಸ್‌ಫುಲ್ʼ 2,3,4 ಸಿನಿಮಾ ತೆರೆ ಕಂಡಿತ್ತು. ಈಗ ʼಹೌಸ್‌ಫುಲ್‌ 5ʼ ಬಿಡುಗಡೆಯಾಗಿದೆ. ಬಾಲಿವುಡ್‌ ನಟ ಅಕ್ಷಯ್‌ ಕುಮಾರ್, ರಿತೇಶ್‌ ದೇಶ್‌ಮುಖ್‌, ಜಾಕ್ವೆಲಿನ್‌ ಫರ್ನಾಂಡೀಸ್‌ ನಟನೆಯ ʼಹೌಸ್‌ಫುಲ್‌ 5ʼ ಕಾಮಿಡಿಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಪಡೆಯುತ್ತಿದೆ.

5/5

ಸೌಂದರ್ಯ ಶರ್ಮಾ, ಜಾಕಿ ಶ್ರಾಫ್‌, ಸಂಜಯ್‌ ದತ್, ಅಭಿಷೇಕ್‌ ಬಚ್ಚನ್‌ ಸೇರಿ ಹಲವರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ತರುಣ್ ಮನ್‌ಸುಖನಿ ನಿರ್ದೇಶನದಲ್ಲಿ, ಸಾಜಿದ್‌ ನಾದಿಯಾವಾಲಾ ನಿರ್ಮಾಣದಲ್ಲಿ ಮೂಡಿ ಬಂದ ಈ ಚಿತ್ರ  ಬಿಡುಗಡೆಯಾದ 2 ದಿನಕ್ಕೆ ಭರ್ಜರಿ ಕಲೆಕ್ಷನ್‌ ಮಾಡಿದೆ