ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Akshaya Tritiya 2026: ಜೆನ್ ಜಿ ಯುವತಿಯರಿಗಾಗಿ ಬಂತು ವಜ್ರಾಭರಣದ ಫ್ಯಾಷನ್ ಜ್ಯುವೆಲರಿಗಳು

Diamond Fashion Jewellery: ಅಕ್ಷಯ ತೃತೀಯ ಸೀಸನ್‌ನಲ್ಲಿ ಮಾಡರ್ನ್ ಹಾಗೂ ಜೆನ್ ಜಿ ಯುವತಿಯರು ಇಷ್ಟಪಡುವಂತಹ ಫ್ಯಾಷನ್ ಜ್ಯುವೆಲರಿಗಳು ವಜ್ರಾಭರಣಗಳಲ್ಲೂ ಎಂಟ್ರಿ ನೀಡಿವೆ. ಯಾವ್ಯಾವ ಡಿಸೈನ್‌ನವು ಹೆಚ್ಚು ಜನಪ್ರಿಯವಾಗಿವೆ? ಈ ಕುರಿತ ವಿವರ ಇಲ್ಲಿದೆ.

ಚಿತ್ರಕೃಪೆ: ಪಿಕ್ಸೆಲ್
1/5

ಜೆನ್ ಜಿ ಯುವತಿಯರು ಇಷ್ಟಪಡುವಂತಹ ಬಂಗಾರ ಹಾಗೂ ವಜ್ರದ ಫ್ಯಾಷನ್ ಜ್ಯುವೆಲರಿಗಳು ಅಕ್ಷಯ ತೃತೀಯ ಸೀಸನ್‌ನಲ್ಲಿ ಲಗ್ಗೆ ಇಟ್ಟಿವೆ. ಈ ಮೊದಲು ಕೇವಲ ಆರ್ಟಿಫಿಷಿಯಲ್ ಮೆಟಲ್‌ನಲ್ಲಿ ದೊರೆಯುತ್ತಿದ್ದ, ಇವು ಇದೀಗ ಊಹೆಗೂ ಮೀರಿದ ಡಿಸೈನ್‌ನಲ್ಲಿ ಕಾಣಿಸಿಕೊಂಡಿವೆ.

2/5

ಜೆನ್ ಜಿ ಹುಡುಗಿಯರ ಫ್ಯಾಷನ್ ಜ್ಯುವೆಲರಿ ಕ್ರೇಝ್

ಮೊದಲಿನಿಂದಲೂ ಫ್ಯಾಷನ್ ಜ್ಯುವೆಲರಿಗಳು ಜೆನ್ ಜಿ ಯುವತಿಯರ ಫೇವರೇಟ್ ಲಿಸ್ಟ್‌ನಲ್ಲಿವೆ. ಇದಕ್ಕೆ ಕಾರಣ, ವೆಸ್ಟರ್ನ್ ಔಟ್‌ಫಿಟ್ ಮಾತ್ರವಲ್ಲ, ಎಲ್ಲಾ ಬಗೆಯ ಡ್ರೆಸ್‌ಕೋಡ್‌ಗಳಿಗೆ ಇವು ಮ್ಯಾಚ್ ಆಗುತ್ತವೆ. ಜತೆಗೆ ಅತ್ಯಾಕರ್ಷಕವಾಗಿ ಕಾಣಿಸುತ್ತವೆ.

3/5

ಸೀಸನ್‌ನಲ್ಲಿ ಚಾಲ್ತಿಯಲ್ಲಿರುವ ಡಿಸೈನ್ಸ್

ಅಬ್‌ಸ್ಟ್ರಾಕ್ಟ್ ಡಿಸೈನ್ಸ್, ಜಂಕ್ ಜ್ಯುವೆಲ್ ಡಿಸೈನ್ಸ್, ಸಿಂಪಲ್ ಸ್ಟಡ್ಸ್, ಕ್ರಿಸ್ಟಲ್ ಶೈನಿಂಗ್ ಹ್ಯಾಂಗಿಂಗ್ಸ್, ಬೀಡ್ಸ್ ಓವರ್‌ಸೈಝ್ ಜ್ಯುವೆಲರಿ, ಜೆಮೆಟ್ರಿಕಲ್ ವಿನ್ಯಾಸ, ಟ್ರಾಪಿಕಲ್ ಡಿಸೈನ್ಸ್, ಫ್ಲೋರಲ್ ಸ್ಟಡ್ಸ್, ಹ್ಯಾಂಗಿಂಗ್ಸ್, ಸೀಸನಬಲ್ ಇಯರಿಂಗ್ಸ್, ನೇಚರ್, ಸನ್-ಮೂನ್-ಸ್ಟಾರ್ ಡಿಸೈನ್ಸ್, ಪರ್ಲ್ ಫ್ಯಾಷನ್ ಜ್ಯುವೆಲರಿ ಸೇರಿದಂತೆ ನಾನಾ ಕಿವಿಯೊಲೆಗಳು, ಪೆಂಡೆಂಟ್ ಹಾಗೂ ಫಿಂಗರ್ ರಿಂಗ್‌ಗಳು ಈ ಕೆಟಗರಿಯಲ್ಲಿ ಎಂಟ್ರಿ ನೀಡಿವೆ.

4/5

ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರ ಚಾಯ್ಸ್

ಈ ಫ್ಯಾಷನ್ ಜ್ಯುವೆಲರಿಗಳು ಲೈಟ್‌ವೇಟ್ ಹಾಗೂ ಕೈಗೆಟಕುವ ದರದಲ್ಲಿ ದೊರಕಲಾರಂಭಿಸಿರುವುದು ಸದ್ಯ ಕಾರ್ಪೋರೇಟ್ ಮಹಿಳೆಯರನ್ನು ಸೆಳೆಯುತ್ತಿದೆ. ಲಕ್ಷ ರೂ. ಗಳಿಗಿಂತ ಕಡಿಮೆಗೆ ದೊರಕುತ್ತಿರುವುದರಿಂದ ಕೊಳ್ಳುಗರ ಸಂಖ್ಯೆಯೂ ಹೆಚ್ಚಾಗಿದೆ ಎನ್ನುತ್ತಾರೆ ಜ್ಯುವೆಲರಿ ಶಾಪ್‌ವೊಂದರ ಮ್ಯಾನೇಜರ್ ರಾಕೇಶ್.

5/5

ಖರೀದಿಸುವ ಫ್ಯಾಷನ್ ಜ್ಯುವೆಲರಿಗಳು ಹೀಗಿರಲಿ

  • ನೋಡಿದಾಗ ಯೂನಿಕ್ ಡಿಸೈನ್ ಎಂದೆನಿಸಬೇಕು.
  • ಇಂಡೋ-ವೆಸ್ಟರ್ನ್ ಲುಕ್‌ಗೂ ಮ್ಯಾಚ್ ಆಗುವಂತಿರಬೇಕು.
  • ಸೂಕ್ಷ್ಮ ಡಿಸೈನ್ಸ್ ಹೊಂದಿರುವುದರಿಂದ ರಫ್ ಬಳಕೆ ಮಾಡಬಾರದು.
  • ಸ್ಟಡ್ಸ್ ಡಿಸೈನ್ಸ್ ರಫ್ ಬಳಕೆ ಮಾಡಬಹುದು.
  • ವಜ್ರದಾದ್ದಲ್ಲಿ ಮೊದಲು ಮಾಹಿತಿ ಪಡೆದು ಖರೀದಿಸಿ.

ಶೀಲಾ ಸಿ ಶೆಟ್ಟಿ

View all posts by this author