Akshaya Tritiya 2026: ಲಕ್ಷುರಿ ಜ್ಯುವೆಲರಿ ಫ್ಯಾಷನ್‌ಗೆ ಸೇರಿದ ಡೈಮಂಡ್ ಆಭರಣಗಳಿವು
ಕಾರ್ಪೋರೇಟ್ ಕ್ಷೇತ್ರದ ಮಾನಿನಿಯರಿಗೆ ಪ್ರಿಯವಾಗುವಂತಹ ನಾನಾ ಕಂಟೆಂಪರರಿ ವಿನ್ಯಾಸದ ಮನಮೋಹಕ ಡೈಮಂಡ್ ಜ್ಯುವೆಲರಿಗಳು ಅಕ್ಷಯ ತೃತೀಯ ಸೀಸನ್ನಲ್ಲಿ ಆಭರಣ ಲೋಕಕ್ಕೆ ಎಂಟ್ರಿ ನೀಡಿವೆ. ಇತ್ತೀಚೆಗೆ ವಜ್ರದ ಆಭರಣಗಳು, ಫ್ಯಾನ್ಸಿ ಆಭರಣಗಳಾಗಿ ಗುರುತಿಸಿಕೊಂಡಿವೆ. ಈ ಕುರಿತಂತೆ ಇಲ್ಲಿದೆ ವರದಿ.
ಮಾನಿನಿಯರಿಗೆ ಪ್ರಿಯವಾಗುವಂತಹ ಬಗೆಬಗೆಯ ಕಂಟೆಂಪರರಿ ವಿನ್ಯಾಸದ ಮನಮೋಹಕ ಡೈಮಂಡ್ ಜ್ಯುವೆಲರಿಗಳು ಅಕ್ಷಯ ತೃತೀಯ ಸೀಸನ್ನಲ್ಲಿ ಆಭರಣ ಲೋಕಕ್ಕೆ ಎಂಟ್ರಿ ನೀಡಿವೆ. ಮಧ್ಯಮ ವರ್ಗದವರು ಹಾಗೂ ಕಾರ್ಪೋರೇಟ್ ಕ್ಷೇತ್ರದವರೂ ಖರೀದಿಸಿ, ಧರಿಸಬಹುದಾದ ಈ ಡೈಮಂಡ್ ಜ್ಯುವೆಲರಿಗಳು ಈ ಸೀಸನ್‌ನಲ್ಲಿ ಲಕ್ಷುರಿ ಜ್ಯುವೆಲರಿ ಕೆಟಗರಿಯಲ್ಲಿ ಪಾಪುಲರ್ ಆಗಿವೆ.
ಮಾಸದ ವಜ್ರಾಭರಣ ಪ್ರೇಮ
ವಜ್ರದ ನೆಕ್ಲೇಸ್, ಬಳೆಗಳು, ಪೆಂಡೆಂಟ್‌ಗಳು, ಚೈನ್‌ಗಳು ಹಾಗೂ ವಿವಿಧ ವಿನ್ಯಾಸಗಳ ಆಭರಣಗಳೆಂದರೇ ಯಾರಿಗೆ ಪ್ರೀತಿಯಿಲ್ಲ! ಇವು ಎವರ್‌ಗ್ರೀನ್ ಆಭರಣಗಳೆಂದೇ ಪ್ರಸಿದ್ಧಿ. ಅವುಗಳಲ್ಲಿ ಈ ಅಕ್ಷಯ ತೃತೀಯಾಗೆ ಮಧ್ಯಮ ವರ್ಗದವರೂ ಕೂಡ ಖರೀದಿಸಬಹುದಾದ ತೀರಾ ಸಿಂಪಲ್ ಡಿಸೈನ್‌ನ ಸ್ಟಡ್ಸ್, ಅನಿಮಲ್, ಬರ್ಡ್ಸ್ ಇಯರಿಂಗ್ಸ್ ಹಾಗೂ ಕಟ್ ಡೈಮಂಡ್ ರಿಂಗ್ಸ್ ಹಾಗೂ ಪೆಂಡೆಂಟ್‌ಗಳು ಸೇರಿದಂತೆ ಬಗೆಬಗೆಯ ಪುಟ್ಟ ಪುಟ್ಟ ಡಿಸೈನ್‌ನ ಡೈಮಂಡ್ ಜ್ಯುವೆಲರಿಗಳು ಈ ಕೆಟಗರಿಯಲ್ಲಿ ಬಂದಿವೆ ಎನ್ನುತ್ತಾರೆ ಜ್ಯುವೆಲರಿ ಶಾಪ್ವೊಂದರ ಮಾಲೀಕರು.
ಡೈಮಂಡ್‌ನಲ್ಲೂ ಆ್ಯಂಟಿಕ್ ಡಿಸೈನ್
ಐಷಾರಾಮಿ ಲುಕ್ ನೀಡುವಂತಹ ಆ್ಯಂಟಿಕ್ ಡೈಮಂಡ್ ಆಭರಣಗಳು ಪ್ರತಿ ಬಾರಿಯಂತೆ ಈ ಬಾರಿಯೂ ಬಂದಿವೆ. ಇವುಗಳ ಮೇಲೆ ಇನ್ವೆಸ್ಟ್ ಮಾಡುವ ಶ್ರೀಮಂತ ವರ್ಗದವರು ಇವನ್ನು ಹೆಚ್ಚಾಗಿ ಖರೀದಿಸುತ್ತಾರೆ ಎನ್ನುವ ಡೈಮಂಡ್ ಜ್ಯುವೆಲರಿ ಶಾಪ್‌ನ ಮ್ಯಾನೇಜರ್ ಪ್ರಕಾರ, ಇತ್ತೀಚೆಗೆ ವಜ್ರದ ಆಭರಣಗಳು, ಫ್ಯಾನ್ಸಿ ಆಭರಣಗಳಾಗಿ ಗುರುತಿಸಿಕೊಂಡಿವೆ ಎನ್ನುತ್ತಾರೆ.
ಕಂಟೆಂಪರರಿ ವಿನ್ಯಾಸದ ಡೈಮಂಡ್ ಜ್ಯುವೆಲರಿಗಳು
ನವೀನ ರೀತಿಯಲ್ಲಿ ವಿನ್ಯಾಸಗೊಳಿಸಿದ ವಜ್ರದ ಆಭರಣಗಳು ಈಗ ಕಾರ್ಪೋರೇಟ್ ವರ್ಗದ ಮಹಿಳೆಯರಿಗೆ ಪ್ರಿಯವಾಗುವಂತಹ ಸಿಂಪಲ್ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ.
ವಜ್ರಾಭರಣಗಳ ಪ್ರಿಯರ ಗಮನದಲ್ಲಿರಲಿ
- ವಜ್ರದ ಆಭರಣಗಳನ್ನು ಕೊಳ್ಳುವಾಗ ಕಟ್, ಕಲರ್, ಕ್ಲಾರಿಟಿ, ಆಕಾರವನ್ನು ಗುರುತಿಸಿ ಖರೀದಿಸಿ.
- ಎಕ್ಸ್‌ಪರ್ಟ್ಸ್ ಗೈಡ್‌ಲೈನ್ಸ್ ಪಡೆದುಕೊಂಡು ಖರೀದಿಸಿ.
- ಕೊಳ್ಳುವಾಗ ಬಿಲ್ ಮರೆಯದೇ ಪಡೆಯಿರಿ.